Health ATM: ಇನ್ನುಮುಂದೆ ATM ನಲ್ಲಿ ಚೆಕ್ ಮಾಡಿ ನಿಮ್ಮ ಆರೋಗ್ಯ, ಹೊಸ ಏಟಿಎಂ ಅನುಷ್ಠಾನ ಮಾಡಿದ ಸಿದ್ದರಾಮಯ್ಯ.
ಇದೀಗ ರಾಜ್ಯದ ಜನತೆಯ ಆರೋಗ್ಯ ತಪಾಸಣೆಗಾಗಿ ಕಾಂಗ್ರೆಸ್ ಸರ್ಕಾರ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.
Health ATM Facility: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರ ಪ್ರಾರಂಭ ಆದಾಗಿನಿಂದಲೂ ವಿವಿಧ ಯೋಜನೆಗಳು ಜಾರಿಯಾಗುತ್ತಿದೆ. ರಾಜ್ಯ ಸರ್ಕಾರ ರಾಜ್ಯದ ಬಡ ಜನರಿಗಾಗಿ ವಿವಿಧ ಸೌಲಭ್ಯವನ್ನು ನೀಡುತ್ತಿದೆ. ಅದರಲ್ಲೂ ರಾಜ್ಯದ ಬಡ ಜನರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಉಚಿತ ಆರೋಗ್ಯ ಸುರಕ್ಷಾ ಯೋಜನೆಗಳನ್ನು ಸರ್ಕಾರ ಜಾರಿ ಮಾಡುತ್ತಿದೆ.
ಇನ್ನು ಇತ್ತೀಚೆಗಷ್ಟೇ ಕಾಂಗ್ರೆಸ್ ಸರ್ಕಾರ (Conegress Government) ರಾಜ್ಯದಲ್ಲಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿತ್ತು. ಪ್ರತಿ ಮನೆ ಮನೆಯ ಬಾಗಿಲಿನಲ್ಲಿ ಚಿಕೆತ್ಸೆ ಪಡೆಯಲು ಸುಲಭವಾಗುವ ರೀತಿಯಲ್ಲಿ ಯೋಜನೆಯನ್ನು ರೂಪಿಸಿದೆ. ಇದೀಗ ಇದರ ಬೆನ್ನಲ್ಲೇ ರಾಜ್ಯದ ಜನತೆಯ ಆರೋಗ್ಯ ತಪಾಸಣೆಗಾಗಿ ಕಾಂಗ್ರೆಸ್ ಸರ್ಕಾರ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.
ರಾಜ್ಯದಲ್ಲಿ ‘ಆರೋಗ್ಯ ಮಿತ್ರ’ ಯೋಜನೆ ಆರಂಭ
ಇದೀಗ ಕಲಬುರಗಿ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಆರೋಗ್ಯ ಮಿತ್ರ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಕಲಬುರಗಿ ಜಿಲ್ಲೆಗೆ H.P ಎಂಟರ್ಪ್ರೈಸಸ್ ವತಿಯಿಂದ 25 Health ATM ಘಟಕಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಲೋಕಾರ್ಪಣೆ ಮಾಡಿದ್ದಾರೆ. ಜನರ ಆರೋಗ್ಯ ತಪಾಸಣೆಗಾಗಿ ರಾಜ್ಯದ ಮುಖ್ಯಮಂತಿ ಅವರು ಹೊಸ Health ATM ಅನ್ನು ಅನುಷ್ಠಾನಗೊಳಿಸಿದ್ದಾರೆ.
ಇನ್ನುಮುಂದೆ ATM ನಲ್ಲಿ ಚೆಕ್ ಮಾಡಿ ನಿಮ್ಮ ಆರೋಗ್ಯ
ಇನ್ನು ರಾಜ್ಯದಲ್ಲಿ ಎಲ್ಲ ಜನರಿಗೆ Health ATM ಲಭ್ಯವಾಗಲಿದೆ. ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಿ ತಂತ್ರಜಾನವಾಗಿದ್ದು, ಪ್ರಾಥಮಿಕ ಮತ್ತು ತಡೆಗಟ್ಟಬಹುದಾದ ಆರೋಗ್ಯ ಸೇವೆಗಳನ್ನು ಸುಲಭವಾಗೋ ಮತ್ತು ಕೈಗೆಟುಕುವ ದರದಲ್ಲಿ ಒದಗಿಸುತ್ತದೆ. ಕಡಿಮೆ ಸಮಯದಲ್ಲಿ ಪರೀಕ್ಷೆಗಳನ್ನು ಮಾಡುವ ಮೂಲಕ ಜನರ ಹಣ ಮತ್ತು ಸಮಯವನ್ನು ಉಳಿಸುತ್ತದೆ.
Health ATM ನ ಪ್ರಯೋಜನವೇನು..?
ಇನ್ನು ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಸಮಯದಲ್ಲಿ ಚಿಕೆತ್ಸೆ ನೀಡುವುದು ಈ ಹೊಸ ಯೋಜನೆಯ ಗುರಿಯಾಗಿದೆ. ನಿರಂತರ ಆರೋಗ್ಯ ತಪಾಸಣೆ ಮತ್ತು ಮೇಲ್ವಿಚಾರಣೆಯ ಮೂಲಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ತಡೆಗಟ್ಟಲು ಈ Health ATM ಸಹಾಯವಾಗಲಿದೆ. 10 ನಿಮಿಷಗಳಲ್ಲಿ 50 ಕ್ಕೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿ ಆರೋಗ್ಯಕ್ಕೆ ಬೇಕಾಗುವ ಆಹಾರದ ಮಾಹಿತಿಯನ್ನು ಈ Health ATM ನೀಡುತ್ತದೆ.