Health Insurance: Health Insurance ಮಾಡಿಸಿದವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಎಲ್ಲಾ ಆಸ್ಪತ್ರೆಯಲ್ಲಿ ಇನ್ಮುಂದೆ ಈ ಸೇವೆ ಲಭ್ಯ

Health Insurance ಮಾಡಿಸಿದವರು ಇನ್ನುಮುಂದೆ ಎಲ್ಲ ಆಸ್ಪತ್ರೆಯಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ

Health Insurance Rule Change: ಜನರು ತಮ್ಮ ಭವಿಷ್ಯಕ್ಕಾಗಿ ವಿಮಾ ಪಾಲಿಸಿಗಳನ್ನು ತೆರೆಯುತ್ತಾರೆ. ಆರೋಗ್ಯದ ರಕ್ಷಣೆಗೆ Health Insurance ಅಗತ್ಯವಾಗಿರುತ್ತದೆ. ಅನಿರೀಕ್ಷಿತವಾಗಿ ಅನಾರೋಗ್ಯ ಉಂಟಾದಾಗ ಆಸ್ಪತ್ರೆಯ ಖರ್ಚಿಗೆ ವಿಮಾ ಪಾಲಿಸಿಗಳು ಸಹಕಾರಿಯಾಗುತ್ತವೆ. ಸದ್ಯ ಜನರು Health Insurance ನಿಯಮದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ವಿಮಾ ಪಾಲಿಸಿಯಲ್ಲಿನ ಬದಲಾವಣೆಯು ಪಾಲಿಸಿದಾರರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲಿದೆ.

Health Insurance Policy
Image Credit: Businesstoday

Health Insurance ಮಾಡಿಸಿದವರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಪ್ರಸ್ತುತ ವಿಮಾ ಪಾಲಿಸಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ತರಲಾಗಿದೆ. ಈ ಹಿಂದೆ ವಿಮಾ ಕಂಪನಿಯ ನೆಟ್ ವರ್ಕ್ ನಲ್ಲಿರುವ ಆಸ್ಪತ್ರೆಗಳಲ್ಲಿ ಮಾತ್ರ ಪಾಲಿಸಿದಾರರು ನಗದು ರಹಿತ ಸೌಲಭ್ಯವನ್ನು ಪಡೆಯಬಹುದಿತ್ತು.

ವಿಮಾ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿರದ ಆಸ್ಪತ್ರೆಗಳಲ್ಲಿ ಚಿಕೆತ್ಸೆಗಾಗಿ ಪಾಲಿಸಿದಾರನು ತನ್ನ ಸ್ವಂತ ಹಣವನ್ನು ಖರ್ಚು ಮಾಡಬೇಕಿತ್ತು. ಸದ್ಯ ಈ ನಿಯಮದಲ್ಲಿ ಬಲವನೇ ತರಲಾಗಿದ್ದು, ಕ್ಯಾಶ್ ಲೆಸ್ ಎವೆರಿವೆರ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ಪಾಲಿಸಿದಾರರು ಇನ್ನುಮುಂದೆ ತಮ್ಮ ಆಯ್ಕೆಯನ್ ಯಾವುದೇ ಆಸ್ಪತ್ರೆಯಲ್ಲಿ ಚಿಕಿತೆಯನ್ನು ಪಡೆಯಬಹುದು.

Health Insurance Rule Change
Image Credit: The Economic Times

ಎಲ್ಲಾ ಆಸ್ಪತ್ರೆಯಲ್ಲಿ ಇನ್ಮುಂದೆ ಈ ಸೇವೆ ಲಭ್ಯ
General Insurance Council (GIC) ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳೊಂದಿಗೆ ಸಮಾಲೋಚಿಸಿ ಎಲ್ಲಾ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆಯನ್ನು ವಿಸ್ತರಿಸಲು ‘ಎಲ್ಲೆಡೆ ನಗದು ರಹಿತ’ ಉಪಕ್ರಮವನ್ನು ಪ್ರಾರಂಭಿಸಿದೆ. ಜನವರಿ 2024 ರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಲಭ್ಯವಾಗಲಿದೆ. ಈ ಸೌಲಭ್ಯದ ನಂತರ ಪಾಲಿಸಿದಾರನು ವಿಮಾ ಕಂಪನಿಯ ನೆಟ್ ವರ್ಕ್ಇಲ್ಲದಿರುವ ಆಸ್ಪತ್ರೆಗಳಲ್ಲಿಯೂ ನಗದು ರಹಿತ ಸೌಲಭ್ಯವನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group