Heart Attack: ಈ ರಕ್ತದ ಗುಂಪಿನವರಿಗೆ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು, ವೈದ್ಯಕೀಯ ಸಂಶೋಧನೆಯಿಂದ ಬಹಿರಂಗ

ಈ ರಕ್ತದ ಗುಂಪಿನವರಿಗೆ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು, ವೈದ್ಯಕೀಯ ಸಂಶೋಧನೆ

Heart Attack Reasons: ಇಂದಿನ ಜೀವನ ಶೈಲಿಯಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಹಜ ಆಗಿ ಹೋಗಿದೆ. ಅದರಲ್ಲೂ ಹೃದಯಾಘಾತದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಹೃದಯಾಘಾತ ಅನ್ನುವುದು ವಯಸ್ಯಾದವರಿಗೆ ಮಾತ್ರ ಸೀಮಿತವಾಗಿರದೆ ಮಕ್ಕಳಲ್ಲೂ ಹಾಗು ಹದಿಹರೆಯದವರಲ್ಲೂ ಕೂಡ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.

ಈ ಹೃದಯಾಘಾತ ಸಂಭವಿಸಲು ಈಗಿನ ಜೀವನ ಪದ್ಧತಿ ಕೂಡ ಕಾರಣ ಆಗಿದೆ. ಹೃದಯಾಘಾತ ಮಾತ್ರವಲ್ಲದೇ ಇನ್ನಿತರ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಮನುಷ್ಯನನ್ನು ಬಾಧಿಸುತ್ತಿದೆ. ಸದ್ಯ ಸಂಶೋಧಕರು ಯಾವ ಗುಂಪಿನ ರಕ್ತದವರಿಗೆ ಹೆಚ್ಚು ಹೃದಯಾಘಾತ ಆಗುತ್ತಿದೆ ಅನ್ನುವುದರ ಬಗ್ಗೆ ಸಂಶೋಧನೆಯನ್ನ ಮಾಡಿದ್ದು ಅದರ ವರದಿಯನ್ನ ಸಲ್ಲಿಸಿದ್ದಾರೆ.

Heart Attack
Image Credit: Froedtert

ಹೃದಯಾಘಾತ ಸಂಭವಿಸಲು ಪ್ರಮುಖ ಕಾರಣಗಳು

ಹೃದಯಾಘಾತ ಇದೆ ಕಾರಣಕ್ಕೆ ಸಂಭವಿಸಿದೆ ಎಂದು ಹೇಳಲು ಸಾಧ್ಯವಿಲ್ಲ, ಇಂದಿನ ಅವೈಜ್ಞಾನಿಕ ಜೀವನ ಕ್ರಮ, ಒತ್ತಡ, ವಯಸ್ಸು, ಅನಿಯಮಿತ ಆಹಾರ ಪದ್ಧತಿ, ಜಂಕ್​ ಫುಡ್​ಗಳ ಸೇವನೆ, ಮಸಾಲೆಯುಕ್ತ ಆಹಾರ ಇವೆಲ್ಲವೂ ಹೃದಾಯಾಘಾತ ಉಂಟಾಗಲು ಮುಖ್ಯ ಕಾರಣವಾಗಿದೆ. ಅಧಿಕ ರಕ್ತದೊತ್ತಡ ಕೂಡ ಹೃದಯಾಘಾತ ಉಂಟು ಮಾಡಬಲ್ಲದು.

ಅನವಶ್ಯಕ ಒತ್ತಡ ಕೂಡ ಹೃದಯದ ಆರೋಗ್ಯಕ್ಕೆ ಮಾರಕ. ಮಾನಸಿಕ ಒತ್ತಡ ಇವೆಲ್ಲವೂ ಹೃದಯದ ಸ್ವಾಸ್ಥ್ಯವನ್ನ ಹಾಳುಗೆಡಬಲ್ಲವು. ಹೃದಯಾಘಾತ, ಹೃದಯ ಸಂಬಂಧಿ ಖಾಯಿಲೆ ಅನ್ನೋದು ಒಂದು ಗಂಭೀರ ಸಮಸ್ಯೆಯಾಗಿದೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗಲಿಲ್ಲ ಅಂದರೆ ರೋಗಿ ಸಾಯೋದು ಖಚಿತ ಆಗಿರುತ್ತದೆ.

Join Nadunudi News WhatsApp Group

Heart Attack Reasons
Image Credit: Medlineplus

ಯಾವ ರಕ್ತ ಮಾದರಿ ಹೊಂದಿದವರಲ್ಲಿ ಹೃದಾಯಾಘಾತದ ಅಪಾಯ ಹೆಚ್ಚಿರುತ್ತದೆ?

ಸಂಶೋಧಕರು 4 ಲಕ್ಷ ಮಂದಿಯ ಮೇಲೆ ನಡೆಸಲಾದ ಅಧ್ಯಯನವನ್ನ ಆಧರಿಸಿದ ಈ ಫಲಿತಾಂಶವನ್ನ ಬಹಿರಂಗಪಡಿಸಿದ್ದಾರೆ. ಇದರನ್ವಯ ಒ ರಕ್ತ ಮಾದರಿಗೆ ಹೋಲಿಸಿದ್ರೆ ಎ ಹಾಗೂ ಬಿ ರಕ್ತ ಮಾದರಿ ಹೊಂದಿರುವವರಿಗೆ ಹೃದಾಯಾಘಾತದ ಅಪಾಯ 8 ಪ್ರತಿಶತ ಹೆಚ್ಚಿರುತ್ತೆ. ಅದರಲ್ಲೂ ಬಿ ರಕ್ತ ಮಾದರಿ ಹೊಂದಿರುವವರಿಗೆ ಹೃದಯಾಘಾತದ ಅಪಾಯ ಅತೀ ಹೆಚ್ಚು ಅನ್ನುತ್ತೆ ಅಧ್ಯಯನ.

ಅದೇ ರೀತಿ ಒ ರಕ್ತ ಮಾದರಿಗೆ ಹೋಲಿಸಿದ್ರೆ ಎ ರಕ್ತ ಮಾದರಿ ಹೊಂದಿರುವವರಿಗೆ ಹೃದಾಯಾಘಾತದ ಅಪಾಯ 11 ಪ್ರತಿಶತ ಹೆಚ್ಚಿರುತ್ತದೆ ಎಂದು ಸಂಶೋಧನೆಯ ಪ್ರಕಾರ ತಿಳಿದು ಬಂದಿದೆ. ಹಾಗಾಗಿ ಪ್ರತಿಯೊಬ್ಬರು ಕೂಡ ನಮ್ಮ ಜೀವನ ಶೈಲಿಯ ಬಗ್ಗೆ ಅಧಿಕ ಗಮನ ಇಟ್ಟುಕೊಳ್ಳುವುದು ಹಾಗು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ವಿಚಾರ ಆಗಿರುತ್ತದೆ.

Join Nadunudi News WhatsApp Group