Traffic Rule: ಸಂಚಾರಿ ನಿಯಮದಲ್ಲಿ ಮತ್ತೊಂದು ಬದಲಾವಣೆ, ಇನ್ಮುಂದೆ ಕಡ್ಡಾಯವಾಗಿ ಕಟ್ಟಬೇಕು 1000 ರೂ. ದಂಡ.

ಇನ್ಮುಂದೆ ಈ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಕಟ್ಟಬೇಕು 1000 ರೂ ದಂಡ

Helmet New Rule:  ದೇಶದಲ್ಲಿ ವಾಹನ ಸವಾರರಿಗೆ ಈ ನಡುವೆ ಹೊಸ ಹೊಸ ರೀತಿಯ ನಿಯಮಗಳು ಜಾರಿಗೆ ಬರುತ್ತಿವೆ. ಇದೀಗ ಬೈಕ್ ಸವಾರರಿಗೆ ಹೊಸ ನಿಯಮವೊಂದು ಜಾರಿಗೆ ಬಂದಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಈ ಹಿಂದಿನಿಂದಲೂ ಇದ್ದಂತಹ ನಿಯಮವಾಗಿದೆ.

ಇದೀಗ ಈ ಹೆಲ್ಮೆಟ್ ಧರಿಸುವ ವಿಚಾರದಲ್ಲಿ ಮತ್ತೊಂದು ನಿಯಮ ಸೇರಿಕೊಂಡಿದೆ. ಈ ಹಿಂದೆ Helmet ಧರಿಸದೇ ಇದ್ದರೆ ಮಾತ್ರ ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಹೆಲ್ಮೆಟ್ ಧರಿಸಿದರು ಕೂಡ ನೀವು ದಂಡ ತೆರಬೇಕಾಗುತ್ತದೆ. ಇನ್ನುಮುಂದೆ ನೀವು ದ್ವಿಚಕ್ರ ವಾಹನದಲ್ಲಿ ರಸ್ತೆಗಿಳಿಯುವ ಮುನ್ನ ಹೆಲ್ಮೆಟ್ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Traffic Rules Upda
Image Credit: The Hans India

ಸಂಚಾರಿ ನಿಯಮದಲ್ಲಿ ಮತ್ತೊಂದು ಬದಲಾವಣೆ
ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರು ಮತ್ತು ಅಧಿಕಾರಿಗಳು ಹಲವು ಹೊಸ ನಿಯಮಗಳನ್ನು ಪರಿಚಯಿಸುತ್ತಿದ್ದಾರೆ. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಿಯಂತ್ರಿಸಲು ಹೊಸ ಸಂಚಾರ ನಿಯಮಗಳನ್ನು ಅಳವಡಿಸಲಾಗುತ್ತಿದೆ. ನೀವು ಬೈಕ್ ನಲ್ಲಿ ಹೊರಗೆ ಹೋಗುತ್ತಿದ್ದರೆ ಈ ನಿಯಮದ ಬಗ್ಗೆ ತಿಳಿದುಕೊಳ್ಳಿ. ಈ ನಿಯಮವನ್ನು ಪಾಲಿಸದಿದ್ದರೆ ನೀವು 2,000 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ.

ಇನ್ಮುಂದೆ ಕಡ್ಡಾಯವಾಗಿ ಕಟ್ಟಬೇಕು 1000 ರೂ ದಂಡ
ಹೆಲ್ಮೆಟ್ ಅನ್ನು ತಲೆಗೆ ಮಾತ್ರ ಧರಿಸಿದ್ದರು ಸರಿಯಾಗಿ ಲಾಕ್ ಮಾಡದಿದ್ದಲ್ಲಿ ಸೆಕ್ಷನ್ 194 DMVA ಪ್ರಕಾರ 1000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. BIS ನೋಂದಾಯಿತ ಹೆಲ್ಮೆಟ್ ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಹಾಗೂ 1,000 ರೂಪಾಯಿ ದಂಡ ತೆರಬೇಕಾಗುತ್ತದೆ. ಒಟ್ಟು ದಂಡ 2,000 ಸಾವಿರ ಆಗಬಹುದು ಎಂದು ಹೇಳಲಾಗಿದೆ. ನೀವು ದ್ವಿಚಕ್ರ ವಾಹನದಲ್ಲಿ ಹೋಗುವ ಮುನ್ನ ಮೊದಲು ಹೆಲ್ಮೆಟ್ ಧರಿಸುವುದನ್ನು ಮರೆಯಬೇಡಿ ಹಾಗೆಯೆ ಧರಿಸಿದ ಹೆಲ್ಮೆಟ್ ಸರಿಯಾಗಿದೆಯೇ…? ಎನ್ನುವುದನ್ನು ಪರಿಶೀಲಿಸಿಕೊಳ್ಳಿ. ಈ ತಪ್ಪಿನೊಂದಿಗೆ ನೀವು ರಸ್ತೆಗಿಳಿದರೆ ಹೆಚ್ಚು ದಂಡವನ್ನು ಪಾವತಿಸಬೇಕಾಗುತ್ತದೆ ಎಚ್ಚರ.

Helmet New Rule
Image Credit: Delhibreakings

ಆನ್‌ ಲೈನ್‌ ನಲ್ಲಿ ಈ ರೀತಿಯಾಗಿ ಚಲನ್ ವೀಕ್ಷಿಸಬಹುದು
•ಮೊದಲಿಗೆ https://echallan.parivahan.gov.in/ ಗೆ ಹೋಗಿ.

Join Nadunudi News WhatsApp Group

•’ಚೆಕ್ ಆನ್‌ ಲೈನ್ ಸೇವೆ’ ಆಯ್ಕೆಗೆ ಹೋಗಿ.

•ನೀಡಿರುವ ಚೆಕ್ ಚಲನ್ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.

•ವಿನಂತಿಸಿದ ವಾಹನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಿ.

•ಕ್ಯಾಪ್ಚಾವನ್ನು ಭರ್ತಿ ಮಾಡಿ ಮತ್ತು ವಿವರಗಳನ್ನು ಪಡೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Helmet New Rule In India
Image Credit: Delhibreakings

Join Nadunudi News WhatsApp Group