Traffic Fine: ಬೈಕ್ ಚಲಾಯಿಸುವಾಗ ಈ ತಪ್ಪು ಮಾಡಿದ್ರೆ ಹೆಲ್ಮೆಟ್ ಇದ್ದರೂ ಕಟ್ಟಬೇಕು ದಂಡ, ಟ್ರಾಫಿಕ್ ನಿಯಮ

ಬೈಕ್ ಚಲಾಯಿಸುವಾಗ ಈ ತಪ್ಪು ಮಾಡಿದ್ರೆ ಹೆಲ್ಮೆಟ್ ಇದ್ದರೂ ಕಟ್ಟಬೇಕು ದಂಡ

Helmet Rule Latest Update: ರಸ್ತೆಗಳಲ್ಲಿ ಸಂಚರಿಸುವಾಗ ರಸ್ತೆ ನಿಯಮಗಳ ಬಗ್ಗೆ ತಿಳಿಯುವುದು ಅಗತ್ಯವಾಗಿರುತ್ತದೆ. ಟ್ರಾಫಿಕ್ ಸಮಸ್ಯೆಯ ನಿವಾರಣೆಗಾಗಿ ಹಾಗೂ ವಾಹನ ಸವಾರರ ಸುರಕ್ಷತೆಗಾಗಿ ಸಾರಿಗೆ ಇಲಾಖೆಯು ವಿವಿಧ ರೀತಿಯ ರಸ್ತೆ ಸಂಚಾರಿ ನಿಯಮವನ್ನು ಪರಿಚಯಿಸುತ್ತದೆ.

ಇನ್ನು ಟ್ರಾಫಿಕ್ ನಿಯಮಗಳು ಹೆಚ್ಚಾಗಿ ವಾಹನ ಸವಾರರಿಗೆ ಉಂಟಾಗುವ ಅಪಾಯವನ್ನು ತಡೆಯುವ ಉದ್ದೇಶದಿಂದಲೇ ರೂಪಿಸಲಾಗಿದೆ. ಸಾಮಾನ್ಯವಾಗಿ ರಸ್ತೆ ಅಪಘಾತವಾದಾಗ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ತೊಂದರೆ ಆಗಿರುವುದನ್ನು ನೀವು ಗಮನಿಸಿರಬಹುದು. ಹೀಗಾಗಿ ದ್ವಿಚಕ್ರ ವಾಹನ ಸವಾರರಿಗೆ ಟ್ರಾಫಿಕ್ ನಿಯಮಗಳು ಇನ್ನಷ್ಟು ಕಠಿಣವಾಗಿದೆ.

Helmet Rule Latest Update
Image Credit: DNA India

ದ್ವಿಚಕ್ರ  ವಾಹನದ ಜೊತೆ ರಸ್ತೆಗಿಳಿಯುವ ಮುನ್ನ ಈ ನಿಯಮ ತಿಳಿಯಿರಿ
ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಮುಖ್ಯವಾಗಿ Helmet ಧರಿಸುವುದು ಕಡ್ಡಾಯವಾಗಿದೆ. Helmet ಇಲ್ಲದೆ ದ್ವಿಚಕ್ರ ವಾಹನ ಸವಾರರು ರಸ್ತೆಗಿಳಿಯುವಂತಿಲ್ಲ. ದ್ವಿಚಕ್ರ ವಾಹನದಲ್ಲಿ ಇಬ್ಬರು ಸವಾರಿ ಮಾಡುತ್ತಿದ್ದರೆ, ಇಬ್ಬರು ಕೂಡ Helmet ಧರಿಸುವುದು ಕಡ್ಡಾಯವಾಗಿದೆ. ಇನ್ನು Helmet ಧರಿಸದೇ ಇರುವ ತಪ್ಪಿಗೆ ಟ್ರಾಫಿಕ್ ಪೊಲೀಸರು ದಂಡವನ್ನು ವಿಧಿಸುತ್ತಾರೆ. ಕೆಲವೊಂದು ಸಂದರ್ಭದಲ್ಲಿ Helmet ಧರಿಸಿದ್ದರೂ ಕೂಡ ದಂಡವನ್ನು ಪಾವತಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀವು Helmet ಧರಿಸಿದ್ದರು ಕೊಡ ದಂಡ ಪಾವತಿಸುವುದು ಅಗತ್ಯವಾಗಿದೆ.

ಬೈಕ್ ಚಲಾಯಿಸುವಾಗ ಈ ತಪ್ಪು ಮಾಡಿದ್ರೆ ಹೆಲ್ಮೆಟ್ ಇದ್ದರೂ ಕಟ್ಟಬೇಕು ದಂಡ
•ಕೇವಲ Helmet ಧರಿಸಿದ ಮಾತ್ರಕ್ಕೆ ನೀವು ಸಂಚಾರ ನಿಯಮವನ್ನು ಪಾಲನೆ ಮಾಡುತ್ತಿದ್ದೀರಾ ಎಂದಲ್ಲ. Helmet ಅನ್ನು ಸರಿಯಾಗಿ ಧರಿಸುವುದು ಸಹ ಮುಖ್ಯವಾಗಿದೆ. ಇಲ್ಲವಾದಲ್ಲಿ Helmet ಧರಿಸಿದರೂ 2000 ರೂ.ವರೆಗೆ ದಂಡ ವಿಧಿಸಬಹುದಾಗಿದೆ.

•ನೀವು Helmet ಅನ್ನು ಸರಿಯಾಗಿ ಧರಿಸದಿದ್ದರೆ ನಿಮಗೆ ದಂಡ ವಿಧಿಸುವುದಂತೂ ಖಂಡಿತ.  ಮೋಟಾರು ವಾಹನ ಕಾಯ್ದೆಯ ಪ್ರಕಾರ, ದ್ವಿಚಕ್ರ ವಾಹನ ಅಥವಾ ಸ್ಕೂಟರ್‌ ನಲ್ಲಿ Helmet ಸ್ಟ್ರಿಪ್ ಧರಿಸದಿದ್ದಲ್ಲಿ 1000 ರೂ. ಗಳ ಚಲನ್ ನೀಡಬಹುದು.

Join Nadunudi News WhatsApp Group

New Traffic Rules
Image Credit: Theauto

•ಈ ಚಲನ್ ಅನ್ನು 194D MVA ಅಡಿಯಲ್ಲಿ ಕಡಿತಗೊಳಿಸಲಾಗುತ್ತದೆ. ಅದೇ ಸಮಯದಲ್ಲಿ, ಚಾಲಕನು BIS ನೋಂದಾಯಿಸದ ಅಥವಾ ದೋಷಯುಕ್ತ Helmet ಅನ್ನು ಧರಿಸಿದ್ದರೆ, ನಂತರ 1000 ರೂಪಾಯಿಗಳ ಚಲನ್ ಅನ್ನು ಸಹ ಕಡಿತಗೊಳಿಸಬಹುದು.

•ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಬಿಐಎಸ್ ಪ್ರಮಾಣೀಕೃತ Helmet ಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

Join Nadunudi News WhatsApp Group