Two Wheeler Rules: ಮಕ್ಕಳನ್ನ ಬೈಕಿನಲ್ಲಿ ಕೂರಿಸಿಕೊಂಡು ಹೋಗುವ ಪೋಷಕರಿಗೆ ದಂಡ, ಹೊಸ ನಿಯಮ ಜಾರಿಗೆ ತಂದ ಹೈಕೋರ್ಟ್

ಮಕ್ಕಳನ್ನ ಬೈಕಿನಲ್ಲಿ ಕೂರಿಸಿಕೊಂಡು ಹೋಗುವ ಎಲ್ಲಾ ಪೋಷಕರಿಗೆ ಹೊಸ ನಿಯಮ

Helmet Compulsory For 9 Month Child: ರಸ್ತೆಯಲ್ಲಿಅಪಘಾತವಾದ ಸಮಯದಲ್ಲಿ ಬೈಕ್ ಅಪಘಾತಗಳು ಹೆಚ್ಚು ಭಯಾನಕವಾಗಿರುತ್ತದೆ. ಬೈಕ್ ಅಪಘಾತವಾದರೆ ಸವಾರರು ಬದುಕುಳಿದಿರುವ ಉದಾಹರಣೆ ತುಂಬಾ ಕಡಿಮೆ ಎನ್ನಬಹುದು. ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ನಿಯಮಗಳು ಕಟ್ಟುನಿಟ್ಟಾಗಿರುತ್ತದೆ.

ಸಾರಿಗೆ ಇಲಾಖೆ ದ್ವಿಚಕ್ರ ವಾಹನ ಸವಾರರಿಗೆ ಆಗಾಗ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಮಕ್ಕಳ ಜೊತೆ ಪ್ರಯಾಣ ಮಾಡುವವರಿಗೆ ವಿಶೇಷ ನಿಯಮ ಜಾರಿಗೊಳಿಸಲಾಗುತ್ತದೆ. ಸದ್ಯ ಹೈಕೋರ್ಟ್ ನಿಂದ ದ್ವಿಚಕ್ರ ವಾಹನದಲ್ಲಿ ಮಕ್ಕಳ ಜೊತೆ ಸವಾರಿ ಮಾಡುವವರಿಗೆ ಹೊಸ ಆದೇಶ ಹೊರಬಿದ್ದಿದೆ. ನೀವು ಮಕ್ಕಳ ಜೊತೆ ಪ್ರಯಾಣ ಮಾಡುವ ಮುನ್ನ ಈ ನಿಯಮವನ್ನು ತಿಳಿದುಕೊಂಡು ಪಾಲಿಸುವುದು ಉತ್ತಮ.

Helmet Compulsory For 9 Month Child
Image Credit: Livechennai

ಮಕ್ಕಳ ಜೊತೆ ಬೈಕ್ ನಲ್ಲಿ ಸವಾರಿ ಮಾಡುವವರಿಗೆ ಹೈಕೋರ್ಟ್ ನಿಂದ ಹೊಸ ಆದೇಶ
ದ್ವಿಚಕ್ರ ವಾಹನ ಸವಾರರು ಟ್ರಾಫಿಕ್ ನಿಯಮವನ್ನು ತಪ್ಪದೆ ಪಾಲಿಸಬೇಕಿದೆ. ಆದಾಗ್ಯೂ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಅಂತಹ ವಾಹನ ಸವಾರರ ವಿರುದ್ದ ಕ್ರಮ ಕೈಗೊಂಡು ವಾಹನವನ್ನು ಸೀಜ್ ಮಾಡಲಾಗುತ್ತದೆ. ವಿಶೇಷವಾಗಿ ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಹೋಗುವಾಗ ಸುರಕ್ಷತಾ ನಿಯಮವನ್ನು ಪಾಲಿಸುವುದು ತಪ್ಪಿದ್ದಲ್ಲಿ ಹೆಚ್ಚಿನ ಶಿಕ್ಷೆಗೆ ಗುರಿಯಾಗಬೇಕಾಗತ್ತದೆ. ಇನ್ನು 9 ತಿಂಗಳಿಂದ 4 ವರ್ಷ ವಯಸ್ಸಿನ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಸವಾರರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

New Helmet Rules In India
Image Credit: India Times

9 ತಿಂಗಳು ಮೇಲ್ಪಟ್ಟ ಎಲ್ಲಾ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ
ಸದ್ಯ ಹೈಕೋರ್ಟ್ 9 ತಿಂಗಳು ಮೇಲ್ಪಟ್ಟ ಎಲ್ಲಾ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಎಂದು ಮಹತ್ವದ ಆದೇಶ ಹೊರಡಿಸಿದೆ. ಮಗುವು ಸುರಕ್ಷತಾ ಹೆಲ್ಮೆಟ್ ಮತ್ತು ಕ್ರ್ಯಾಶ್ ಹೆಲ್ಮೆಟ್ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮಕ್ಕಳನ್ನು ಕರೆದುಕೊಂಡು ಹೋಗುವಾಗ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದ್ವಿಚಕ್ರ ವಾಹನಗಳು ಗಂಟೆಗೆ 40 ಕಿಲೋಮೀಟರ್ ವೇಗವನ್ನು ಮೀರಬಾರದು. ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಅವರ ಪ್ರಾಣಕ್ಕೆ ಅಪಾಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

Join Nadunudi News WhatsApp Group

Join Nadunudi News WhatsApp Group