Hero A2B: ಸಿಂಗಲ್ ಚಾರ್ಜ್ ನಲ್ಲಿ 70 Km ರೇಂಜ್, ಮಾರುಕಟ್ಟೆ ಬಂತು ಅಗ್ಗದ ಹೀರೋ ಸೈಕಲ್

ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ 70 ಕಿಲೋಮೀಟರ್‌ ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಸಿಕಲ್.

Hero A2B Electric Cycle Launch In India: ಮಾರುಕಟ್ಟೆಯಲ್ಲಿ ಈಗಾಗಲೇ Electric Car , Electric Bike , Electric Scooter ಗಳು ಮಾರುಕಟ್ಟೆಯಲ್ಲಿ ಪರಿಚಯವಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಪಟ್ಟಿಗೆ ಇದೀಗ Electric Bicycle ಕೂಡ ಸೇರಿಕೊಳ್ಳಲಿದೆ.

ಜನಪ್ರಿಯ ಕಂಪನಿಯಾದ HERO ಸದ್ಯ ಮಾರುಕಟ್ಟೆಯಲ್ಲಿ ವಿಶೇಷವಾದ Electric Cycle ಅನ್ನು ಪರಿಚಯಿಸಿದೆ. ಹೀರೋ ಕಂಪನಿಯು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಬ್ಯಾಟರಿಯಿಂದ ಚಲಿಸುವ ಬೈಸಿಕಲ್ ಅನ್ನು ಬಿಡುಗಡೆ ಮಾಡಲಿದೆ. ಇದೀಗ ನಾವು ಹೀರೊ ಕಂಪನಿಯ ಹೊಸ ಬೈಸಿಕಲ್ ನ ಬಗ್ಗೆ ಮಾಹಿತಿ ತಿಳಿದುಕೊಳೋಣ.

Hero A2B Electric Cycle
Image Credit: Original Source

 

Hero A2B Electric Cycle
ಹೀರೊ ತನ್ನ A2B Electric Cycle ಅನ್ನು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಈ ಬೈಸಿಕಲ್ 5.8Ah ಲಿಥಿಯಂ ಬ್ಯಾಟರಿಯನ್ನು ಹೊಂದಿದೆ, ಇದು 70 ಕಿಲೋಮೀಟರ್‌ ಗಳವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಬೈಸಿಕಲ್ ಚಾರ್ಜ್ ಆಗಲು ಸುಮಾರು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಹಾಗೆಯೆ ಈ ಬೈಸಿಕಲ್ ಗಂಟೆಗೆ 45 ಕಿಲೋಮೀಟರ್ ವೇಗದಲ್ಲಿ ಓಡಬಲ್ಲದು, ಏಕೆಂದರೆ ಇದು 300-ವ್ಯಾಟ್ BLDC ಮೋಟಾರ್ ಹೊಂದಿರುವುದು ವಿಶೇಷವಾಗಿದೆ. ಹೆಚ್ಚಿನ ಫೀಚರ್ ಇರುವಂತಹ ಈ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ನೀವು ಅತಿ ಅಗ್ಗದ ಬೆಳೆಗೆ ಖರೀದಿಸಬಹುದು. ಮಾರುಕಟ್ಟೆಯಲ್ಲಿ Hero A2B Electric Cycle ಎಷ್ಟು ಬೆಲೆ ಹೊಂದಿದೆ ಎನ್ನುವ ಬಗ್ಗೆ ತಿಳಿಯೋಣ.

Join Nadunudi News WhatsApp Group

Hero A2B Electric Cycle Price
Image Credit: dbest

70 ಕಿಲೋಮೀಟರ್‌ ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಸಿಕಲ್ ನ ಮಾರುಕಟ್ಟೆ ಬೆಲೆ ಎಷ್ಟಿದೆ..?
ಈ ಎಲೆಕ್ಟ್ರಿಕ್ ಬೈಸಿಕಲ್‌ನ ವೈಶಿಷ್ಟ್ಯಗಳ ಬಗ್ಗೆ ನಾವು ಮಾತನಾಡುವುದಾದರೆ, ಈ ಎಲೆಕ್ಟ್ರಿಕ್ ಬೈಸಿಕಲ್ ಸಣ್ಣ ಡಿಜಿಟಲ್ ವಿಮಾ ಕನ್ಸೋಲ್, ರಿಯಲ್ ಟೈಮ್ ಸ್ಪೀಡೋಮೀಟರ್, ಯುಎಸ್‌ ಬಿ ಚಾರ್ಜಿಂಗ್ ಪೋರ್ಟ್, ಡ್ಯುಯಲ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹೊಂದಾಣಿಕೆ ಸೀಟ್ ಸೇರಿದಂತೆ ಇನ್ನು ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Hero A2B Electric Cycle ನ ಬೆಲೆಯ ಬಗ್ಗೆ ಹೇಳುವುದಾದರೆ, ಮಾರುಕಟ್ಟೆಯಲ್ಲಿ ರೂ. 35000 ನಿಗದಿಪಡಿಸಲಾಗಿದೆ. 2024 ರ ಜುಲೈನಲ್ಲಿ ಕಂಪನಿಯು Hero A2B Electric Cycle ಅನ್ನು ಬಿಡುಗಡೆ ಮಾಡಬಹುದು. ಬಿಡುಗಡೆಗೊಂಡ ಬಳಿಕ ಹೀರೋ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ಲೈನ್ ಬುಕಿಂಗ್ ಮಾಡಿಕೊಳ್ಳಬಹುದು.

Join Nadunudi News WhatsApp Group