Maestro EV: ಮುಗಿಯಿತು ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಆಟ, ಬಂತು ಕಡಿಮೆ ಬೆಲೆಗೆ 320 Km ರೇಂಜ್ ನ ಸ್ಕೂಟರ್.

ಬಂತು ಕಡಿಮೆ ಬೆಲೆಗೆ 320 ಕಿಲೋಮೀಟರ್ ಈಳಗೇ ನೀಡುವ ಸ್ಕೂಟರ್

Hero Maestro Scooter: ದೇಶಿಯ ಮಾರುಕಟ್ಟೆಯಲ್ಲಿ Hero MotoCorp ವಿಭಿನ್ನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿದೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಬೇಡಿಕೆ ಹೆಚ್ಚುತ್ತಿದೆ.

ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಂಧನ ಚಾಲಿತ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ Hero ತನ್ನ ಹೊಚ್ಚ ಹೊಸ Hero Maestro Scooter ಅನ್ನು ಪರಿಚಯಿಸಿದೆ. ಇದೀಗ ನಾವು ಈ ಲೇಖನದಲ್ಲಿ ಕಡಿಮೆ ಖರ್ಚಿನಲ್ಲಿ ಲಭ್ಯವಾಗುವಂತಹ ಎಲೆಕ್ಟ್ರಿಕ್ ಸ್ಕೂಟರ್ ನ ಬಗ್ಗೆ ಮಾಹಿತಿ ತಿಳಿಯೋಣ.

Hero Maestro Scooter
Image Credit: Bkedekho

ಮುಗಿಯಿತು ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಆಟ
ಸದ್ಯ ಆಟೋ ವಲಯವನ್ನು ಬೆರಗುಗೊಳಿಸಲು ಹೀರೋ ತನ್ನ ಹೊಚ್ಚ ಹೊಸ Hero Maestro Scooter ಅನ್ನು ಪರಿಚಯಿಸಿದೆ. ಅತ್ಯುತ್ತಮ Electric Scooter ಗಳ ಪಟ್ಟಿಯಲ್ಲಿ ಇದೀಗ ನೂತನ Hero Maestro Scooter ಸೇರಿಕೊಳ್ಳಲಿದೆ. ಈ Electric ಮಾದರಿಯಲ್ಲಿ ನೀವು ವಿಶೇಷ ಶ್ರೇಣಿಯನ್ನು ನೋಡಬಹುದಾಗಿದೆ. ಒಂದೇ ಚಾರ್ಜ್‌ನಲ್ಲಿ 135KM ಗಳ ವರೆಗೆ ಪ್ರಯಾಣಿಸುವ ಸಾಮರ್ಥ್ಯ ಹೊಂದಿರುವ ಈ Scooter ದೀರ್ಘ ಪ್ರಯಾಣಕ್ಕೆ ಸೂಕ್ತವಾಗಿದೆ.

ಇನ್ನು Hero Maestro Scooter 1.2 kW ಮೋಟಾರ್ ಪವರ್ ಹೊಂದಿದೆ. ಸಂಪೂರ್ಣವಾಗಿ Charge ಮಾಡಲು ಇದು ಕೇವಲ 6 .5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಸ್ಕೂಟರ್ ನಲ್ಲಿ ಸುರಕ್ಷತೆಯಾಗಾಗಿ ಮುಂಭಾಗದಲ್ಲಿ ಡ್ರಮ್ ಬ್ರೇಕ್ ಆಯ್ಕೆಯನ್ನು ನೀಡಲಾಗಿದೆ. ಮಾರುಕಟ್ಟೆಯಲ್ಲಿ Hero Maestro ಸ್ಕೂಟರ್ 110cc ಎಲೆಕ್ಟ್ರಿಕ್ ಸ್ಕೂಟರ್ ಗಳೊಂದಿಗೆ ನೇರ ಸ್ಪರ್ಧೆಗಿಳಿಯಲಿದೆ.

Hero Maestro Scooter Price
Image Credit: Bkedekho

ಬಂತು ಕಡಿಮೆ ಬೆಲೆಗೆ 320 Km ರೇಂಜ್ ನ ಸ್ಕೂಟರ್
ಹೀರೋ ಮೆಸ್ಟ್ರೋ ಸ್ಕೂಟರ್ 110cc ಸ್ಕೂಟರ್‌ಗಳಿಗೂ ಪ್ರತಿಸ್ಪರ್ಧಿಯಾಗಬಲ್ಲ ಪ್ರಬಲ ಬ್ಯಾಟರಿ ಶಕ್ತಿಯನ್ನು ಹೊಂದಿದೆ. 320 ಕಿಲೋಮೀಟರ್ ಮೈಲೇಜ್ ಮತ್ತು ಗಂಟೆಗೆ 110 ಕಿಲೋಮೀಟರ್ ಗರಿಷ್ಠ ವೇಗವನ್ನು ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್ 2024 ರ ಅಂತ್ಯದ ವೇಳೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೀರೋ ಮೆಸ್ಟ್ರೋ ಎಲೆಕ್ಟ್ರಿಕ್ ಸ್ಕೂಟರ್‌ ನ ಅಧಿಕೃತ ಬಿಡುಗಡೆ ದಿನಾಂಕ ಮತ್ತು ಬೆಲೆಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಆದಾಗ್ಯೂ, ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 1.5 ಲಕ್ಷ ರೂ. ಆಗಿರಲಿದೆ ಎಂದು ಅಂದಾಜಿಸಲಾಗಿದೆ.

Join Nadunudi News WhatsApp Group

Hero Maestro Scooter Mileage
Image Credit: Bkedekho

Join Nadunudi News WhatsApp Group