Hero Splendor EV: ಸಿಂಗಲ್ ಚಾರ್ಜ್ ನಲ್ಲಿ 180 Km ಮೈಲೇಜ್, ಮಾರುಕಟ್ಟೆಗೆ ಅಗ್ಗದ ಬೆಲೆಗೆ ಬಂತು ಹೀರೋ ಸ್ಪ್ಲೆಂಡರ್ Ev

ಬರೋಬ್ಬರಿ 180km ಮೈಲೇಜ್ ನೊಂದಿಗೆ ಬರಲಿದೆ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್

Hero Splendor Electric Bike  Launch In India: Hero Splendor Electric Bike: ಇನ್ನು ದೇಶಿಯ ಮಾರುಕಟ್ಟೆಯಲ್ಲಿ Hero MotoCorp Company ಕಂಪನಿಯ ಬೈಕ್ ಗಳ ಮೇಲೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಹೆಚ್ಚುತ್ತಿದ್ದು ಮಾರಾಟ ಕೂಡ ಹೆಚ್ಚಾಗಿವೆ. ಹೊಸ ಹೊಸ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿ ಹೀರೋ ಕಂಪನಿ ತನ್ನ ಮಾರಾಟವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಇದೀಗ ಎಲೆಕ್ಟ್ರಿಕ್ ಬೈಕ್ ಗಳನ್ನೂ ಕೂಡ ಬಿಡುಗಡೆ ಮಾಡಿದೆ.

ಇನ್ನು ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಕಂಪನಿ  Splendor Bike ಅನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಕೈಗೆಟುಕುವ ದರದಲ್ಲಿ ಮಾಡಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. Hero Splendor EV ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ತಿಳಿಯೋಣ.

Hero Splendor Electric Bike  Launch In India
Image Credit: Drivespark

ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Hero Splendor EV
Hero MotoCorp ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ವ್ಯಾಪಕ ಶ್ರೇಣಿಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಪರಿಚಯಿಸಿದ್ದು, ಇದೀಗ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಿದ್ಧವಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಕಂಪನಿಯ ಆರಂಭಿಕ ಪ್ರವೇಶವು ಈಗಾಗಲೇ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದೆ. ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾದ ಸ್ಪ್ಲೆಂಡರ್ ಎಲೆಕ್ಟ್ರಿಕ್ ಮೇಕ್ ಓವರ್‌ ಗೆ ಒಳಗಾಗುತ್ತಿದೆ ಎಂದು ವರದಿಯಾಗಿದೆ.

Hero Splendor Electric Bike
ಸ್ಪ್ಲೆಂಡರ್‌ನ ಎಲೆಕ್ಟ್ರಿಕ್ ಆವೃತ್ತಿಯ ಸಂಭಾವ್ಯ ಉಡಾವಣೆಯು ನಾವೀನ್ಯತೆ ಮತ್ತು ಸುಸ್ಥಿರತೆಗೆ ಹೀರೋನ ಬದ್ಧತೆಗೆ ಸಾಕ್ಷಿಯಾಗಿದೆ. Hero MotoCorp ಇತ್ತೀಚೆಗೆ ತನ್ನ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರ್ಯಾಂಡ್ VIDA ಅನ್ನು ಅನಾವರಣಗೊಳಿಸಿತು. ಈ ಹೊಸ ಬ್ಯಾನರ್ ಅಡಿಯಲ್ಲಿ ಸ್ಪ್ಲೆಂಡರ್‌ ನ ಎಲೆಕ್ಟ್ರಿಕ್ ಮಾದರಿಯ ಬಿಡುಗಡೆಯ ಬಗ್ಗೆ ಸಿದ್ದಿ ವೈರಲ್ ಆಗುತ್ತಿದೆ. ಎಲೆಕ್ಟ್ರಿಕ್ ಸ್ಪ್ಲೆಂಡರ್ ಬಗ್ಗೆ ಅಧಿಕೃತ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಮೈಲೇಜ್ ಹಾಗೂ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಒಂದಿಷ್ಟು ಮಾಹಿತಿ ಸೋರಿಕೆಯಾಗಿದೆ.

Hero Splendor Electric Bike Price
Image Credit: Drivespark

ಬರೋಬ್ಬರಿ 180km ಮೈಲೇಜ್ ನೊಂದಿಗೆ ಬರಲಿದೆ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್
Hero Splendor Electric Bike 9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, 2 kWh ತುರ್ತು ಬ್ಯಾಕಪ್‌ ನಿಂದ ಪೂರಕವಾಗಿದೆ ಮತ್ತು ರೂಪಾಂತರವನ್ನು ಅವಲಂಬಿಸಿ ಪ್ರತಿ ಚಾರ್ಜ್‌ ಗೆ 120 ರಿಂದ 180 ಕಿಮೀ ಮೈಲೇಜ್ ಅನ್ನು ನೀಡಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗುತ್ತಿರುವ ಕಾರಣ ಸುಮಾರು 1 ರಿಂದ 1.5 ಲಕ್ಷ ಬೆಲೆಯಲ್ಲಿ Hero Splendor Electric ಬೈಕ್ ಲಾಂಚ್ ಆಗಲಿದೆ ಎಂದು ಅಂದಾಜಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group