Splendor 2.0: ಹೀರೋ ಸ್ಪ್ಲೆಂಡರ್ 2.0 ಬೈಕಿನ ವಿಶೇಷತೆ ಏನು…? ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್.

ಕಡಿಮೆ ಬೆಲೆಗೆ ಮತ್ತು ಆಕರ್ಷಕ ಮೈಲೇಜ್ ಕೊಡುವ ಹೀರೋ ಸ್ಪ್ಲೆಂಡರ್ ಬೈಕ್

Hero Splendor Plus Xtec 2.0 Bike Price And Feature: ಸದ್ಯ 2024 ರಲ್ಲಿ ವಿವಿಧ ಮಾದರಿಯ ಅತ್ಯಾಕರ್ಷಕ ವಾಹನಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈಗಾಗಲೇ ಹಲವು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಇನ್ನು ಹಲವಾರು ಮಾದರಿಯ ಬೈಕ್ ಗಳು ಮಾರುಕಟ್ಟೆಯನ್ನು ಪ್ರವೇಶಿಸುವುದು ಬಾಕಿ ಇದೆ. ಸದ್ಯ ಮಾರುಕಟ್ಟೆಯನ್ನು ಪ್ರವೇಶಿಸಲು Hero ಕಂಪನಿಯ ಈ ಶಕ್ತಿಶಾಲಿ ಬೈಕ್ ಕಾಯುತ್ತಿದೆ.

2024 ವರ್ಷಕ್ಕೆ ಹೊಸ ಆರಂಭದೊಂದಿಗೆ HERO ತನ್ನ Splendor 2 .0 ಅನ್ನು ಪರಿಚಯಿಸಲು ಕಾತುರದಿಂದ ಕಾಯುತ್ತಿದೆ. ನೀವು ಈ ವರ್ಷದಲ್ಲಿ ಹೊಸ ಬೈಕ್ ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ, ನೀವು ಸ್ವಲ್ಪ ಕಾದರೆ ಈ ಅತ್ಯಾಧುನಿಕ ಫೀಚರ್ ನ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ನಾವೀಗ ಈ ಲೇಖನದಲ್ಲಿ Hero Splendor Plus Xtec 2.0 ಬೈಕ್ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Hero Splendor Plus Bike Price
Image Credit: India Mart

ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್
ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು 30 ವರ್ಷಗಳಾಗಿದ್ದರು, ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಕಂಪನಿಯು ಸ್ಪ್ಲೆಂಡರ್‌ ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಬೈಕ್ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದ್ದು, ಗರಿಷ್ಠ ಮೈಲೇಜ್ ಕೂಡ ನೀಡಲಿದೆ. ಹೊಸ Hero Splendor Plus Xtec 2.0 ಮೋಟಾರ್‌ ಸೈಕಲ್ 82,911 ರೂ. ಗಳ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಇದು ಸಾಮಾನ್ಯ ಸ್ಪ್ಲೆಂಡರ್ Xtec ಮಾದರಿಗಿಂತ 3,000 ರೂ. ಹೆಚ್ಚು ಬೆಲೆಯನ್ನು ಹೊಂದಿದೆ. ಈ ಬೈಕ್ ನ ವೈಶಿಷ್ಟ್ಯಗಳ ಬಗ್ಗೆ ವಿವರ ಇಲ್ಲಿದೆ.

ಹೀರೋ ಸ್ಪ್ಲೆಂಡರ್ 2.0 ಬೈಕಿನ ವಿಶೇಷತೆ ಏನು…?
Hero Splendor Plus Xtec 2.0 ಬೈಕ್ ಎಲ್ಇಡಿ ಹೆಡ್ಲೈಟ್, ‘ಎಚ್’ ಆಕಾರದ ಎಲ್ಇಡಿ ಟೈಲ್ಯಾಂಪ್ ಅನ್ನು ಒಳಗೊಂಡಿರುವ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ಇದು ಮ್ಯಾಟ್ ಗ್ರೇ, ಗ್ಲೋಸ್ ಬ್ಲ್ಯಾಕ್ ಮತ್ತು ಗ್ಲೋಸ್ ರೆಡ್‌ ನಂತಹ ನವೀನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹೊಚ್ಚ ಹೊಸ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 ಟನ್‌ ಗಳಷ್ಟು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದು ಇಕೋ-ಇಂಡಿಕೇಟರ್, ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್, ಸರ್ವೀಸ್ ರಿಮೈಂಡರ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್‌ ನಂತಹ ಮಾಹಿತಿಯನ್ನು ಪ್ರದರ್ಶಿಸಲು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಒಳಗೊಂಡಿದೆ.

Hero Splendor Plus Xtec 2.0 Bike Price And Features
Image Credit: Bikedekho

ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 ಪವರ್‌ ಟ್ರೇನ್ ಕುರಿತು ಹೇಳುವುದಾದರೆ, ಇದು 100 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದು 7.09 ಬಿಹೆಚ್‌ಪಿ ಗರಿಷ್ಠ ಶಕ್ತಿ ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಇದು 4 ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು, ಪ್ರತಿ ಲೀಟರ್ ಗೆ 73 km ವರೆಗೆ ಮೈಲೇಜ್ ನೀಡಲಿದೆ. ನೀವು ನಿಮ್ಮ ಬಜೆಟ್ ಬೆಲೆಯಲ್ಲಿಯೇ ಅತ್ಯಾಧುನಿಕ ಫೀಚರ್ ಹಾಗೂ ಹೆಚ್ಚು ಮೈಲೇಜ್ ನೀಡುವ ಬೈಕ್ ಅನ್ನು ಖರೀದಿಸಬಹುದು.

Join Nadunudi News WhatsApp Group

Hero Splendor Plus Xtec 2.0 Bike Price
Image Credit: Bikedekho

Join Nadunudi News WhatsApp Group