Splendor 2.0: ಬಡವರಿಗಾಗಿ ಬಂತು ಸ್ಪ್ಲೆಂಡರ್ 2.0, ಕಡಿಮೆ ಬೆಲೆ ಮತ್ತು 80 Km ಮೈಲೇಜ್.

ಭರ್ಜರಿ 80 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಹೀರೋ ಬೈಕ್

Hero Splendor Plus Xtec 2.0 Bike: ಸದ್ಯ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಬೈಕ್ ಗಳು ಲಗ್ಗೆ ಇಡುತ್ತಿವೆ. ಅದರಲ್ಲೂ 2024 ವರ್ಷದಲ್ಲಿ ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸಲು ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ HERO ಸಂಪೂರ್ಣ ಸಿದ್ಧತೆಯಲ್ಲಿದೆ.

2024 ವರ್ಷಕ್ಕೆ ಹೊಸ ಆರಂಭದೊಂದಿಗೆ HERO ತನ್ನ Splendor 2 .0 ಅನ್ನು ಪರಿಚಯಿಸಲು ಕಾತುರದಿಂದ ಕಾಯುತ್ತಿದೆ. ಮೊದಲೇ ಮಾರುಕಟ್ಟೆಯಲ್ಲಿ ಹೀರೋ ಬೈಕ್ ಗಳು ಹೆಚ್ಚಿನ ಸೇಲ್ ಕಾಣುತ್ತಿದ್ದು, ಸದ್ಯದಲ್ಲೇ ಪರಿಚಯಗೊಳ್ಳಲಿರುವ Hero Splendor Plus Xtec 2.0 ಮಾರುಕಟ್ಟೆಯಲ್ಲಿ ದೂಳೆಬ್ಬಿಸಲಿದೆ. ನಾವೀಗ ಈ ಲೇಖನದಲ್ಲಿ Hero Splendor Plus Xtec 2.0 ಬೈಕ್ ನ ಫೀಚರ್, ಮೈಲೇಜ್, ಪ್ರೈಸ್ ನ ಬಗ್ಗೆ ಮಾಹಿತಿ ತಿಳಿಯೋಣ.

Hero Splendor Plus Xtec 2.0 Bike
Image Credit: Tazahindisamachar

ಬಡವರಿಗಾಗಿ ಬಂತು ಸ್ಪ್ಲೆಂಡರ್ 2.0
ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು 30 ವರ್ಷಗಳಾಗಿದ್ದರು, ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಕಂಪನಿಯು ಸ್ಪ್ಲೆಂಡರ್‌ ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಬೈಕ್ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದ್ದು, ಗರಿಷ್ಠ ಮೈಲೇಜ್ ಕೂಡ ನೀಡಲಿದೆ. ಹೊಸ Hero Splendor Plus Xtec 2.0 ಮೋಟಾರ್‌ ಸೈಕಲ್ 82,911 ರೂ. ಗಳ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಇದು ಸಾಮಾನ್ಯ ಸ್ಪ್ಲೆಂಡರ್ Xtec ಮಾದರಿಗಿಂತ 3,000 ರೂ. ಹೆಚ್ಚು ಬೆಲೆಯನ್ನು ಹೊಂದಿದೆ. ಈ ಬೈಕ್ ನ ವೈಶಿಷ್ಟ್ಯಗಳ ಬಗ್ಗೆ ವಿವರ ಇಲ್ಲಿದೆ.

ಕಡಿಮೆ ಬೆಲೆ ಮತ್ತು 80 Km ಮೈಲೇಜ್
Hero Splendor Plus Xtec 2.0 ಬೈಕ್ ಎಲ್ಇಡಿ ಹೆಡ್ಲೈಟ್, ‘ಎಚ್’ ಆಕಾರದ ಎಲ್ಇಡಿ ಟೈಲ್ಯಾಂಪ್ ಅನ್ನು ಒಳಗೊಂಡಿರುವ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ಇದು ಮ್ಯಾಟ್ ಗ್ರೇ, ಗ್ಲೋಸ್ ಬ್ಲ್ಯಾಕ್ ಮತ್ತು ಗ್ಲೋಸ್ ರೆಡ್‌ ನಂತಹ ನವೀನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹೊಚ್ಚ ಹೊಸ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 ಟನ್‌ ಗಳಷ್ಟು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದು ಇಕೋ-ಇಂಡಿಕೇಟರ್, ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್, ಸರ್ವೀಸ್ ರಿಮೈಂಡರ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್‌ ನಂತಹ ಮಾಹಿತಿಯನ್ನು ಪ್ರದರ್ಶಿಸಲು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಒಳಗೊಂಡಿದೆ.

Hero Splendor Plus Xtec 2.0 Bike Price
Image Credit: Original Source

ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 ಪವರ್‌ ಟ್ರೇನ್ ಕುರಿತು ಹೇಳುವುದಾದರೆ, ಇದು 100 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದು 7.09 ಬಿಹೆಚ್‌ಪಿ ಗರಿಷ್ಠ ಶಕ್ತಿ ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಇದು 4 ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು, 73 kmpl ವರೆಗೆ ಮೈಲೇಜ್ ನೀಡಲಿದೆ. ನೀವು ಕಡಿಮೆ ಬಜೆಟ್ ನಲ್ಲಿ ಅತ್ಯಾಧುನಿಕ ಫೀಚರ್ ಇರುವ Hero Splendor Plus Xtec 2.0 ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Join Nadunudi News WhatsApp Group

Hero Splendor Plus Xtec 2.0 Bike Mileage
Image Credit: Original Source

Join Nadunudi News WhatsApp Group