Hero Scooter: ಎಲ್ಲಾ ವಯಸ್ಸಿನ ಜನರಿಗೆ ಇದು ಬೆಸ್ಟ್ ಸ್ಕೂಟರ್, ಕಡಿಮೆ ಬೆಲೆ ಮತ್ತು ಅಧಿಕ ಮೈಲೇಜ್.

ಕಡಿಮೆ ಬೆಲೆಗೆ ಅಧಿಕ ಮೈಲೇಜ್ ನೀಡುವ ಬೈಕ್ ಗಳ ಬಗ್ಗೆ ಮಾಹಿತಿ

Hero Top Best 4 Scooter: ಭಾರತೀಯ ಆಟೋ ವಲಯದಲ್ಲಿ ವಿವಿಧ ಸ್ಕೂಟರ್ ತಯಾಕರ ಕಂಪನಿಗಳು ಹಲವು ಮಾದರಿಯ ಸ್ಕೂಟರ್ ಗಳನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿವೆ. ಇನ್ನು ಮಾರುಕಟ್ಟೆಯಲ್ಲಿ Hero ಕಂಪನಿಯ ಸ್ಕೂಟರ್ ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಮೈಲೇಜ್ ವಿಚಾರದಲ್ಲಿ ಇನ್ನಿತರ ಮಾದರಿಯ ಸ್ಕೂಟರ್ ಗಳನ್ನೂ ಹೀರೋ ಕಂಪನಿಯ ಸ್ಕೂಟರ್ ಹಿಂದಿಕ್ಕುತ್ತದೆ ಎನ್ನಬಹುದು. ಸದ್ಯ ಮಾರುಕಟ್ಟೆಯಲ್ಲಿ ಜನರ ಬಜೆಟ್ ಬೆಲೆಯಲ್ಲಿ ಈ ಟಾಪ್ ಬೆಸ್ಟ್ ಸ್ಕೂಟರ್ ಗಳು ಲಭ್ಯವಿದೆ.

Hero Xoom 110 Scooter
Image Credit: Hindustantimes

ಎಲ್ಲಾ ವಯಸ್ಸಿನ ಜನರಿಗೆ ಇದು ಬೆಸ್ಟ್ ಸ್ಕೂಟರ್, ಕಡಿಮೆ ಬೆಲೆ ಮತ್ತು ಅಧಿಕ ಮೈಲೇಜ್
•Hero Xoom 110 Scooter
ಮೊದಲಿಗೆ ಹೀರೋ Xoom 110 ಸ್ಕೂಟರ್ ಬಗ್ಗೆ ತಿಳಿಯೋಣ. ಇದರ ಎಕ್ಸ್ ಶೋ ರೂಂ ಬೆಲೆ 75,761 ರಿಂದ 84,400 ರೂ. ಇರುತ್ತದೆ. ಇದು 110.9 cc ಏರ್-ಕೂಲ್ಡ್, ಫ್ಯೂಯಲ್ ಇಂಜೆಕ್ಷನ್ ಎಂಜಿನ್ ಅನ್ನು ಪಡೆಯುತ್ತದೆ. ಈ ಎಂಜಿನ್ 8.15 PS ಗರಿಷ್ಠ ಶಕ್ತಿಯನ್ನು ಮತ್ತು 8.70 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೀರೋ ಜೂಮ್ 45 kmpl ಮೈಲೇಜ್ ನೀಡಲಿದೆ. ಹಾಗೆಯೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, ಪ್ರೊಜೆಕ್ಟರ್ LED ಹೆಡ್ ಲ್ಯಾಂಪ್, LED ಟೈಲ್ ಲ್ಯಾಂಪ್, USB ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ರೂಪಾಂತರವನ್ನು ಅವಲಂಬಿಸಿ (ವೇರಿಯಂಟ್‌ಗಳು) ಇದು ಸುರಕ್ಷತೆಗಾಗಿ ಡಿಸ್ಕ್ ಅಥವಾ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆಯುತ್ತದೆ.

Hero Pleasure Plus Scooter
Image Credit: Carandbike

•Hero Pleasure Plus Scooter
ಹೀರೋ ಪ್ಲೆಷರ್ ಪ್ಲಸ್ ಸ್ಕೂಟರ್ ರೂ.71,788 ರಿಂದ ರೂ.83,918 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 110.9 cc ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ 8.1 PS ಪವರ್ ಮತ್ತು 8.7 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಇದು 50 kmpl ವರೆಗೆ ಮೈಲೇಜ್ ನೀಡುತ್ತದೆ. ಹೀರೋ ಪ್ಲೆಷರ್ ಪ್ಲಸ್ ಸ್ಕೂಟರ್ ಪರ್ಲ್ ಸಿಲ್ವರ್ ವೈಟ್, ಪೋಲೆಸ್ಟಾರ್ ಬ್ಲೂ, ಸ್ಪೋರ್ಟ್ ರೆಡ್, ಮ್ಯಾಟ್ ಮೆಡ್ ರೆಡ್ ಸೇರಿದಂತೆ ವಿವಿಧ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಎಲೆಕ್ಟ್ರಿಕ್ ಸ್ಟಾರ್ಟರ್, ಎಲ್‌ಸಿಡಿ ಪರದೆ, ಬ್ಲೂಟೂತ್ ಕನೆಕ್ಟಿವಿಟಿ, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ ಲ್ಯಾಂಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Hero Destini Prime Scooter
Image Credit: Timesofindia

•Hero Destini Prime Scooter
ಹೀರೋ ಡೆಸ್ಟಿನಿ ಪ್ರೈಮ್ ಸ್ಕೂಟರ್ ಎಕ್ಸ್ ಶೋ ರೂಂ ಬೆಲೆ 76,518 ರೂ. ಆಗಿದೆ. ಇದು 125 cc ಸಿಂಗಲ್ ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು ಅದು 9.09 PS ಗರಿಷ್ಠ ಶಕ್ತಿ ಮತ್ತು 10.36 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 56 kmpl ವರೆಗೆ ಮೈಲೇಜ್ ನೀಡುತ್ತದೆ. ಹೀರೋ ಡೆಸ್ಟಿನಿ ಪ್ರೈಮ್ ಎಲ್ಇಡಿ DRL, ಹ್ಯಾಲೊಜೆನ್ ಹೆಡ್ಲ್ಯಾಂಪ್ಗಳು, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬೂಟ್ ಲೈಟ್, ಮೊಬೈಲ್ ಚಾರ್ಜಿಂಗ್ ಪೋರ್ಟ್, ಡ್ರಮ್ ಬ್ರೇಕ್ ಆಯ್ಕೆ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆಯುತ್ತದೆ. 115 ಕೆಜಿ ತೂಕದ ಈ ಸ್ಕೂಟರ್ 5 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

Join Nadunudi News WhatsApp Group

•Hero Destini 125 Scooter
ಹೀರೋ ಡೆಸ್ಟಿನಿ 125 ಸ್ಕೂಟರ್ ರೂ. 81,718 ರಿಂದ ರೂ.87,518 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಇದು 124.6 ಸಿಸಿ ಎಂಜಿನ್ ಅನ್ನು ಹೊಂದಿದ್ದು ಅದು 9.10 ಪಿಎಸ್ ಪವರ್ ಮತ್ತು 10.4 ಎನ್ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಇದು 50 kmpl ಮೈಲೇಜ್ ನೀಡುತ್ತದೆ ಮತ್ತು ಸುರಕ್ಷತೆಗಾಗಿ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆಯುತ್ತದೆ.

Hero Destini 125 Scooter
Image Credit: Zigwheels

Join Nadunudi News WhatsApp Group