Hero EV: New Year ಆಫರ್ ಘೋಷಣೆ ಮಾಡಿದ ಹೀರೋ, ಈ ಸ್ಕೂಟರ್ ಮೇಲೆ ಭರ್ಜರಿ 38000 ರೂ. ಡಿಸ್ಕೌಂಟ್.

ಹೊಸ ವರ್ಷದ ಆರಂಭಕ್ಕೆ ಅತಿ ಅಗ್ಗದ ಬೆಲೆಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಬಹುದಾಗಿದೆ.

Hero Vida V1 Electric Scooter New Year Offer: ದೇಶದ ಜನಪ್ರಿಯ ಕಂಪನಿಯಾದ Hero MotoCorp ಕಂಪನಿ ದ್ವಿಚಕ್ರ ವಾಹನ ಮಾರಾಟದಲ್ಲಿ ಹೆಚ್ಚಿನ ಬೇಡಿಕೆ ಪಡೆದಿದೆ. ಹೀರೋ ಕಂಪನಿಯ ಅನೇಕ ಬೈಕ್ ಗಳು ಹೊಸ ಹೊಸ ಮಾದರಿಯಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಹೀರೋ ಬೈಕ್ ಗಳ ಮೇಲಿನ ಬೇಡಿಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Hero Vida V1 Electric Scooter
Image Credit: Bikewale

New Year ಆಫರ್ ಘೋಷಣೆ ಮಾಡಿದ ಹೀರೋ
ಇನ್ನು ಹೀರೋ ಕಂಪನಿ ವಿಭಿನ್ನ ಮಾದರಿಯಾ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡಿವೆ. ಅದರಲ್ಲೂ ಹೀರೋ ಕಂಪನಿಯ Hero Vida V1 Electric Scooter ಮಾರುಕಟ್ಟೆಯಲ್ಲಿ ಬಾರಿ ಕ್ರೇಜ್ ಹುಟ್ಟಿಸಿದೆ. ಹೊಸ ವರ್ಷದಿಂದ ಎಲೆಕ್ಟ್ರಿಕ್ ಬೈಕ್ ಗಳ ಬೆಲೆ ಹೆಚ್ಚಳವಾಗುತ್ತದೆ ಎಂದು ಕಂಪನಿಗಳು ಘೋಷಿಸಿದೆ.

ಹೀಗಿರುವಾಗ ಈ New Year ನಲ್ಲಿ ಹೀರೋ ಕಂಪನಿಯು ಗ್ರಾಹಕರಿಗೆ ತನ್ನ Vida V1 Electric Scooter ಖರೀದಿಗೆ ಊಹೆಗೆ ಮೀರಿದ ಆಫರ್ ಅನ್ನು ನೀಡುತ್ತಿದೆ. ನೀವು ಹೊಸ ವರ್ಷದ ಆರಂಭಕ್ಕೆ ಅತಿ ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದಾಗಿದೆ. ನೀವು Vida V1 Electric Scooter ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ಕಂಪನಿ ನೀಡುವ ಆಫರ್ ನ ಬಗ್ಗೆ ಮಾಹಿತಿ ಇಲ್ಲಿದೆ.

Hero Vida V1 Electric Scooter Year End Offer
Image Credit: Motorbeam

ಈ ಸ್ಕೂಟರ್ ಮೇಲೆ ಭರ್ಜರಿ 38000 ರೂ ಡಿಸ್ಕೌಂಟ್
Hero Vida V1 ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಯಲ್ಲಿ ನೀವು ರೂ. 38,500 ವರೆಗೆ ಪ್ರಯೋಜನಗಳನ್ನು ಪಡೆಯುತ್ತೀರಿ. ನಗದು ರಿಯಾಯಿತಿಯ ಹೊರತಾಗಿ, ಕಂಪನಿಯು ಈ ಸ್ಕೂಟರ್‌ ನಲ್ಲಿ ವಾರಂಟಿ ಕವರ್ ಮತ್ತು ಇತರ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಇದರ ಪ್ರಯೋಜನವನ್ನು 31 ಡಿಸೆಂಬರ್ 2023 ರವರೆಗೆ ಪಡೆಯಬಹುದು.

ಕಂಪನಿಯು ನೀಡುವ ವರ್ಷದ ಆರಂಭದಲ್ಲಿ ರಿಯಾಯಿತಿಯಲ್ಲಿ, ನೀವು ರೂ. 8,259 ವರೆಗೆ ವಿಸ್ತೃತ ವಾರಂಟಿಯನ್ನು ಪಡೆಯುತ್ತೀರಿ. ಕಂಪನಿಯು ಈ ಸ್ಕೂಟರ್‌ ನಲ್ಲಿ ರೂ. 6,500 ನಗದು ರಿಯಾಯಿತಿ, ರೂ. 5,000 ವರೆಗೆ ವಿನಿಮಯ ಬೋನಸ್ ಮತ್ತು ರೂ. 7,500 ವರೆಗೆ ಲಾಯಲ್ಟಿ ಬೋನಸ್ ಅನ್ನು ನೀಡಿದೆ. ನೀವು Vida V1 Electric Scooter ಮಾದರಿಯನ್ನು ಈ ಇಯರ್ ಎಂಡ್ ನಲ್ಲಿ ಖರೀದಿಸಿದರೆ 38000 ರೂ. ಗಳನ್ನೂ ಉಳಿಸಬಹುದು.

Join Nadunudi News WhatsApp Group

Vida V1 Electric Scooter Price In India
Image Credit: ABP News

Vida V1 Electric Scooter
Vida V1 Electric Scooter ನಲ್ಲಿಶಕ್ತಿಯುತ ಬ್ಯಾಟರಿ ಪ್ಯಾಕ್‌ ಅನ್ನು ನೋಡಬಹುದು. ಒಂದೇ ಚಾರ್ಜ್‌ ನಲ್ಲಿ 110 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ ಕೇವಲ 3.2 ಸೆಕೆಂಡುಗಳಲ್ಲಿ 0 ರಿಂದ 40 ಕಿಲೋಮೀಟರ್‌ ಗಳನ್ನು ತಲುಪುತ್ತದೆ. ಇದರಲ್ಲಿ ನೀವು ಗಂಟೆಗೆ 80 ಕಿಲೋಮೀಟರ್ ವೇಗವನ್ನು ಪಡೆಯುತ್ತೀರಿ. ಇದು ಎರಡು ರೂಪಾಂತರಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 1.26 ಲಕ್ಷ ರೂ. ಹಾಗೆಯೆ ಟಾಪ್ ವೆರಿಯಂಟ್ ಅನ್ನು 1.46 ಲಕ್ಷ ಬೆಲೆಯಲ್ಲಿ ಪರಿಚಯಿಸಲಾಗಿದೆ.

Join Nadunudi News WhatsApp Group