Xtreme 125R: 66 Km ಮೈಲೇಜ್ ಮತ್ತು ಅತೀ ಕಡಿಮೆ ಬೆಲೆ, ಸಾಮಾನ್ಯ ಜನರಿಗಾಗಿ ಬಂತು ಇನ್ನೊಂದು 125cc ಬೈಕ್.

ಸಾಮಾನ್ಯ ಜನರಿಗಾಗಿ ಬಂತು ಇನ್ನೊಂದು ಹೀರೋ ಅಗ್ಗದ ಬೈಕ್, 66 Km ಮೈಲೇಜ್

Hero Xtreme 125R Bike Launch In India: ಪ್ರಸ್ತುತ ಮಾರುಕಟ್ಟೆಯಲ್ಲಿ ಯುವಕರ ನೆಚ್ಚಿನ ಬೈಕ್ ಗಳು ಲಾಂಚ್ ಆಗುತ್ತಿದೆ. ಅದರಲ್ಲೂ Hero ಕಂಪನಿಯು ಯುವಕರಿಗಾಗಿಯೇ ಸ್ಪೋರ್ಟಿ ವಿನ್ಯಾಸ ಹೊಂದಿರುವ ಹೊಸ ಹೊಸ ಮಾದರಿಯ ಬೈಕ್ ಗಳನ್ನೂ ಹಾಗೂ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಹೊಸ ವಿನ್ಯಾಸದ ಸಾಕಷ್ಟು ಬೈಕ್ ಗಳನ್ನೂ ಹೀರೋ ಪರಿಚಯಿಸಿದೆ.

ಇದೀಗ ಮಾರುಕಟ್ಟೆಯಲ್ಲಿ ನೂತನವಾಗಿ ಹೊಸ ಬೈಕ್ ಅನ್ನು ಲಾಂಚ್ ಮಾಡಿದೆ. ಇದೀಗ ಹೀರೋ ಹೊಸತಾಗಿ Xtreme 125R ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ನೂತನ ಮಾದರಿಯು ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಿದ್ದು, ಯುವಕರ ಹಾರ್ಟ್ ಫೆವರೇಟ್ ಬೈಕ್ ಆಗಲಿದೆ. ಈ ಬೈಕ್ ನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಇಲ್ಲಿದೆ.

Hero Xtreme 125R Bike Launch In India
Image Credit: BikeWale

ಸಾಮಾನ್ಯ ಜನರಿಗಿಗಾಗಿ ಬಂತು ಇನ್ನೊಂದು 125cc ಬೈಕ್
ಹೀರೋ ಕಂಪನಿಯು ಇದೀಗ ಹೊಸದಾಗಿ Xtreme 125R ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಹೊಸ ಆಯ್ಕೆಯನ್ನು ನೀಡಿದೆ. ನೀವು ಮಾರುಕಟ್ಟೆಯಲ್ಲಿ Xtreme 125R ಬೈಕ್ ನ ಎರಡು ರೂಪಾಂತರಗಳನ್ನು ನೋಡಬಹುದು. ಮಾರುಕಟ್ಟೆಯಲ್ಲಿ Xtreme 125R ಬೈಕ್ ನ Integrated braking system ರೂಪಾಂತರವು ರೂ. 95,000 ಬೆಲೆಯನ್ನು ಹೊಂದಿದ್ದರೆ, Antilock braking system ರೂಪಾಂತರವು 99,500 ರೂ. ಎಕ್ಸ್ ಶೋರೂಮ್ ಬೆಲೆಯಲ್ಲಿ ಪರಿಚಯವಾಗಿದೆ.

66 Km ಮೈಲೇಜ್ ಮತ್ತು ಅತೀ ಕಡಿಮೆ ಬೆಲೆ
ಹೀರೋ ಎಕ್ಸ್‌ ಟ್ರೀಮ್ 125ಆರ್ ಮೋಟಾರ್‌ ಸೈಕಲ್ 125 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ ನಿಂದ ಚಾಲಿತವಾಗಿದ್ದು, ಪ್ರತಿ ಲೀಟರ್ ಗೆ ಬರೋಬ್ಬರಿ 66km ಮೈಲೇಜ್ ನೀಡುವುದರಲ್ಲಿ ಎರಡು ಮಾತಿಲ್ಲ. ಇದು 11.5 ಬಿಹೆಚ್‌ಪಿ ಪೀಕ್ ಪವರ್ ಮತ್ತು 10.5 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್ ಬಾಕ್ಸ್ ಸಹ ಆಯ್ಕೆಯಾಗಿ ಲಭ್ಯವಿದೆ. ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಹೊಸ ಹೀರೋ ಎಕ್ಸ್‌ ಟ್ರೀಮ್ 125ಆರ್ ಮೋಟಾರ್‌ ಸೈಕಲ್ ಮುಂಭಾಗದ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಒಳಗೊಂಡಿದೆ.

Hero Xtreme 125R Bike Price
Image Credit: BikeWale

ಬ್ರೇಕಿಂಗ್ ಸಿಸ್ಟಮ್‌ ನಲ್ಲಿ ರೂಪಾಂತರಗಳು ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದ ಡ್ರಮ್ ಅಥವಾ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆಯಬಹುದು. ಜನಪ್ರಿಯ ಬೈಕ್ ತಯಾರಕ ಕಂಪನಿಯಾದ ಹೀರೋ ತನ್ನ Xtreme 125R ಬೈಕ್ ಅನ್ನು ಲಾಂಚ್ ಮಾಡುವ ಮೂಲಕ ಹೊಸ ವಾರ್ಷದ್ಲಲಿ ಹೊಸ ಬೈಕ್ ಖರೀದಿಸುವವರಿಗೆ ಹೊಸ ಆಯ್ಕೆಯನ್ನು ನೀಡಿದೆ. ಸ್ಪೋರ್ಟಿ ಲುಕ್ ಹೊಂದಿರುವ ಈ ಬೈಕ್ ಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ ಎನ್ನಬಹುದು.

Join Nadunudi News WhatsApp Group

Hero Xtreme 125R Bike Features
Image Credit: BikeWale

Join Nadunudi News WhatsApp Group