Aadhaar Verify: ಆಸ್ತಿ ನೋಂದಣಿ ನಿಯಮದಲ್ಲಿ ಬದಲಾವಣೆ ಮಾಡಿದ ಕೇಂದ್ರ, ಇನ್ಮುಂದೆ ಈ ಪರಿಶೀಲನೆ ಕಡ್ಡಾಯ .

ಇನ್ನುಮುಂದೆ ಆಸ್ತಿ ನೋಂದಣಿಗೆ ಆಧಾರ್ ಪರಿಶೀಲನೆ ಕಡ್ಡಾಯ, ಹೈಕೋರ್ಟ್ ಆದೇಶ.

High Court Verdict On Property Registration: ಸದ್ಯ ದೇಶದಲ್ಲಿ ವಿವಿಧ ರೀತಿಯ ವಂಚನೆಗಳು ನಡೆಯುತ್ತಿದೆ. ಅದರಲ್ಲೂ ಹೆಚ್ಚಾಗಿ ಇತ್ತೀಚಿಗೆ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಅನೇಕ ರೀತಿಯ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಿದೆ. ಸದ್ಯ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ವಂಚನೆಯ ಪ್ರಕರಣವೊಂದು ಹೈಕೋರ್ಟ್ ನ ಮೆಟ್ಟಿಲೇರಿದೆ. ಪ್ರಕರಣದ ತನಿಖೆ ನಡೆಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಹೈಕೋರ್ಟ್ ಆದೇಶದಂತೆಯೇ ಆಸ್ತಿ ನೋಂದಣಿಯಲ್ಲಿ ಇನ್ನುಮುಂದೆ ಹೊಸ ನಿಯಮ ಅನ್ವಯವಾಗಲಿದೆ.

High Court Verdict
Image Credit: Siasat

ಆಸ್ತಿ ನೋಂದಣಿಗೂ ಮುನ್ನ ಈ ಹೊಸ ನಿಯಮ ತಿಳಿಯಿರಿ
ದಾಖಲೆಗಳನ್ನು ನಕಲು ಮಾಡಿ ಭೂಮಿ ಮಾರಾಟ ಮಾಡಿರುವ ಪ್ರಕರಣವೊಂದು ಕೋರ್ಟ್ ಮೆಟ್ಟಿಲೇರಿದೆ. ಭೂಮಿ ಖರೀದಿಸಿದವರು ಭೂಮಿ ಮಾರಾಟ ಮಾಡಿದವರ ವಿರುದ್ಧ ವಂಚನೆಯ ಆರೋಪವನ್ನು ಮಾಡಿದ್ದಾರೆ.

ಅನಾಮಧೇಯ ವ್ಯಕ್ತಿ ಮಾರಾಟ ಮಾಡಿದ್ದಾರೆಂಬ ಆದರದ ಮೇಲೆ ತಮ್ಮ ಜಮೀನಿನ ಹಕ್ಕುಪತ್ರದಲ್ಲಿ (ಇಸಿ) ದಾಖಲಾಗಿರುವ ಹೆಸರನ್ನು ತೆಗೆದು ಹಾಕುವಂತೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿರುವ ಸಬ್ ರಿಜಿಸ್ಟ್ರಾರ್ ಕ್ರಮ ಪ್ರಶ್ನಿಸಿ ರಾಜೇಶ್ ತಿಮ್ಮಣ್ಣ ಉಮರಾಣಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಪೀಠ ಈ ಆದೇಶ ನೀಡಿದೆ.

High Court Verdict On Property Registration
Image Credit: Legaldev

ಇನ್ನುಮುಂದೆ ಆಸ್ತಿ ನೋಂದಣಿಗೆ ಆಧಾರ್ ಪರಿಶೀಲನೆ ಕಡ್ಡಾಯ
ಆಧಾರ್ ಆಕ್ಟ್- 2016 ರ ಪ್ರಕಾರ, UIDAI ನಲ್ಲಿ ನೋಂದಾಯಿಸಲಾದ ಯಾವುದೇ ಸೇವಾ ಪೂರೈಕೆದಾರರು ಆಧಾರ್ ಕಾರ್ಡ್ ಅನ್ನು ಹೊಂದಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಆಧರಿಸಿ ಅದರ ದೃಢೀಕರಣವನ್ನು ಪರಿಶೀಲಿಸಬೇಕು. ಆಧಾರ್ ಕಾಯ್ದೆ 2016 ರ ಪ್ರಕಾರ ಇನ್‌ ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಶನ್ ಯುಐಎಡಿಐ ನಲ್ಲಿ ನೋಂದಾಯಿಸಿಕೊಳ್ಳಬೇಕು.

ಇದಾದ ಬಳಿಕ ಯಾವುದೇ ವ್ಯಕ್ತಿ ಜಮೀನು ಅಥವಾ ಮನೆ ಮಾರಾಟಕ್ಕೆ ಯಾವುದೇ ದಾಖಲೆಗಳನ್ನು ನೋಂದಾಯಿಸಲು ಬಂದಾಗ ಮತ್ತು ಇತರ ಪ್ರಕರಣಗಳಲ್ಲಿ ಅವರು ನೀಡಿದ ಆಧಾರ್‌ ನ ಅಸಲಿತನವನ್ನು ಪರಿಶೀಲಿಸಬೇಕು ಮತ್ತು ಅಂತಹ ಪರಿಶೀಲನೆಯ ನಂತರವೇ ದಾಖಲೆಗಳನ್ನು ನೋಂದಾಯಿಸಬೇಕು ಎಂದು ಪೀಠವು ಆದೇಶಿಸಿತು. ಈ ಮೂಲಕ ಆಸ್ತಿನೊಂದಿಗೆ ಇನ್ನುಮುಂದೆ ವ್ಯಕ್ತಿಯ ಆಧಾರಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ.

Join Nadunudi News WhatsApp Group

Join Nadunudi News WhatsApp Group