Hijab Rule: ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಇಲ್ಲದಿದ್ದರೆ 10 ವರ್ಷ ಜೈಲು, ಈ ದೇಶದಲ್ಲಿ ಜಾರಿಗೆ ಬಂತು ಹೊಸ ಕಾನೂನು.

ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸದಿದ್ದರೆ 10 ವರ್ಷ ಜೈಲು ಶಿಕ್ಷೆ ನೀಡುವ ಕಾನೂನು.

Hijab Rule Latest Update: ಈ ಹಿಂದೆ Muslim ಯುವತಿಯರು Hijab ಧರಿಸಿ ಕಾಲೇಜಿಗೆ ಬರಬಾರದು ಎನ್ನುವ ವಿಷಯವು ಸಾಕಷ್ಟು ವಿವಾದಗಳಿಗೆ ಸಿಲುಕಿತ್ತು. Hijab ಹಾಗೂ ಕೇಸರಿ ಶಾಲು ವಿವಾದವು ಕರ್ನಾಟಕದ ಹೆಚ್ಚಿನ ಕಾಲೇಜುಗಳಿಗೆ ವ್ಯಾಪಿಸಿತ್ತು. ಕಳೆದ ವರ್ಷ ನಡೆದ ಈ ಹಿಜಾಬ್ ವಿವಾದದಿಂದಾಗಿ ಸಾಕಷ್ಟು ಪ್ರಕರಣಗಳು ಸಂಭವಿಸಿದೆ.

Hijab ಮತ್ತು ಕೇಸರಿ ಶಾಲು ಪ್ರತಿಭಟನೆ ದೊಡ್ಡ ಮಟ್ಟದ ಚರ್ಚೆಯನ್ನೇ ಹುಟ್ಟುಹಾಕಿತ್ತು. ಇನ್ನು ಕರ್ನಾಟಕ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಲು ತೀರ್ಮಾನಿಸಿದೆ. ಇದೀಗ ಹಿಜಾಬ್ ವಿಷಯವಾಗಿ ಇನ್ನೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಹೇಳಬಹುದು. ಹೌದು ಹಿಜಾಬ್ ಅನ್ನು ಸಾರ್ವಜನಿಕ ಸ್ಥಳದಲ್ಲಿ ಧರಿಸದಿದ್ದರೆ ಹತ್ತು ವರ್ಷ ಜೈಲು ಶಿಕ್ಷೆ ನೀಡುವ ಹೊಸ ಕಾನೂನು ಜಾರಿಗೆ ಬಂದಿದೆ.

Hijab Rule Latest Update
Image Credit: Bbc

ಹಿಜಾಬ್ ಧರಿಸುವ ಬಗ್ಗೆ ಮಹತ್ವದ ಮಾಹಿತಿ
ಕಳೆದ ವರ್ಷ ಹಿಜಾಬ್ ವಿವಾದದಿಂದಾಗಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ 22 ವರ್ಷದ ಮಹ್ಸಾ ಅಮಿನಿ ಹತ್ಯೆಯಾದ ಒಂದು ವರ್ಷದ ನಂತರ ಇದೀಗ ಹೊಸ ಮಸೂದೆ ಬಂದಿದೆ. ಸಂವಿಧಾನ ರಕ್ಷಕರಾಗಿ ಕಾರ್ಯನಿರ್ವಹಿಸುವ ಪಾದ್ರಿ ಸಂಸ್ಥೆಯ್ದ ಗಾರ್ಡಿಯನ್ ಕೌನ್ಸಿಲ್ ಈ ಮಸೂದೆಯನ್ನು ಇನ್ನು ಅನುಮೋದಿಸಬೇಕಿದೆ. ಹೊಸ ಮಸೂದೆಯು ಅನುಮೋದನೆ ಪಡೆದ ನಂತರ ಆರಂಭದಲ್ಲಿ ಮೂರು ವರ್ಷಗಳವರೆಗೆ ಜಾರಿಗೆ ಬರಲಿದೆ.

Iran has passed a law punishing those who do not wear the hijab in public with a 10-year prison sentence
Image Credit: Iranwire

ಹಿಜಾಬ್ ಧರಿಸದ ಮಹಿಳೆಯರಿಗೆ 10 ವರ್ಷ ಜೈಲು ಶಿಕ್ಷೆ
ಇದೀಗ ಇರಾನ್ ದೇಶ ಹಿಜಾಬ್ ಧರಿಸದೇ ಇರುವ ಮಹಿಳೆಯರಿಗೆ ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಇಸ್ಲಾಮಿಕ ಸಾಂಪ್ರದಾಯದ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸದೇ ಇರುವ ಮಹಿಳೆಯರಿಗೆ ಮತ್ತು ಅದನ್ನು ಬೆಂಬಲಿಸುವ ಜನರಿಗೆ ಭಾರಿ ದಂಡವನ್ನು ವಿಧಿಸಲು ಹೊಸ ಮಸೂದೆಯನ್ನು ಇರಾನ್ ಸಂಸತ್ತು ಜಾರಿಗೊಳಿಸಿದೆ.

ಹೊಸ ಮಸೂದೆಯ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸದೇ ಇರುವ ಮಹಿಳೆಯರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಹಿಜಾಬ್ ಧರಿಸದೇ ಸೇವೆ ಸಲ್ಲಿಸುತ್ತಿರುವ ವ್ಯಾಪಾರಿಗಳು ಈ ನಿಯಮ ಅನ್ವಯಿಸಲಿದೆ ಎಂದು ಇರಾನ್ ಸರ್ಕಾರ ಸೂಚನೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group