Home Loan: ಗೃಹಸಾಲ ಮಾಡುವ ಮುನ್ನ ಎಚ್ಚರ, ಈ ತಪ್ಪು ಮಾಡಿ ಮೋಸ ಹೋಗಬೇಡಿ.

ಮನೆಯನ್ನ ಕಟ್ಟಲು ಬ್ಯಾಂಕ್ ಸಾಲ ಮಾಡುವ ಮುನ್ನ ಕೆಲವು ನಿಯಮಗಳನ್ನ ಅವಶ್ಯಕವಾಗಿ ತಿಳಿದುಕೊಳ್ಳಿ.

Home Loan In Bank: ಸಾಮಾನ್ಯವಾಗಿ ಹೊಸ ಮನೆಯನ್ನು ಖರೀದಿಸಲು ಅಥವಾ ಕಟ್ಟುವ ಆಸೆ ಎಲ್ಲರಲ್ಲೂ ಇರುತ್ತದೆ. ಹಣಕಾಸಿನ ಸಮಸ್ಯೆಯಿಂದಾಗಿ ಅದೆಷ್ಟೋ ಜನರ ಆಸೆ ಹಾಗೆಯೇ ಉಳಿಯುತ್ತದೆ. ಹೊಸ ಮನೆಯನ್ನು ಕಟ್ಟಲು ಹಣಕಾಸು ಸಂಸ್ಥೆಗಳು ಗೃಹ ಸಾಲವನ್ನು (Home Loan) ನೀಡುತ್ತದೆ.

ಆದರೆ ನೀವು ಗೃಹ ಸಾಲವನ್ನು ಪಡೆಯುವ ಮೊದಲು ಕೆಲವು ನಿಯಮಗಳನ್ನು ಪಾಲಿಸಬೇಕು. ನೀವು ಗೃಹ ಸಾಲವನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ ಕೆಲವು ಮಾಹಿತಿಯ ಬಗ್ಗೆ ತಿಳಿದುಕೊಳ್ಳೋವುದು ಸೂಕ್ತ.

Before taking a loan from a bank, it is essential to know a lot of important information
Image Credit: bankofindia

ಗೃಹ ಸಾಲವನ್ನು ತೆಗೆದುಕೊಳ್ಳುವಾಗ ಗಮನಿಸಬೇಕಾದ ಅಂಶಗಳು
*ನೀವು ಗೃಹ ಸಾಲವನ್ನು ಪಡೆಯಲು ಬ್ಯಾಂಕ್ ಗಳು ನಿಮಗೆ ಸಿಬಿಲ್ (CIBILL) ಸ್ಕೋರ್ ಅನ್ನು ಗಮನಿಸುತ್ತಾರೆ.

*ನೀವು ಯಾವ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಬಯಸುವ ಮೊದಲು ವಿವಿಧ ಬ್ಯಾಂಕ್ ಗಳ ಬಡ್ಡಿ ದರವನ್ನು ತಿಳಿದುಕೊಳ್ಳಬೇಕು. ಅತಿ ಕಡಿಮೆ ಬಡ್ಡಿದರ ಯಾವ ಬ್ಯಾಂಕ್ ನಲ್ಲಿ ಇರುತ್ತದೆ ಎನ್ನುವುದನ್ನು ಗಮನಿಸಬೇಕು.

*ಸಾಲ ಪಡೆಯುವ ಮೊದಲು ಸಂಸ್ಕರಣಾ ಶುಲ್ಕವನ್ನು ಪರಿಶೀಲಿಸಬೇಕು. ಡಾಕ್ಯುಮೆಂಟೇಷನ್ ಮತ್ತು ಕಾನೂನು ಶುಲ್ಕಗಳು ಸೇರಿದಂತೆ ಸಾಕಷ್ಟು ಶುಲ್ಕಗಳನ್ನು ವಿಧಿಸಲಾಗುತ್ತದೆ. ಇದರ ಬಗ್ಗೆ ಗಮನ ವಹಿಸಬೇಕು.

Join Nadunudi News WhatsApp Group

It will be essential to know about the insurance of the home loan and the interest rate of the bank
Image Credit: agrimhfc

*ನಿಮ್ಮ ಸಾಲಕ್ಕೆ ಲೋನ್ ಕವರ್ ಟರ್ಮ್ ಅಶ್ಯುರೆನ್ಸ್ ಯೋಜನೆ ಇದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಬೇಕು. ಅಗತ್ಯಕ್ಕೆ ಅನುಗುಣವಾಗಿ ಲೋನ್ ಲಭ್ಯತೆಯ ಬಗ್ಗೆ ಕೂಡ ನಿಗಾ ವಹಿಸಬೇಕು.

*ಸಾಲದ ಅವಧಿ ಎಷ್ಟು ವರ್ಷ ಮತ್ತು ಸಾಲದ EMI ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು.

* ನಿಮ್ಮ ಸಾಲವು ಮುಕ್ತಾಯದ ಆಯ್ಕೆಯನ್ನು ಹೊಂದಿದೆಯೇ ಇಲ್ಲವೇ ಎನ್ನುದನ್ನು ಪರಿಶೀಲಿಸಬೇಕು.

*ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ತೆರಿಗೆ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಬೇಕು. ಗೃಹ ಸಾಲದ ಮೇಲೆ ಪಾವತಿಸಿದ ಅಸಲು ಮತ್ತು ಬಡ್ಡಿಯ ಮೇಲೆ ತೆರಿಗೆ ಕಡಿತಗಳು ಸಿಗಬಹುದು.

Join Nadunudi News WhatsApp Group