Home Loan: ಅವಧಿಗಿಂತ ಮೊದಲೇ ಹೋಂ ಲೋನ್ ಮುಚ್ಚಿದರೆ ಏನಾಗುತ್ತದೆ…? ಕಟ್ಟಬೇಕಾ ಅಧಿಕ ಶುಲ್ಕ.

ಸಮಯಕ್ಕಿಂತ ಮೊದಲು ಹೋಮ್ ಲೋನ್ ಮುಚ್ಚಿದರೆ ಏನಾಗುತ್ತದೆ, ಗೃಹ ಸಾಲವನ್ನು ಮುಚ್ಚಿದರೆ ಹೆಚ್ಚುವರಿ ಶುಲ್ಕ ಕಟ್ಟಬೇಕೇ..?

Home Loan Closing Charges: ಜನಸಾಮಾನ್ಯರ ಸ್ವಂತ ಮನೆ ನಿರ್ಮಾಣದ ಕನಸಿಗೆ ಗೃಹಸಾಲ ಒಂದು ರೀತಿಯಲ್ಲಿ ಸಹಾಯವಾಗುತ್ತದೆ ಎನ್ನಬಹುದು. ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಹಿನ್ನಲೆ ಸಾಲ ಪಡೆಯಲು ಮುಂದಾಗುವುದು ಸಹಜ.

ದೇಶದ ಕೋಟ್ಯಂತರ ಜನರು ತಮ್ಮ ಕನಸನ್ನು ಗೃಹ ಸಾಲದ ಪಡೆಯುವ ಮೂಲಕ ನನಸು ಮಾಡಿಕೊಂಡಿದ್ದಾರೆ. ಇನ್ನು ಜನರ ಕನಸನ್ನು ನನಸು ಮಾಡಲು ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು Home Loan ನಿಡುತ್ತದೆ.

Home Loan Closing charges
Image Credit: moneycontrol

ಗೃಹ ಸಾಲ ಪಡೆಯುವಾಗ ಶುಲ್ಕಗಳ ಬಗ್ಗೆ ಗಮನವಿರಲಿ
ನೀವು ಯಾವುದೇ Bank ನಲ್ಲಿ ಸಾಲ ಪಡೆಯಲು ಬಯಸುವ ಮೊದಲು ವಿವಿಧ ಬ್ಯಾಂಕ್ ಗಳ ಬಡ್ಡಿದರದ ಬಗ್ಗೆ ಗಮನ ಹರಿಸುವುದು ಉತ್ತಮ. ಇನ್ನು ಬಡ್ಡಿದರದ ಜೊತೆಗೆ ಗೃಹಸಾಲ ಪಡೆಯುವ ಮೊದಲು ಸಂಸ್ಕರಣಾ ಶುಲ್ಕವನ್ನು ಪರಿಶೀಲಿಸಬೇಕು. ಡಾಕ್ಯುಮೆಂಟೇಷನ್ ಮತ್ತು ಕಾನೂನು ಶುಲ್ಕಗಳು ಸೇರಿದಂತೆ ಸಾಕಷ್ಟು ಶುಲ್ಕಗಳನ್ನು ವಿಧಿಸಲಾಗುತ್ತದೆ. ಗೃಹ ಸಾಲದ ಮೇಲಿನ ಬಡ್ಡಿದರವು ವಾರ್ಷಿಕ 8 % ದಿಂದ ಪ್ರಾರಂಭವಾಗುತ್ತದೆ.

ಸಮಯಕ್ಕಿಂತ ಮೊದಲು ಹೋಮ್ ಲೋನ್ ಮುಚ್ಚಿದರೆ ಏನಾಗುತ್ತದೆ
ಗೃಹ ಸಾಲದ ಮೇಲಿನ ಬಡ್ಡಿದರವು ಮಾಸಿಕ EMI ನ ಮೇಲೆ ಹೆಚ್ಚಿನ ಪ್ರಭಾವನ್ನು ಬೀರುತ್ತದೆ ಎನ್ನುವ ಬಗ್ಗೆ ಎಲ್ಲರಿಗೆ ಅರಿವಿದೆ. ಗೃಹ ಸಾಲವನ್ನು ಪಡೆಯುವಾಗ ಎಷ್ಟು ಎಚ್ಚರಿಕೆ ವಹಿಸಿದರು ಅದು ಕಡಿಮೆಯೇ. ಗೃಹ ಸಾಲ ಪಡೆದವರಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತದೆ. ಗೃಹ ಸಾಲವನ್ನು ಮುಚ್ಚಿದರೆ ಹೆಚ್ಚುವರಿ ಶುಲ್ಕ ಕಟ್ಟಬೇಕೇ..? ಎನ್ನುವ ಬಗ್ಗೆ ಎಲ್ಲರಿಗು ಪ್ರಶ್ನೆ ಮೂಡಿಸರುವುದು ಸಹಜ. ನೀವು ಗೃಹ ಸಾಲವನ್ನು ನಿಗದಿತ ಸಮಯದೊಳಗೆ ಮುಚ್ಚಿದರೆ ಬ್ಯಾಂಕ್ ನಿಮ್ಮ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಗೃಹ ಸಾಲವನ್ನು ಮುಚ್ಚಿದರೆ ಹೆಚ್ಚುವರಿ ಶುಲ್ಕ ಕಟ್ಟಬೇಕೇ..?
ಯಾವುದೇ ಬ್ಯಾಂಕ್ ಗಳು ಸಾಲಗಾರರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೋಮ್ ಲೋನ್ ಅನ್ನು ಮುಚ್ಚಲಿ ಎಂದು ಬಯಸುವುದಿಲ್ಲ. ಏಕೆಂದರೆ ನಿಗದಿತ ಸಮಯದೊಳ್ಹೆ ಸಾಲದ ಮರುಪಾವತಿ ಆದರೆ ಬ್ಯಾಂಕ್ ಗೆ ಬಡ್ಡಿಯಿಂದ ನಷ್ಟ ಉಂಟಾಗುತ್ತದೆ. ಸಾಮಯಕ್ಕಿಂತ ಮೊದಲು ಗೃಹ ಸಾಲವನ್ನು ಮುಚ್ಚಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆಯೇ ಎನ್ನುವ ಭೀತಿ ಎಲ್ಲರಲೂ ಇದೆ.

Join Nadunudi News WhatsApp Group

home loan closure details
Image Credit: caclubindia

ಗೃಹ ಸಾಲದ ಶುಲ್ಕಕ್ಕೆ RBI ನಿಯಮವೇನು..?
ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆ ಪ್ರಕಾರ, ಬ್ಯಾಂಕ್‌ ಗಳು ತಮ್ಮ ಗ್ರಾಹಕರಿಗೆ ಸಮಯಕ್ಕೆ ಮುಂಚಿತವಾಗಿ ಸಾಲವನ್ನು ಮರುಪಾವತಿಸಲು ಸಹಾಯ ಮಾಡಬೇಕು ಮತ್ತು ಫ್ಲೋಟಿಂಗ್ ದರದ ಅವಧಿಯ ಸಾಲದ ಮೇಲೆ ಯಾವುದೇ ದಂಡವನ್ನು ವಿಧಿಸಬಾರದು.

ಇದರ ಅಡಿಯಲ್ಲಿ, ಯಾವುದೇ ವ್ಯಕ್ತಿಯು ಫ್ಲೋಟಿಂಗ್ ದರದ ಅವಧಿಯ ಸಾಲವನ್ನು ಮುಚ್ಚಲು ಬಯಸಿದರೆ, ಬ್ಯಾಂಕ್‌ ಗಳು ಆತನ ಮೇಲೆ ಯಾವುದೇ ದಂಡವನ್ನು ವಿಧಿಸುವಂತಿಲ್ಲ ಎಂದು ಬ್ಯಾಂಕ್‌ ಗಳಿಗೆ RBI ಆದೇಶ ಹೊರಡಿಸಿದೆ. ಹೆಚ್ಚಿನ ಗೃಹ ಸಾಲಗಳನ್ನು ಫ್ಲೋಟಿಂಗ್ ದರಗಳಲ್ಲಿ ನೀಡಲಾಗುತ್ತದೆ, ಅಂದರೆ ನೀವು ಯಾವುದೇ ಮುಚ್ಚುವ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

Join Nadunudi News WhatsApp Group