Home Loan: 9 ಲಕ್ಷದ ತನಕ ಯಾವುದೇ ಬಡ್ಡಿ ಕಟ್ಟುವ ಅಗತ್ಯ ಇಲ್ಲ, ಗೃಹಸಾಲ ಮಾಡುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್.

ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ ರಿಯಾಯಿತಿ ಪಡೆಯಲು ಕೇಂದ್ರದ ಹೊಸ ಯೋಜನೆ.

Home Loan Latest Update: ದೇಶದಲ್ಲಿ ಹೆಚ್ಚಿನ ಜನರು ಸ್ವಂತ ಮನೆ ನಿರ್ಮಾಣದ ಕನಸನ್ನು ಹೊಂದಿರುತ್ತಾರೆ. ಈಗಾಗಲೇ ಬಡ ಜನತೆಗಾಗಿ Pradhan Mantri Awas ಯೋಜನೆ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ದೇಶದ ನಿರ್ಗತಿಕರಿಗಾಗಿ ಆರ್ಥಿಕವಾಗಿ ನೆರವಾಗಲು ಒಂದೊಂದೇ ಯೋಜನೆಯನ್ನು ಪರಿಚಯಿಸುತ್ತ ಬಡವರು ಆರ್ಥಿಕವಾಗಿ ಸ್ಥಿರತೆ ಕಾಣಲು ಸಹಾಯ ಮಾಡುತ್ತಿದೆ. ಇದೀಗ ನಗರಗಳಲ್ಲಿ ಸ್ವಂತ ಮನೆ ಖರೀದಿಸುವ ಕೆಳ ಮಧ್ಯಮ ವರ್ಗದ ಜನರ ಕನಸು ಶೀಘ್ರದಲ್ಲೇ ನನಸಾಗಬಹುದು.

Up to Rs 9 lakh rebate on Rs 50 lakh home loan
Image Credit: Axisbank

ಗೃಹಸಾಲ ಮಾಡುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಇದೀಗ ಕೇಂದ್ರ ಸರ್ಕಾರ ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸು ಮಾಡಲು ಕೆಳ ಮಧ್ಯಮ ವರ್ಗದ ಜನರಿಗೆ ಹೊಸ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನೆಡೆಸುತ್ತಿದೆ. ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಸರ್ಕಾರ Home Loan ಸಬ್ಸಿಡಿಯನ್ನು ಜಾರಿಗೆ ತರಲು ಮುಂದಾಗಿದೆ.

9 ಲಕ್ಷದ ತನಕ ಯಾವುದೇ ಬಡ್ಡಿ ಕಟ್ಟುವ ಅಗತ್ಯ ಇಲ್ಲ
ಮೋದಿ ಸರ್ಕಾರ Home Loan ಸಬ್ಸಿಡಿಗಾಗಿ 60,000 ಕೋಟಿ ಖರ್ಚು ಮಾಡ ಲು ಮುಂದಾಗಿದೆ. ಇದೀಗ ಈ ಯೋಜನೆಯಲ್ಲಿ 50 ಲಕ್ಷದ ವರೆಗಿನ ಸಾಲದ ಮೇಲಿನ ಬಡ್ಡಿಯಲ್ಲಿ 9 ಲಕ್ಷದ ವರೆಗೆ ರಿಯಾಯಿತಿಯನ್ನ ಪಡೆಯಬಹುದಾಗಿದೆ. ಮುಂದಿನ 5 ವರ್ಷಗಳ ವರೆಗೆ ಗೃಹ ಸಾಲಗಳ ಮೇಲೆ ಸರ್ಕಾರವು ಬಡ್ಡಿ ರಿಯಾಯಿತಿಯನ್ನು ನೀಡುತ್ತದೆ. ಸುಮಾರು 25 ಲಕ್ಷ ಗೃಹ ಸಾಲ ಪಡೆದ ಗ್ರಾಹಕರು ಈ ಯೋಜನೆಯ ಲಾಭ ಪಡೆಯುವ ಸಾಧ್ಯತೆ ಇದೆ.

Home Loan Latest Update
Image Credit: Hindustantimes

ಈ ರೀತಿಯಾಗಿ ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತೀರಿ
ಮುಂದಿನ ದಿನಗಳಲ್ಲಿ ಕೆಲವು ಬ್ಯಾಂಕ್ ಗಳು ಈ ಯೋಜನೆಯನ್ನು ಪ್ರಾರಂಭಿಸಬಹುದು. ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ 20 ವರ್ಷಗಳ ಅವಧಿಗೆ 50 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಗೃಹ ಸಾಲವನ್ನು ಪಡೆದರೆ ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ 3 ರಿಂದ 6.5 ಪ್ರತಿಶತದಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ. ಈ ಯೋಜನೆಯು 2028 ರ ವರೆಗೆ ಜಾರಿಯಲ್ಲಿರಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ.

Join Nadunudi News WhatsApp Group

Join Nadunudi News WhatsApp Group