ಮನೆ ಖರೀದಿಸುವ ಎಲ್ಲರಿಗೂ ಸಿಗಲಿದೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಕೇಂದ್ರ ಸರ್ಕಾರದ ಹೊಸ ಯೋಜನೆ ನೋಡಿ.

ಜೀವನದಲ್ಲಿ ಮನೆ ಕಟ್ಟುವ ಮತ್ತು ಮನೆಯನ್ನ ಖರೀದಿ ಮಾಡುವ ಬಯಕೆ ಎಲ್ಲರಿಗೂ ಇದ್ದೆ ಇರುತ್ತದೆ. ಹೌದು ಜೀವನದಲ್ಲಿ ಒಮ್ಮೆಯಾದರೂ ತಮಗಿಷ್ಟವಾದ ಮನೆಯನ್ನ ಖರೀದಿ ಮಾಡಬೇಕು ಅನ್ನುವ ಬಯಕೆ ಎಲ್ಲರಿಗೂ ಇರುತ್ತದೆ, ಆದರೆ ಹಣವಿಲ್ಲದ ಕಾರಣ ತಮ್ಮ ಆಸೆಯನ್ನ ಬಿಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ತಿಳಿದಿದೆ. ಇನ್ನು ಮನೆಯನ್ನ ಕಟ್ಟುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಯನ್ನ ಜಾರಿಗೂ ತಂದಿದ್ದು ಅದರ ಪ್ರಯೋಜನ ಹೆಚ್ಚಿನ ಜನರಿಗೆ ಸಿಗುತ್ತಿಲ್ಲ ಎಂದು ಹೇಳಬಹುದು. ಇನ್ನು ಈಗ ಮನೆಯನ್ನ ಖರೀದಿ ಮಾಡುವ ಜನರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಯೋಜನೆಯೊಂದು ಜಾರಿಗೆ ಬಂದಿದ್ದು ಈ ಯೋಜನೆಯ ಅಡಿಯಲ್ಲಿ ಮನೆಯನ್ನ ಖರೀದಿ ಮಾಡುವಜನರಿಗೆ ಹಣವನ್ನ ನೀಡಲಾಗುತ್ತದೆ.

ಹೊಸ ಯೋಜನೆಯನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಈ ಯೋಜನೆಯ ಲಾಭವನ್ನ ಬಹುತೇಕ ಎಲ್ಲಾ ಜನರು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಏನದು ಹೊಸ ಯೋಜನೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ದೇಶದ ಗ್ರಾಮೀಣ ಜನರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ. ದೇಶದ ದುರ್ಬಲ ವರ್ಗದವರನ್ನ ಸಭಲಗೊಳಿಸಲು ಅವರಿಗೆ ಪಕ್ಕಾ ಮನೆ ನೀಡಲು ಮೋದಿ ಸರ್ಕಾರ ನೇರವಾಗಿ ಅವರ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ. ಇನ್ನು ಈ ಯೋಜನೆಯಡಿಯಲ್ಲಿ ಸರ್ಕಾರವು ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿಯ ಪ್ರಯೋಜನವನ್ನ ನೀಡುತ್ತದೆ, ಅಂದರೆ ಮನೆ ಖರೀದಿಸಲು ಗೃಹ ಸಾಲದ ಮೇಲೆ ಬಡ್ಡಿ ಸಹಾಯಧನದ ಸೌಲಭ್ಯವನ್ನ ನೀಡಲಾಗುತ್ತದೆ.

Home loan scheme

ಆರ್ಥಿಕವಾಗಿ ಬಹಳ ದುರ್ಬಲವಾಗಿರುವವರಿಗೆ ಮಾತ್ರ ಕೇಂದ್ರ ಸರ್ಕಾರ ಈ ಸಮಯವನ್ನ ಮಾಡುತ್ತಿದೆ. ಇನ್ನು ಯಾವ ಯಾವ ವರ್ಗದವರು ಈ ಯೋಜನೆಯನ್ನ ಲಾಭವನ್ನ ಪಡೆದುಕೊಳ್ಳುತ್ತಾರೆ ಎಂದು ಹೇಳುವುದಾದರೆ, ಮಧ್ಯಮ ವರ್ಗ 1, ಮಧ್ಯಮ ವರ್ಗ 2, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಬಹುದು ಕೇಂದ್ರ ಹೇಳಿಕೊಂಡಿದೆ. ಇನ್ನು ಅರ್ಜಿಯನ್ನ ಹಾಕಲು ಅಗತ್ಯ ಇರುವ ದಾಖಲೆಗಳು ಏನು ಅನ್ನುವುದರ ಬಗೆಗ್ ತಿಳಿಯೋಣ ಬನ್ನಿ. ಇನ್ನು ಈ ಯೋಜನೆಗೆ ಅರ್ಜಿ ಹಾಕುವ ಜನರು ಆಧಾರ್ ಕಾರ್ಡ್ ಹೊಂದಿರಬೇಕು, ಅರ್ಜಿದಾರನ ಗುರುತಿನ ಚೀಟಿ ಹೊಂದಿರಬೇಕು ಮತ್ತು ಅರ್ಜಿದಾರನ ಆಧಾರ್ ಕಾರ್ಡ್ ಆತನ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.

ಅರ್ಜಿ ಹಾಕುವ ಸಮಯದಲ್ಲಿ ಮೊಬೈಲ್ ನಂಬರ್ ಮತ್ತು ಭಾವಚಿತ್ರದ ಫೋಟೋ ಕೊಡಬೇಕು. ಇನ್ನು ಈ ಯೋಜನೆಯ ಲಾಭಗಳ ವಿಷಯಕ್ಕೆ ಬರುವುದಾದರೆ, 3 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವವರು EWS ವಿಭಾಗ 6.5% ಸಬ್ಸಿಡಿಯನ್ನು ಪಡೆಯುತ್ತಾರೆ. 3 ಲಕ್ಷದಿಂದ 6 ಲಕ್ಷ ವಾರ್ಷಿಕ ಆದಾಯ ಹೊಂದಿರುವವರಿಗೆ LIG 6.5 ಶೇಕಡಾ ಸಬ್ಸಿಡಿ ಸಿಗುತ್ತದೆ. 6 ಲಕ್ಷದಿಂದ 12 ಲಕ್ಷ ವಾರ್ಷಿಕ ಆದಾಯ ಹೊಂದಿರುವವರು MIG1 4 ಶೇಕಡಾ ಕ್ರೆಡಿಟ್ ಲಿಂಕ್ ಸಬ್ಸಿಡಿಯನ್ನು ಪಡೆಯುತ್ತಾರೆ. 12 ಲಕ್ಷದಿಂದ 18 ಲಕ್ಷ ವಾರ್ಷಿಕ ಆದಾಯ ಹೊಂದಿರುವವರು MIG2 ವಿಭಾಗದಲ್ಲಿ ಸಬ್ಸಿಡಿ ಪ್ರಯೋಜನವನ್ನು ಪಡೆಯುತ್ತಾರೆ, ಕ್ರೆಡಿಟ್ ಲಿಂಕ್ ಸಬ್ಸಿಡಿ 3% ಪಡೆಯುತ್ತಾರೆ. ಸ್ನೇಹಿತರೆ ಈ ಮಾಹಿತಿಯನ್ನ ಮನೆ ಖರೀದಿಸುವ ಎಲ್ಲರಿಗೂ ತಲುಪಿಸಿ.

Join Nadunudi News WhatsApp Group

Home loan scheme

Join Nadunudi News WhatsApp Group