Home Loan Subsidy: ಮನೆ ಕಟ್ಟಲು ಬ್ಯಾಂಕ್ ಸಾಲ ಮಾಡುವವರಿಗೆ ಬಂಪರ್ ಗಿಫ್ಟ್, ಕೇಂದ್ರದಿಂದ ಸಿಗಲಿದೆ ಸಬ್ಸಿಡಿ

ಈ ಯೋಜನೆಯ ಅಡಿಯಲ್ಲಿ ಮನೆ ಸಾಲ ಮಾಡುವವರಿಗೆ ಕೇಂದ್ರದಿಂದ ಸಿಗಲಿದೆ ಸಬ್ಸಿಡಿ

Home Loan Subsidy News: ದೇಶದ ಪ್ರಧಾನಿ ಅವರು ಈ ಹಿಂದೆ ಮುಂಬರುವ ವರ್ಷಗಳಲ್ಲಿ ನಾವು ಹೊಸ ಯೋಜನೆಯನ್ನು ತರುತ್ತೇವೆ, ಇದು ಬಾಡಿಗೆ ಮನೆಗಳು, ಕೊಳೆಗೇರಿಗಳು, ಚಾಲ್‌ ಗಳು ಅಥವಾ ಅನೌಪಚಾರಿಕ ಕಾಲೋನಿಗಳಲ್ಲಿ ವಾಸಿಸುವ ನಗರಗಳಲ್ಲಿ ವಾಸಿಸುವ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿಕೆ ನೀಡಿದ್ದರು.

ಸದ್ಯ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ದೇಶವಾಸಿಗಳಿಗೆ ವಿವಿಧ ಸೌಲಭ್ಯವನ್ನು ನೀಡಲು ಸರ್ಕಾರ ಮುಂದಾಗಿದೆ. ಈ ಹಿನ್ನಲೆ ಮನೆ ಕಟ್ಟಲು ಬ್ಯಾಂಕ್ ಸಾಲ ಮಾಡುವವರಿಗೆ ಹೊಸ ಯೋಜನೆಯನ್ನು ರೂಪಿಸಲು ಮೋದಿ ಸರ್ಕಾರ ನಿರ್ಧರಿಸಿದೆ.

Home Loan Update 2024
Image Credit: Moneycontrol

ಮನೆ ಕಟ್ಟಲು ಬ್ಯಾಂಕ್ ಸಾಲ ಮಾಡುವವರಿಗೆ ಬಂಪರ್ ಗಿಫ್ಟ್
ಸ್ವಂತ ಮನೆ ನಿರ್ಮಾಣದ ಕನಸು ಅದೆಷ್ಟೋ ಮದ್ಯವ ವರ್ಗದ ಜನರಿಗೆ ಕನಸಾಗಿಯೇ ಉಳಿದಿದೆ ಎನ್ನಬಹುದು. ಈಗಂತೂ ಆಸ್ತಿ ದರಗಳು ನಿರಂತರವಾಗಿ ಹೆಚ್ಚುತ್ತಿರುವ ಕಾರಣ ಹೊಸ ಮನೆ ಖರೀದಿ ಹಾಗೂ ನಿರ್ಮಾಣದ ದೂರದ ಮಾತಾಗಿದೆ.

ಸದ್ಯ ಕೇಂದ್ರ ಸರ್ಕಾರ ಮಧ್ಯಮ ವರ್ಗದ ಜನರ ಮನೆ ನಿರ್ಮಾಣದ ಕನಸಿಗೆ ಸಜೆಹಾಯವಾಗಲು ಹೊಸ ಯೋಜನೆಯನ್ನು ಪರಿಚಯಿಸುವ ನಿರ್ಧಾರ ಕೈಗೊಂಡಿದೆ. ಸಣ್ಣ ನಗರ ವಸತಿ ವಲಯಕ್ಕೆ ಅಗ್ಗದ ಸಾಲ ನೀಡಲು 600 ಮಿಲಿಯನ್ (60,000 ಕೋಟಿ) ಖರ್ಚು ಮಾಡುವ ಯೋಜನೆಯಲ್ಲಿ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

ಮಧ್ಯಮ ವರ್ಗದ ಜನರಿಗಾಗಿ ಈ ಯೋಜನೆ
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ತಮ್ಮ ಭಾಷಣದಲ್ಲಿ ಯೋಜನೆಯನ್ನು ಘೋಷಿಸಿದ್ದರು. ಆದರೆ ಈ ಯೋಜನೆಯ ಬಗ್ಗೆ ಯಾವುದೇ ಅಧಿಕೃತ ವಿವರಗಳು ಇಲ್ಲಿಯವರೆಗೆ ಬಹಿರಂಗಗೊಂಡಿಲ್ಲ. ಇದೀಗ ವರದಿ ಪ್ರಕಾರ ಈ ಯೋಜನೆಯಡಿಯಲ್ಲಿ 9 ಲಕ್ಷ ರೂ.ವರೆಗಿನ ಸಾಲದ ಮೇಲಿನ ಬಡ್ಡಿ ಶೇ.3-6.5ರಷ್ಟು ಕಡಿಮೆ ದರದಲ್ಲಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ.ಜನರಿಗೆ ಸರ್ಕಾರದಿಂದ ಸಾಲದ ಒಂದು ಭಾಗ ಸಬ್ಸಿಡಿ ರೂಪದಲ್ಲಿ ಸಿಗಲಿದೆ ಎಂದು ಹೇಳಬಹುದು.

Join Nadunudi News WhatsApp Group

Interest Concession On Home Loan
Image Credit: Estatedrive

ಈ ಯೋಜನೆಯಡಿ, 20 ವರ್ಷಗಳವರೆಗೆ 50 ಲಕ್ಷ ರೂ.ಗಿಂತ ಕಡಿಮೆ ಗೃಹ ಸಾಲ ನೀಡಲು ಉದ್ದೇಶಿಸಲಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಬ್ಯಾಂಕ್ ಈ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ವರದಿ ತಿಳಿಸಿದೆ. ಈ ಯೋಜನೆ ಜಾರಿಯಾದರೆ ನಗರ ಪ್ರದೇಶದಲ್ಲಿ ಕಡಿಮೆ ಆದಾಯ ಹೊಂದಿರುವ 25 ಲಕ್ಷ ಜನರಿಗೆ ಮನೆ ಖರೀದಿಸಲು ಸಹಾಯವಾಗಲಿದೆ.

Join Nadunudi News WhatsApp Group