Activa 7G: ಬಂತು ಕಡಿಮೆ ಬೆಲೆಗೆ ಹೋಂಡಾ ಆಕ್ಟಿವಾ 7G, 50 Km ಮೈಲೇಜ್ ಮತ್ತು ಆಕರ್ಷಕ ಫೀಚರ್

ಪ್ರತಿ ಲೀಟರ್ ಗೆ ಬರೋಬ್ಬರಿ 50 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ನೂತನ ಆಕ್ಟಿವಾ 7G

Honda Activa 7G Scooter: ಭಾರತೀಯ ಮಾರುಕಟ್ಟೆಯಲ್ಲಿ ದಿನೇ ದಿನೇ ಹೊಸ ಹೊಸ ಮಾದರಿಯ ಸ್ಕೂಟರ್ ಗಳು ಬಿಡುಗಡೆಯಾಗುತ್ತಿದೆ. ಇತ್ತೀಚೆಗಂತೂ ಪೆಟ್ರೋಲ್ ಮಾದರಿಯ ಸ್ಕೂಟರ್ ಗಳಿಗಿಂತ ಎಲೆಕ್ಟ್ರಿಕ್ ಮಾದರಿಯ ಸ್ಕೂಟರ್ ಗಳು ಹೆಚ್ಚು ಬಿಡುಗಡೆಗೊಳ್ಳುತ್ತಿದೆ.

ಇದೀಗ ಹೋಂಡಾ ಕಂಪನಿ (Honda Company) ಎಲ್ಲ ಮಾದರಿಯ ಸ್ಕೂಟರ್ ಗಳಿಗೆ ಗಂಭೀರ ಸ್ಫರ್ಧೆಯನ್ನು ನೀಡಲು ಹೊಸ ವಿನ್ಯಾಸದ ಸ್ಕೂಟರ್ ಅನ್ನು ಪರಿಚಯಿಸಲು ಮುಂದಾಗಿದೆ. ಹೋಂಡಾದ ಈ ನೂತನ ಮಾದರಿ ಕೈಗೆಟುಕುವ ದರದಲ್ಲಿ ಗ್ರಾಹಕರ ಕೈ ಸೇರಲಿದೆ.

Honda Activa 7G Scooter Price
Image Credit: Autokhabri

ಹೋಂಡಾ ಆಕ್ಟಿವಾ 7G
ಹೋಂಡಾ ಕಂಪನಿ ತನ್ನ ಗ್ರಾಹಕರಿಗೆ ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯ ಸ್ಕೂಟರ್ ಅನ್ನು ಪರಿಚಯಿಸಿದೆ. ಇದೀಗ ಹೋಂಡಾ ಕಂಪನಿ ಬಿಡುಗಡೆ ಮಾಡಲು ಹೊರಟಿರುವ ಸ್ಕೂಟರ್ ನ ಹೆಸರು ಹೋಂಡಾ ಆಕ್ಟಿವಾ 7G. ಈ ಸ್ಕೂಟರ್ ಆಧುನಿಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ಕೈ ಸೇರಲಿದೆ.

ಹೋಂಡಾ ಆಕ್ಟಿವಾ 7G ಎಂಜಿನ್ ಕೆಪ್ಯಾಸಿಟಿ
ಹೋಂಡಾ ಆಕ್ಟಿವಾ 7G ಶಕ್ತಿಶಾಲಿ ಎಂಜಿನ್ ಅನ್ನು ಪಡೆದುಕೊಂಡಿದೆ. ಈ ಸ್ಕೂಟರ್ 110 cc ಫ್ಯಾನ್ ಕೊಲ್ಡ್ 4-ಸ್ಟ್ರೋಕ್ ಎಂಜಿನ್ ಅನ್ನು ಪಡೆದುಕೊಂಡಿದೆ. ಈ ಎಂಜಿನ್ 7.68 BHP Power ಹಾಗೂ 8.79 ನ್ಯೂಟನ್ ಮೀಟರ್ ಟಾರ್ಕ್ ಉತ್ಪದಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೋಂಡಾ ಆಕ್ಟಿವಾ 7G ಸ್ಕೂಟರ್ ಪ್ರತಿ ಲೀಟರ್ ಗೆ ಬರೋಬ್ಬರಿ 50 ಕಿಲೋಮೀಟರ್ ಮೈಲೇಜ್ ನೀಡಲಿದೆ.

Honda Activa 7G Scooter
Image Credit: Eautoblog

ಹೋಂಡಾ ಆಕ್ಟಿವಾ 7G ಪಡೆದುಕೊಂಡ ವೈಶಿಷ್ಟ್ಯಗಳು
*Digital Speedometer
*Trip Meter
*Odometer
*Digital Meter

Join Nadunudi News WhatsApp Group

ಹೋಂಡಾ ಆಕ್ಟಿವಾ 7G ಬೆಲೆ
ಹೋಂಡಾ ಆಕ್ಟಿವಾ 7G ಹೆಚ್ಚುವರಿ ಶಕ್ತಿ ಮತ್ತು ವೈಶಿಷ್ಟ್ಯವನ್ನು ಪಡೆದುಕೊಂಡಿದೆ. 2024 ರ ವೇಳೆಗೆ ಈ ಸ್ಕೂಟರ್ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲು ಸಿದ್ಧತೆ ನೆಡೆಸುತ್ತಿದೆ. ಹೋಂಡಾ ಆಕ್ಟಿವಾ 7G ಬೆಲೆ ಹಿಂದಿನ ಮಾದರಿಗಿಂತ ಸುಮಾರು 30,000 INR ಹೆಚ್ಚಿನ ಬೆಲೆಯನ್ನು ನಿರೀಕ್ಷಿಸಬಹುದಾಗಿದೆ.

Join Nadunudi News WhatsApp Group