Honda Bike: ಬಡವರೇ ನಿಮ್ಮ ಬೈಕ್ ಖರೀದಿ ಕನಸು ನನಸಾಗಿಸಿಕೊಳ್ಳಿ, ಇಲ್ಲಿದೆ ನೋಡಿ ಅಗ್ಗದ ಮೈಲೇಜ್ ಬೈಕ್.

ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಗಳ ಬಗ್ಗೆ ಮಾಹಿತಿ

Honda Best Bike: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ Petrol ಬೆಲೆಯಂತೂ ಬಾರಿ ಹೆಚ್ಚುತ್ತಿದೆ. ಹೀಗಾಗಿ ಜನರು ಹೆಚ್ಚಿನ Mileage  ನೀಡುವಂತಹ ವಾಹನಗಳನ್ನು ಖರೀದಿಸಲು ಬಯಸುತ್ತಾರೆ. ಇನ್ನು ಭಾರತೀಯ ಆಟೋ ವಲಯದ ಕಂಪನಿಗಳು ಹೆಚ್ಚಿನ Mileage ನೀಡುವ Bike ಗಳು ಕಡಿಮೆ ಬೆಲೆಯಲಿ ಪರಿಚಯಿಸುತ್ತ ಇರುತ್ತದೆ.

ನೀವು ಮಾರುಕಟ್ಟೆಯಲ್ಲಿ ಕಡಿಮೆ ಬಜೆಟ್ ನಲ್ಲಿ ಹೆಚ್ಚು Mileage ನೀಡುವಂತಹ ಬೈಕ್ ಗಳನ್ನೂ ಖರೀದಿಸಬಹುದಾಗಿದೆ. ನೀವು ಹೊಸ ಬೈಕ್ ಅನ್ನು ಖರೀದಿಸುವ ಬಗ್ಗೆ ಯೋಜನೆ ಹೂಡಿದ್ದಾರೆ ನಾವೀಗ ಕಡಿಮೆ ಬೆಲೆಗೆ ಸಿಗುವ ಹೆಚ್ಚಿನ Mileage ನೀಡುವ ಬೈಕ್ ಗಳ ಬಗ್ಗೆ ಹೇಳಲಿದ್ದೇವೆ.

Honda SP 125 Bike
Image Credit: Indiamart

ಬಡವರೇ ನಿಮ್ಮ ಬೈಕ್ ಖರೀದಿ ಕನಸು ನನಸಾಗಿಸಿಕೊಳ್ಳಿ, ಇಲ್ಲಿದೆ ನೋಡಿ ಅಗ್ಗದ ಮೈಲೇಜ್ ಬೈಕ್

•Honda SP 125
ಹೋಂಡಾ SP 125 ಮೋಟಾರ್‌ ಸೈಕಲ್ ಮಾರುಕಟ್ಟೆಯಲ್ಲಿ ರೂ. 87,410 ದಿಂದ 91,960 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 123.94 cc ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 10.87 PS ಗರಿಷ್ಠ ಶಕ್ತಿ ಮತ್ತು 10.9 Nm ಪೀಕ್ ಟಾರ್ಕ್ ಅನ್ನು 5-ಸ್ಪೀಡ್ ಗೇರ್‌ ಬಾಕ್ಸ್‌ ಗೆ ಜೋಡಿಸುತ್ತದೆ.

ಈ ಹೋಂಡಾ SP 125 ಬೈಕ್ 60 kmpl ವರೆಗೆ ಮೈಲೇಜ್ ನೀಡುತ್ತದೆ ಮತ್ತು LED ಹೆಡ್ ಲ್ಯಾಂಪ್, ಫುಲ್-LCD ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. 116 ಕೆಜಿ ತೂಕದ ಈ ಮೋಟಾರ್‌ ಸೈಕಲ್ 11.2-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಪಡೆಯುತ್ತದೆ.

Join Nadunudi News WhatsApp Group

Honda shine Bike
Image Credit: Carandbike

•Honda shine
ಹೋಂಡಾ ಶೈನ್ ಬೈಕ್ ರೂಪಾಂತರವನ್ನು ಅವಲಂಬಿಸಿ 81,100 ರಿಂದ 85,100 ಎಕ್ಸ್ ಶೋರೂಂ ಬೆಲೆ ಹೊಂದಿದೆ. ಇದು cc ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅನ್ನು ಪಡೆದುಕೊಂಡಿದ್ದು ಅದು 10.74 PS ಪವರ್ ಮತ್ತು 11 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಇದು 5-ಸ್ಪೀಡ್ ಗೇರ್‌ ಬಾಕ್ಸ್‌ ನೊಂದಿಗೆ ಲಭ್ಯವಿರುತ್ತದೆ ಮತ್ತು 55 kmpl ಮೈಲೇಜ್ ನೀಡುತ್ತದೆ.

ಹೊಸ ಹೋಂಡಾ ಶೈನ್ ಬೈಕ್ ಕಪ್ಪು, ಜೆನ್ನಿ ಗ್ರೇ ಮೆಟಾಲಿಕ್, ಡೀಸೆಂಟ್ ಬ್ಲೂ ಮೆಟಾಲಿಕ್ ಸೇರಿದಂತೆ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಸೈಲೆಂಟ್ ಸ್ಟಾರ್ಟ್ ಸಿಸ್ಟಂ, ಇಂಜಿನ್ ಕಿಲ್ ಸ್ವಿಚ್, ಅಲಾಯ್ ವ್ಹೀಲ್ಸ್, ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ವೈಶಿಷ್ಟ್ಯಗಳು. ಇದು 10.5 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

•Honda Unicorn
ಹೋಂಡಾ ಯುನಿಕಾರ್ನ್ ಕೂಡ ಜನಪ್ರಿಯ ಬೈಕ್ ಆಗಿದ್ದು, ರೂ.1.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಇದು 162.71 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅನ್ನು ಪಡೆದುಕೊಂಡಿದ್ದು ಅದು 12.91 ಪಿಎಸ್ ಪವರ್ ಮತ್ತು 14.58 ಎನ್ ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಗೇರ್‌ ಬಾಕ್ಸ್ ಅನ್ನು ಸಹ ಹೊಂದಿದೆ ಮತ್ತು 60 kmpl ಮೈಲೇಜ್ ನೀಡುತ್ತದೆ. ಈ ಹೋಂಡಾ ಯುನಿಕಾರ್ನ್ ಮಾದರಿಯು ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಎಂಜಿನ್ ಕಿಲ್ ಸ್ವಿಚ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಇದು ಸಿಂಗಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆಯುತ್ತದೆ.

Honda Unicorn Bike
Image Credit: Rishibikebazar

Join Nadunudi News WhatsApp Group