Honda NX500: ಈ ಹೋಂಡಾ ಬೈಕ್ ಮುಂದೆ ಬೇಡಿಕೆ ಕಳೆದುಕೊಳ್ಳುತ್ತಿದೆ ಹಿಮಾಲಯನ್, ಬೆಲೆ ಅಧಿಕ ಮತ್ತು ಆಕರ್ಷಕ ಫೀಚರ್

ಈ ಹೋಂಡಾ ಸ್ಪೋರ್ಟ್ ಬೈಕ್ ಮುಂದೆ ಬೇಡಿಕೆ ಕಳೆದುಕೊಳ್ಳುತ್ತಿದೆ ಹಿಮಾಲಯನ್ ಬೈಕ್

Honda NX 500 Feature: ಭಾರತೀಯ ಆಟೋ ವಲಯದಲ್ಲಿ ವಿಭಿನ್ನ ಮಾದರಿಯ ಬೈಕ್ ಗಳು ಮಾರಾಟಕ್ಕೆ ಲಭ್ಯವಿದೆ. ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ಸದ್ಯ ಜನಪ್ರಿಯ ಬೈಕ್ ತಯಾರಕ ಕಂಪನಿಯಾದ HONDA ತನ್ನ ಹೊಸ ಮಾದರಿಯ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಹೋಂಡಾ ತನ್ನ ಅಡ್ವೆಂಚರ್ ಬೈಕ್ NX 500 ಅನ್ನು ಬಿಡುಗಡೆ ಮಾಡಲಿದೆ. ಹೋಂಡಾದ ಈ ನೂತನ ಮಾದರಿ ಹಿಮಾಲಯನ್ ಬೈಕ್ ಗಳಿಗೆ ನೇರ ಪೈಪೋಟಿ ನೀಡಲಿದೆ.

Honda NX500 Feature
Image Credit: Bikewale

ಈ ಹೋಂಡಾ ಬೈಕ್ ಮುಂದೆ ಬೇಡಿಕೆ ಕಳೆದುಕೊಳ್ಳುತ್ತಿದೆ ಹಿಮಾಲಯನ್
ಹೋಂಡಾ ಕಂಪನಿಯು ತನ್ನ Honda NX 500  ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಅನೇಕ ಡೀಲರ್‌ ಶಿಪ್‌ ಗಳು ಅದರ ಅನಧಿಕೃತ ಬುಕಿಂಗ್‌ ಗಳನ್ನು ರೂ. 50,000 ಗೆ ತೆಗೆದುಕೊಳ್ಳಲು ಪ್ರಾರಂಭಿಸಿವೆ. ಹೋಂಡಾ NX 500 ಮಾದರಿಯ ಬೆಲೆ 7 ಲಕ್ಷದಿಂದ 7.5 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

ಹೋಂಡಾದ ಈ ಹೊಸ ಸಾಹಸ ಬೈಕ್‌ ನಲ್ಲಿ ಎಲ್‌ ಇಡಿ ಲೈಟ್‌ ಗಳು, ಎಬಿಎಸ್, ಸ್ಮಾರ್ಟ್‌ ಫೋನ್ ಕನೆಕ್ಟಿವಿಟಿ, ಟ್ರಾಕ್ಷನ್ ಕಂಟ್ರೋಲ್, 5 ಇಂಚಿನ ಟಿಎಫ್‌ ಟಿ ಡಿಸ್ಪ್ಲೇ, ಕರೆ ಎಸ್‌ ಎಂಎಸ್ ಅಲರ್ಟ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಮತ್ತು ಮ್ಯೂಸಿಕ್ ಸಿಸ್ಟಂನ ವೈಶಿಷ್ಟ್ಯಗಳನ್ನು ಕಾಣಬಹುದು. ಇದು ಕಂಪನಿಯ ಶಕ್ತಿಶಾಲಿ ಫ್ಯೂಚರಿಸ್ಟಿಕ್ ಸಾಹಸ ಬೈಕ್ ಆಗಲಿದೆ.

Honda NX500 Price In India
Image Credit: Ultimatemotorcycling

ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್
ಪಾರದರ್ಶಕ ವೈಸರ್ ಮತ್ತು LED ಟರ್ನ್ ಇಂಡಿಕೇಟರ್ ಅನ್ನು ಸಹ ಇದರಲ್ಲಿ ನೀಡಲಾಗುವುದು. Honda NX 500 ಮಾದರಿಯು 471 ಸಿಸಿ ಪ್ಯಾರಲಲ್ ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಪಡೆಯಲಿದೆ. ಈ ಎಂಜಿನ್ 47 ಎಚ್‌ ಪಿ ಮತ್ತು 43 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿರುವ ಹೋಂಡಾ NX 500 ಪ್ರತಿ ಲೀಟರ್ ಗೆ 23 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಶೀಘ್ರದಲ್ಲೇ ಗ್ರಾಹಕರು ಈ ನೂತನ ಅಡ್ವೆಂಚರ್ ಬೈಕ್ ಅನ್ನು ಖರೀದಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group