Honda Shine 125: ಮಧ್ಯಮ ವರ್ಗದ ಜನರಿಗೆ ಹೇಳಿ ಮಾಡಿಸಿದ ಬೈಕ್, ಹೊಸ ಹೋಂಡಾ ಶೈನ್ 65 ಕಿಲೋ ಮೀಟರ್ ಮೈಲೇಜ್.

83 ಸಾವಿರ ರೂಪಾಯಿ ಬೆಲೆಯಲ್ಲಿ ಈಗ ಖರೀದಿ ಮಾಡಬಹುದು ಹೋಂಡಾ ಶೈನ್ 125

Honda Shine 125 New: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಬೈಕುಗಳು ಬಿಡುಗಡೆಯಾಗಿ ಹೊಸ ಛಾಪು ಮೂಡಿಸುತ್ತಿದೆ. ಬೈಕ್ ಖರೀದಿ ಮಾಡುವವರಿಗೆ ಮಾರುಕಟ್ಟೆಯಲ್ಲಿ ಉತ್ತಮ ವೈಶಿಷ್ಟ್ಯದ ಬೈಕುಗಳು ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಇವೆ. ಆದ್ದರಿಂದ ಬೈಕ್ ಖರೀದಿ ಮಾಡುವವರಿಗೆ ಕೊರತೆ ಅಂತೂ ಆಗುವುದಿಲ್ಲ.

ಇದೀಗ ಹೋಂಡಾ ಕಂಪನಿಯಿಂದ ಹೋಂಡಾ ಶೈನ್ ಬೈಕ್ ಒಂದು ಬಿಡುಗಡೆಯಾಗಿದ್ದು ಖರೀದಿದಾರರಿಗೆ ಈ ಬೈಕ್ ಖರೀದಿಸಲು ಉತ್ತಮವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಂಪನಿಗಳು ಹೊಸ ಹೊಸ ಬಗೆಯ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿವೆ.

The popular Honda Shine 125 has been launched in the market
Image Credit: autobizz

ಹೋಂಡಾ ಕಂಪನಿಯಿಂದ ಇತ್ತೀಚಿಗೆ ಹೊಸ ಬೈಕುಗಳು ಬಿಡುಗಡೆಯಾಗಿದ್ದು, ಅತ್ತ್ಯುತ್ತಮ ರೀತಿಯಲ್ಲಿ ಸೇಲ್ ಕಾಣುತ್ತಿದೆ. ಇದೀಗ ಹೋಂಡಾ (Honda) ಕಂಪನಿಯಿಂದ ಹೋಂಡಾ ಶೈನ್ ಬಿಡುಗಡೆಯಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ ಎನ್ನಬಹುದು.

ಹೋಂಡಾ ಶೈನ್ 125
ಹೋಂಡಾ ಕಂಪನಿಯು ಹಲವು ಬಣ್ಣದ ಆಯ್ಕೆಗಳೊಂದಿಗೆ ಹೋಂಡಾ ಶೈನ್ 125 ಬೈಕ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬ್ಲಾಕ್, ಜೆನ್ನಿ ಗ್ರೇ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ, ರೆಬೆಲ್ ರೆಡ್ ಮೆಟಾಲಿಕ್ ಮತ್ತು ಡೀಸೆಂಟ್ ಬ್ಲೂ ಮೆಟಾಲಿಕ್ ಸೇರಿವೆ. ನೀವು ಸಹ ಈ ಬೈಕ್ ಖರೀದಿ ಮಾಡಬೇಕೆಂದುಕೊಂಡಿದ್ದರೆ ಈ ಬೈಕ್ ಖರೀದಿ ಮಾಡಲು ಉತ್ತಮವಾಗಿದೆ.

Honda Shine 125 can now be bought at a price of 83 thousand rupees
Image Credit: abplive

ಹೋಂಡಾ ಶೈನ್ 125 ಬೈಕ್ ನ ಬೆಲೆ ಮತ್ತು ವಿಶೇಷತೆ
ಹೋಂಡಾ ಶೈನ್ 125 ಬೈಕ್ ಅತ್ತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಬೈಕ್ ನಲ್ಲಿ ಏರ್ ಕೋಲ್ಡ್, ಫ್ಯುಯಲ್ ಇಂಜೆಕ್ಟೇಡ್ ತಂತ್ರಜ್ಞಾನವನ್ನು ಆಧರಿಸಿ ಪಡೆಯಬಹುದು. ಇದು 123.94 ಸಿಸಿ ಎಂಜಿನ್ ಆಗಿದ್ದು ಗರಿಷ್ಠ 10.5 ಬಿ ಎಚ್ ಪಿ ಪವರ್ ಜೊತೆಗೆ 11 ಏನ್ ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Join Nadunudi News WhatsApp Group

ಇದರಲ್ಲಿ ಕಂಪನಿಯು 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಬಳಸಿದೆ. ಇನ್ನು ಈ ಬೈಕ್ ಪ್ರತಿ ಲೀಟರ್ ಗೆ 65 ಕೀಲೊಮೀಟರ್ ಮೈಲೇಜ್ ನೀಡುತ್ತದೆ. ಹೋಂಡಾ ಶೈನ್ ಬೈಕಿನ ಆರಂಭಿಕ ಬೆಲೆ ರೂಪಾಯಿ 79800. ಇನ್ನು ಇದರ ಉನ್ನತ ರೂಪಾಂತರಕ್ಕೆ 83800 ರೂಪಾಯಿ.

Join Nadunudi News WhatsApp Group