Honda Stylo: ಆಕ್ಟಿವಾಗಿಂತಲೂ ಸ್ಟೈಲಿಶ್ ಸ್ಕೂಟರ್ ಬಿಡುಗಡೆ, ಒಂದು ಲೀಟರ್ ಗೆ ಭರ್ಜರಿ 45km ಮೈಲೇಜ್.

ಕಾಲೇಜು ಯುವತಿಯರಿಗಾಗಿ 45 KM ಮೈಲೇಜ್ ಕೊಡುವ ಇನ್ನೊಂದು ಸ್ಕೂಟರ್ ಲಾಂಚ್

Honda Stylo 160 Neo Retro Scooter: ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಕೂಟರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ ಎನ್ನಬಹುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಕೂಟರ್ ಗಳನು ಖರೀದಿಸುತ್ತಿದ್ದಾರೆ. ಇನ್ನು Activa Scooter ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು.

ಸದ್ಯ ಹೋಂಡಾ ಕಂಪನಿಯು Activa ಗಿಂತಲೂ ಶಕ್ತಿಶಾಲಿ ಎಂಜಿನ್, ಉತ್ತಮ ಮೈಲೇಜ್ ನೀಡುವ ಸ್ಕೂಟರ್ ಅನ್ನು ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಈ ನೂತನ ಮಾದರಿ ಗ್ರಾಹಕರಿಗೆ ಹೊಸ ರೀತಿಯ ಅನುಭವನ್ನು ನೀಡಲಿದೆ. ಹೋಂಡಾದ ನೂತನ ಮಾದರಿಯ ಬಗ್ಗೆ ವಿವರ ಇಲ್ಲಿದೆ.

Honda Stylo 160 Neo Retro Scooter
Image Credit: Tmesbull

Honda Stylo 160 Neo Retro Scooter
ಹೋಂಡಾ ಇದೀಗ ಭಾರತೀಯ ಆಟೋ ವಲಯಕ್ಕೆ ತನ್ನ ನೂತನ ಮಾದರಿಯ Stylo 160 Neo Retro Scooter ಅನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಸ್ಟೈಲೋ 160 ನಿಯೋ ರೆಟ್ರೋ ಸ್ಕೂಟರ್ ಇಂಡೋನೇಷ್ಯಾದಲ್ಲಿ ಮಾರಾಟಕ್ಕೆ ಲಭ್ಯವಿದೆ. ಸದ್ಯದಲ್ಲಿಯೇ ಈ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಪ್ರಸ್ತುತ, ಹೆಚ್ಚಾಗಿ 110 cc ಮತ್ತು 125 cc ಸ್ಕೂಟರ್‌ ಗಳು ಭಾರತದಲ್ಲಿ ಬಹಳ ಜನಪ್ರಿಯವಾಗಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಶಕ್ತಿ ಹೊಂದಿರುವ ಸ್ಕೂಟರ್ ಗಳನ್ನೂ ವಿವಿಧ ಕಂಪನಿಗಳು ಲಾಂಚ್ ಮಾಡುತ್ತಿವೆ.

ಆಕ್ಟಿವಾಗಿಂತಲೂ ಸ್ಟೈಲಿಶ್ ಸ್ಕೂಟರ್ ಬಿಡುಗಡೆ
ಹೋಂಡಾ ಸ್ಟೈಲೋ 160 ಬೈಕಿನ ಪ್ರಮುಖ ಆಕರ್ಷಣೆ ಅದರ ನಿಯೋ-ರೆಟ್ರೋ ಸ್ಟೈಲಿಂಗ್ ಆಗಿದೆ. ಇದರ ಷಡ್ಭುಜೀಯ ಎಲ್‌ಇಡಿ ಹೆಡ್‌ಲ್ಯಾಂಪ್, ವೃತ್ತಾಕಾರದ ರಿಯರ್ ವ್ಯೂ ಮಿರರ್‌ ಗಳು, ಸಿ-ಆಕಾರದ ಎಲ್‌ಇಡಿ ಡಿಆರ್‌ಎಲ್, ಹರಿತ ಎಲ್‌ಇಡಿ ಟೈಲ್ ಲ್ಯಾಂಪ್, ಆರಾಮದಾಯಕ ಸೀಟ್ ಮತ್ತು ಗಟ್ಟಿಮುಟ್ಟಾದ ಗ್ರಾಬ್ ರೈಲ್ ಕೆಲವು ಅತ್ಯಾಕರ್ಷಕ ಫೀಚರ್ ಗಳಾಗಿವೆ. ಸ್ಟೈಲೋ 160 ಹೊಸ ಡಿಜಿಟಲ್ ಉಪಕರಣ ಫಲಕವನ್ನು ಹೊಂದಿದ್ದು ಅದು ಡಿಜಿಟಲ್ ಗಡಿಯಾರ, ಟ್ರಿಪ್ ಮೀಟರ್, ಸ್ಪೀಡೋಮೀಟರ್, ಸ್ಮಾರ್ಟ್ ಕೀ, ತೈಲ ಬದಲಾವಣೆ ಸ್ಥಿತಿ ಮತ್ತು ಎಬಿಎಸ್ ಸೂಚಕದಂತಹ ಮಾಹಿತಿಯನ್ನು ಪ್ರದರ್ಶಿಸುತ್ತದೆ.

Honda Stylo 160 Neo Retro Scooter Price
Image Credit: Detik

ಒಂದು ಲೀಟರ್ ಗೆ ಭರ್ಜರಿ 45km ಮೈಲೇಜ್
ಹೋಂಡಾ ಸ್ಟೈಲೋ 160 ಸ್ಕೂಟರ್ 156.9 ಸಿಸಿ, ಲಿಕ್ವಿಡ್ ಕೂಲ್ಡ್, 4 ವಾಲ್ವ್‌ ಗಳು, ಇಎಸ್‌ಪಿ ಎಂಜಿನ್ ಹೊಂದಿದೆ. ಈ ಎಂಜಿನ್ 15.4 bhp ಪವರ್ ಮತ್ತು 13.8 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರತಿ ಲೀಟರ್ ಗೆ 45 km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ Honda Stylo 160 Neo Retro Scooter ಸರಿಸುಮಾರು 1.50 ಲಕ್ಷ ಬೆಲೆಯಲ್ಲಿ ಬಿಡುಗಡೆ ಆಗಲಿದೆ.

Join Nadunudi News WhatsApp Group

Honda Stylo 160 Neo Retro Scooter Features
Image Credit: Gooto

Join Nadunudi News WhatsApp Group