Honda Car Offer: ಹೊಸ ಕಾರ್ ಖರೀದಿಸುವವರಿಗೆ ಭರ್ಜರಿ ಆಫರ್, ಈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ.

ಹೋಂಡಾದ ಈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

Honda Summer Bonanza Offer: ಸಾಮಾನ್ಯವಾಗಿ ಎಲ್ಲರು ಕೂಡ ತಮಗಾಗಿ ಕಾರ್ ಅನ್ನು ಖರೀದಿಸಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಕಾರ್ ಗಳು ಪರಿಚಯವಾಗಿದೆ. ಸಾಮಾನ್ಯವಾಗಿ ಹೈಟೆಕ್ ಫೀಚರ್ ಇರುವ ಕಾರ್ ಗಳ ಮೇಲೆ ದುಬಾರಿಯಾಗಿರುತ್ತದೆ. ಕಾರ್ ಗಳ ಬೆಲೆ ದುಬಾರಿ ಆಗಿರುವ ಕಾರಣ ಅದೆಷ್ಟೋ ಜನರು ತಮ್ಮ ಕಾರ್ ಖರೀದಿಯ ಕನಸನ್ನು ಕೈಬಿಡುತ್ತಾರೆ.

ಇದೀಗ ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿ Honda ಕಾರ್ ಖರಿದಿಸುವವರಿಗೆ ಒಂದೊಳ್ಳೆ ಆಫರ್ ಅನ್ನು ನೀಡಿದೆ. ನೀವು ಈ ಹೋಂಡಾ ಕಂಪನಿಯ ಆಫರ್ ಅನ್ನು ಉಪಯೋಗಿಸಿಕೊಳ್ಳುವ ಮೂಲಕ ಅತಿ ಕಡಿಮೆ ಬಜೆಟ್ ನಲ್ಲಿ ನಿಮ್ಮ ಕಾರ್ ಖರೀದಿಯ ಕನಸನ್ನು ನನಸು ಮಾಡಿಕೊಳ್ಳಬಹುದು.

Honda Summer Bonanza
Image Credit: NPG

ಹೊಸ ಕಾರ್ ಖರೀದಿಸುವವರಿಗೆ ಭರ್ಜರಿ ಆಫರ್
ಹೋಂಡಾ ಕಾರ್ಸ್ ಇಂಡಿಯಾ ಇದೀಗ ಸಮ್ಮರ್ ಬೊನಾಂಜಾ ಅಭಿಯಾನವನ್ನು ಆರಂಭಿಸಲಾಗಿದೆ. ಹೋಂಡಾ ಕಾರ್ಸ್ ಇಂಡಿಯಾ ತನ್ನ ‘ಎಕ್ಸ್’ ಖಾತೆಯಲ್ಲಿ ಹೋಂಡಾ ಸಮ್ಮರ್ ಬೊನಾಂಜಾ ಅಭಿಯಾನದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಹೊಸ ಹೋಂಡಾ ಕಾರಿನ ಅದೃಷ್ಟಶಾಲಿ ವಿಜೇತರು ದಂಪತಿಗಳೊಂದಿಗೆ ಪ್ಯಾರಿಸ್ ಪ್ರವಾಸವನ್ನು ಗೆಲ್ಲುವ ಅವಕಾಶ ಅಥವಾ ರೂ.75,000 ಮೌಲ್ಯದ ಅತ್ಯಾಕರ್ಷಕ ಉಡುಗೊರೆಯನ್ನು ಪಡೆಯುತ್ತಾರೆ. ಪ್ರತಿ ಟೆಸ್ಟ್ ಡ್ರೈವ್‌ ನಲ್ಲೂ ಅಚ್ಚರಿಯ ಉಡುಗೊರೆಯನ್ನು ಪಡೆಯುವ ಅವಕಾಶವಿದೆ. ಹೊಸ ಅಮೇಜ್, ಸಿಟಿ ಮತ್ತು ಎಲಿವೇಟ್ ಕಾರುಗಳನ್ನು ತೆಗೆದುಕೊಳ್ಳಲು ಬಯಸುವವರಿಗೆ ಈ ಪ್ರಯೋಜನಗಳು ಲಭ್ಯವಿರುತ್ತವೆ.

ಈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ
ಹೋಂಡಾದ ಜನಪ್ರಿಯ ಕಾರುಗಳಾದ ಅಮೇಜ್‌ ರೂ.76,000, ಸಿಟಿ ರೂ.65,000ದಿಂದ ರೂ.88,000 ಮತ್ತು ಎಲಿವೇಟ್ ರೂ.55,000. ಹಣಕಾಸು ಯೋಜನೆಯನ್ನು ಹೊಂದಿದೆ. ಈ ಕೊಡುಗೆಗಳು ಜೂನ್ 1 ರಿಂದ 30 ರವರೆಗೆ ಅನ್ವಯಿಸುತ್ತವೆ ಎಂದು ಕಂಪನಿ ತಿಳಿಸಿದೆ. ನೀವು ಜೂನ್ ನಲ್ಲಿ ಈ ಆಫರ್ ಗಳನ್ನು ಬಳಸಿಕೊಂಡು ನಿಮ್ಮ ಕಾರ್ ಖರೀದಿಯ ಕನಸನ್ನು ನನಸು ಮಾಡಿಕೊಳ್ಳಬಹುದು. ಹೋಂಡಾ ಕಾರ್ ಗಳ ಖರೀದಿಗೆ ಇದು ಬೆಸ್ಟ್ ಟೈಮ್ ಎನ್ನಬಹುದು. ಭರ್ಜರಿ ರಿಯಾಯಿತಿಯೊಂದಿಗೆ ನೀವು ಹೊಸ ಅಮೇಜ್, ಸಿಟಿ ಮತ್ತು ಎಲಿವೇಟ್ ಕಾರುಗಳನ್ನು ಖರೀದಿಸಬಹುದು. ನಿಮ್ಮ ಹತ್ತಿರದ ಹೋಂಡಾ ಷೋರೂಮ್ ಗೆ ಭೇಟಿ ನೀಡಿ ಕಾರ್ ಗಳ ಆಫರ್ ನ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

Honda Summer Bonanza Offer
Image Credit: News24 Hindi

Join Nadunudi News WhatsApp Group

Join Nadunudi News WhatsApp Group