House Build: ಹೊಸ ಮನೆ ಕಟ್ಟುತ್ತಿರುವವರಿಗೆ ಬೇಸರದ ಸುದ್ದಿ, ಇಂದಿನಿಂದ ಈ ವಸ್ತುಗಳ ಬೆಲೆ ದುಬಾರಿ.

ಮನೆ ಕಟ್ಟಲು ಬೇಕಾಗುವ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ.

New House: ದೇಶಾದ್ಯಂತ ಸರ್ಕಾರವು ಅನೇಕ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುತ್ತದೆ.ತಿಂಗಳ ಆರಂಭದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಇತ್ತೀಚಿಗೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದೆ. ಪ್ರತಿ ತಿಂಗಳ ಮೊದಲ ದಿನದಂದು ಕೆಲವು ವಸ್ತುಗಳ ಬೆಲೆಯನ್ನು ನಿರ್ಧಾರ ಮಾಡಲಾಗುತ್ತದೆ.

ಈಗಾಗಲೇ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಬೆಲೆ ಏರಿಕೆ ಸಾಮಾನ್ಯ ವರ್ಗದ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸಾಕಷ್ಟು ಜನರು ಸ್ವಂತ ಮನೆ ನಿರ್ಮಾಣ ಮಾಡುವ ಕನಸನ್ನು ಹೊಂದಿರುತ್ತಾರೆ. ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಬ್ಯಾಂಕ್ ಗಳಲ್ಲಿ ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ಪಡೆಯುತ್ತಾರೆ.

ಗೃಹ ಸಾಲವನ್ನು ಪಡೆದುಕೊಂಡು ಜನರು ಮನೆ ನಿರ್ಮಾಣದ ಕೆಸಲವನ್ನು ಪ್ರಾರಂಭಿಸುತ್ತಾರೆ. ಇದೀಗ ಸ್ವಂತ ಮನೆ ನಿರ್ಮಾಣ ಮಾಡುವವರಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ.

Big Shock For House Builders
Image Credit: Thehansindia

ಮನೆ ಕಟ್ಟುವವರಿಗೆ ಬೇಸರದ ಸುದ್ದಿ
ಇದೀಗ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಕಹಿ ಸುದ್ದಿಯೊಂದು ಲಭಿಸಿದೆ. ಮನೆ ನಿರ್ಮಾಣ ಮಾಡಲು ಬೇಕಾಗುವ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ನಂದಿನಿ ಹಾಲು, ಟೊಮೇಟೊ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೊಸ ಜನತೆಗೆ ಇದೀಗ ಮನೆ ಕಟ್ಟಲು ಬೇಕಾಗುವ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುದು ಜನರ ಚಿಂತೆಗೆ ಕಾರಣವಾಗಿದೆ. ಆಗಸ್ಟ್ ಒಂದರಿಂದ ಮರಳು, ಜಲ್ಲಿಕಲ್ಲು, ಗ್ರಾನೈಟ್, ಟೈಲ್ಸ್, ಕಬ್ಬಿಣ ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

Big Shock For House Builders
Image Credit: Exportersindia

ಕಬ್ಬಿಣದ ಅದಿರು, ಜಲ್ಲಿಕಲ್ಲು, ಸೈಜ್ ಕಲ್ಲು, ಗ್ರಾನೈಟ್, ಮರಳು, ಎಂ-ಸ್ಯಾಂಡ್, ದಿಂಡುಗಲ್ಲು, ಸೇರಿದಂತೆ ಗೃಹ ನಿರ್ಮಾಣಕ್ಕೆ ಬಳಸಲಾಗುವ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಗೃಹ ಸಾಲ ಪಡೆದು ಮನೆ ನಿರ್ಮಾಣ ಮಾಡುವವರು ಗೃಹ ಸಾಲದ ಬಡ್ಡಿಯ ಜೊತೆಗೆ, ಮನೆ ನಿರ್ಮಾಣದ ವಸ್ತುಗಳ ಬೆಲೆ ಏರಿಕೆಯಾಗುದು ಜನಸಾಮಾನ್ಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

Join Nadunudi News WhatsApp Group

Join Nadunudi News WhatsApp Group