Narendra Modi: 10 ವರ್ಷದಲ್ಲಿ ಮೋದಿ ಅವರು ಎಷ್ಟು ರಜೆ ತೆಗೆದುಕೊಂಡಿದ್ದಾರೆ ಗೊತ್ತಾ…? ಮೋದಿ ಪ್ರತಿದಿನ 18 ಗಂಟೆ ಕೆಲಸ ಮಾಡುತ್ತಾರೆ ಮೋದಿ.

ಮೋದಿ ಅವರ 10 ವರ್ಷದ ಅಧಿಕಾರಾವಧಿಯಲ್ಲಿ ಎಷ್ಟು ರಜೆ ತೆಗೆದುಕೊಂಡಿದ್ದಾರೆ ಗೊತ್ತಾ...?

How Much Leave Has Modi Taken In 10 Years: ಭಾರತದ ಪ್ರಧಾನಿಯಾಗಿ Narendra Modi ಅವರು 2014 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮೋದಿ ಅವರು 10 ವರ್ಷದಿಂದ ದೇಶದಲ್ಲಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಈ ಬಾರಿ ಲೋಕಸಭಾ ಚುನಾವಣೆ ಇರಲಿದ್ದು, ಈ ಬಾರಿಯೂ ಮೋದಿಯೇ ಪ್ರಧಾನಿ ಆಗಬೇಕೆಂದು ಸಾಕಷ್ಟು ಜನ ಬಯಸುತ್ತಿದ್ದಾರೆ. ಮೋದಿ ಅವರು ದೇಶದಕ್ಕಾಗಿ ಮಾಡಿದ ಪ್ರತಿ ಸೇವೆಯು ಕೂಡ ಜನರ ಮನದಲ್ಲಿದೆ. ಈಗಾಗಲೇ ದೇಶದ ಜನತೆಗಾಗಿ ಮೋದಿ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ.

10 ವರ್ಷದಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಮೋದಿ ಈ ಬಾರಿ ಗೆದ್ದು ಮತ್ತೆ 5 ವರ್ಷ ಅಧಿಕಾರ ಪಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಲೋಕಸಭಾ ಚುನಾವಣೆ ಹತ್ತಿರವಾದ ಹಿನ್ನಲ್ಲೆ ಮೋದಿ ಅವರು ಈವರೆಗೆ ಮಾಡಿದ ಕೆಲಸಗಳ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಈ ವೇಳೆ 10 ವರ್ಷದಲ್ಲಿ ಮೋದಿ ಅವರು ಎಷ್ಟು ರಜೆ ತೆಗೆದುಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

How Much Leave Has Modi Taken In 10 Years
Image Credit: Aninews

10 ವರ್ಷದಲ್ಲಿ ಮೋದಿ ಅವರು ಎಷ್ಟು ರಜೆ ತೆಗೆದುಕೊಂಡಿದ್ದಾರೆ ಗೊತ್ತಾ…?
ಆರ್‌ಟಿಐ ಕಾರ್ಯಕರ್ತ ಮತ್ತು ವಾರಣಾಸಿ ಮೂಲದ ದೃಷ್ಟಿ ಐಎಎಸ್ ಕೋಚಿಂಗ್ ಪ್ರೊಫೆಸರ್ ಶೇಖರ್ ಖನ್ನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಅಧಿಕಾರಾವಧಿಯಲ್ಲಿ ರಜೆಯ ವಿವರಗಳನ್ನು ಪ್ರಧಾನಿ ಕಚೇರಿಯಿಂದ ಕೋರಿದ್ದರು. ಶೇಖರ್ ಖನ್ನಾ ಅವರು ಏಪ್ರಿಲ್ 15 ರಂದು ಆರ್‌ಟಿಐ ಉತ್ತರವನ್ನು ಸ್ವೀಕರಿಸಿದಾಗ ದಿಗ್ಭ್ರಮೆಗೊಂಡರು. 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರವಾಗಿ ಕರ್ತವ್ಯದಲ್ಲಿದ್ದಾರೆ ಎಂದು ಉತ್ತರಿಸಲಾಯಿತು.

ಅವರು ಒಂದು ದಿನವೂ ರಜೆ ತೆಗೆದುಕೊಂಡಿಲ್ಲ.ಈ ಉತ್ತರ ನೋಡಿ ಶೇಖರ್ ಖನ್ನಾ ಕೂಡ ಅಚ್ಚರಿಗೊಂಡಿದ್ದಾರೆ. ಇನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ಮೋದಿಯವರನ್ನು ಸಂದರ್ಶಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಆ ಸಮಯದಲ್ಲಿ ಅವರ ಪ್ರಶ್ನೆಗೆ ಉತ್ತರಿಸಿದರು ಮತ್ತು ನಾನು ದಿನಕ್ಕೆ ಮೂರೂವರೆಯಿಂದ ನಾಲ್ಕು ಗಂಟೆ ಮಾತ್ರ ಮಲಗುತ್ತೇನೆ ಎಂದು ಹೇಳಿದರು. ಉಳಿದ ದಿನಗಳಲ್ಲಿ, ಅವರು 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.

Information About Narendra Modi
Image Credit: NDTV

ದೇಶಕಾಗಿ ಮೋದಿ ಪ್ರತಿದಿನ 18 ಗಂಟೆ ಕೆಲಸ ಮಾಡುತ್ತಾರೆ 
ಮಾರ್ಚ್ 16, 2024 ರಂದು ಪ್ರಶ್ನಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರ ರಜೆಯ ಬಗ್ಗೆ ಪಿಎಂಒ ದಿಂದ ಮಾಹಿತಿ ಕೇಳಿದ್ದೇನೆ ಎಂದು ಶೇಖರ್ ಖನ್ನಾ ಹೇಳಿದರು. ಒಂದು ತಿಂಗಳೊಳಗೆ ಪ್ರಧಾನ ಮಂತ್ರಿ ಕಚೇರಿಯ ಹೆಚ್ಚುವರಿ ಕಾರ್ಯದರ್ಶಿ ಪರ್ವೇಶ್ ಕುಮಾರ್ ಅವರು ಲಿಖಿತ ಮಾಹಿತಿಯನ್ನು ಕಳುಹಿಸಿದ್ದಾರೆ. 2014 ರ ಲೋಕಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ನಂತರ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

Join Nadunudi News WhatsApp Group

ಅಂದಿನಿಂದ ಪ್ರಧಾನಿ ಮೋದಿ ಆ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಅವರು 10 ವರ್ಷಗಳಲ್ಲಿ 65700 ಗಂಟೆಗಳನ್ನು ಅಂದರೆ 3650 ದಿನಗಳನ್ನು ದೇಶ ಸೇವೆಗಾಗಿ ಮೀಸಲಿಟ್ಟರು. ಅಂದರೆ ಪ್ರಧಾನಿ ಮೋದಿಯವರು ದೇಶ ಸೇವೆಯಲ್ಲಿ ಪ್ರತಿದಿನ 18 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.

Narendra Modi Latest News
Image Credit: Google

Join Nadunudi News WhatsApp Group