YouTube: Youtube ವಿಡಿಯೋ ಮಾಡುವವರಿಗೆ ಯಾಕೆ Youtube ಲಕ್ಷ ಲಕ್ಷ ಹಣ ಕೊಡುತ್ತೆ, Youtube ಗೆ ಇದರಿಂದ ಏನು ಲಾಭ…?

Youtube ವಿಡಿಯೋ ಮಾಡುವವರಿಗೆ Youtube ಎಲ್ಲಿಂದ ಹಣ ಕೊಡುತ್ತೆ ಗೊತ್ತಾ...? ಇದರಿಂದ Youtube ಗೆ ಎಷ್ಟು ಲಾಭ

YouTube Video Monetization: ನಿಮಗೆಲ್ಲ ತಿಳಿದಿರುವ ಹಾಗೆ ಈ ಭೂಮಿಯ ಮೇಲೆ ಹಣ ಗಳಿಸಲು ಹಲವು ರೀತಿಯ ಮಾರ್ಗಗಳು ಇದೆ ಎಂದು ಹೇಳಬಹುದು. ಇನ್ನು ಕೆಲವು ಜನರು ಹಣವನ್ನ ಗಳಿಸಲು ಕೆಟ್ಟ ಮಾರ್ಗವನ್ನ ಆಯ್ಕೆ ಮಾಡಿಕೊಂಡರೆ ಇನ್ನೂ ಕೆಲವು ಜನರು ಉತ್ತಮ ಮಾರ್ಗವನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಸದ್ಯ ಹಣವನ್ನ ಗಳಿಸಲು YouTube ಕೂಡ ಒಂದು ಉತ್ತಮವಾದ ಮಾರ್ಗ ಎಂದು ಹೇಳಬಹುದು. ಹೌದು ಸಾಕಷ್ಟು ಜನರು YouTube ನಲ್ಲಿ Video Upload  ಮಾಡುವುದರ ಮೂಲಕ ಹಣವನ್ನ ಸಂಪಾದನೆ ಮಾಡುತ್ತಿದ್ದಾರೆ.  ಕೆಲವರು ಇದನ್ನ Part Time Job ಮಾಡಿಕೊಂಡರೆ ಇನ್ನೂ ಕೆಲವರು Full Time Job ಮಾಡಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು YouTube ಸಾಕಷ್ಟು ಜನರ ಜೀವನವನ್ನೇ ಬದಲಾಯಿಸಿದೆ ಎದು ಹೇಳಿದರೆ ತಪ್ಪಾಗಲ್ಲ.

ಇನ್ನು ಸಾಕಷ್ಟು ಜನರ ತಲೆಯಲ್ಲಿ YouTube Video Upload ಮಾಡಿದರೆ ಎಷ್ಟು ಹಣ ಕೊಡುತ್ತದೆ ಮತ್ತು ಇಷ್ಟು ಹಣವನ್ನ ಕೊಡಲು YouTube ಗೆ ಎಲ್ಲಿಂದ ಹಣ ಬರುತ್ತದೆ ಅನ್ನುವ ಪ್ರಶ್ನೆ ಇದೆ ಎಂದು ಹೇಳಬಹುದು. ಹಾಗಾದರೆ ಯುಟ್ಯುಬೆರ್ ಗಳಿಗೆ YouTube ಎಲ್ಲಿಂದ ಹಣ ಕೊಡುತ್ತದೆ ಮತ್ತು ಅದರಲ್ಲಿ YouTube ಪಾಲು ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ತಿಳಿಸಿಕೊಡುತ್ತೀವಿ.

YouTube Video Monetization
Image Credit: Boostmeup

YouTube ನಿಂದಲೇ ಜೀವನ ಮಾಡುತ್ತಿದ್ದಾರೆ ಸಾಕಷ್ಟು ಜನರು
ಹೌದು YouTube ನಲ್ಲಿ ತಮ್ಮ ವ್ಯಾವಹಾರಿಕ ವಿಡಿಯೋ ಸೇರಿದಂತೆ ಕೆಲವು ವಿಡಿಯೋಗಳನ್ನ Upload ಮಾಡುವುದರ ಮೂಲಕ ಸಾಕಷ್ಟು ಜನರು ಹಣವನ್ನ ಸಂಪಾಧನೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಅದೇ ರೀತಿಯಲ್ಲಿ YouTube ಜನರು Upload ಮಾಡುವ ಕೆಲವು ವಿಡಿಯೊಳಗಳಿಗೆ ಹಣವನ್ನ ನೀಡುತ್ತದೆ ಎಂದು ಹೇಳಬಹುದು. ಹೌದು ವಿಡಿಯೋ ಎಷ್ಟು ಜನರು ನೋಡಿದ್ದರೆ ಮತ್ತು ಯಾವ ದೇಶದಲ್ಲಿ ಎಷ್ಟು ಸಮಯ ನೋಡಿದ್ದರೆ ಅನ್ನುವುದರ ಮೇಲೆ YouTube ಹಣವನ್ನ ನೀಡುತ್ತದೆ ಎಂದು ಹೇಳಬಹುದು.

ಹಾಗಾದರೆ ಯೌಟ್ಯೂಬ್ ಹಣ ಎಲ್ಲಿಂದ ಬರುತ್ತದೆ
ಹೌದು ಸಾಕಷ್ಟು ಜನರ ತಲೆಯಲ್ಲಿ ಇರುವ ಪ್ರಶ್ನೆ ಏನು ಅಂದರೆ ಯುಟ್ಯುಬೆರ್ ಗೆ ಹಣವನ್ನ ನೀಡಲು ಯೌಟ್ಯೂಬ್ ಗೆ ಹಣ ಎಲ್ಲಿಂದ ಬರುತ್ತದೆ ಅನ್ನುವುದು ಆಗಿದೆ. ಸ್ನೇಹಿತರೆ ಸಾಕಷ್ಟು ದೊಡ್ಡ ಕಂಪನಿಗಳು ತಮ್ಮ ವ್ಯವಹಾರವನ್ನ ಮತ್ತು ಕಂಪನಿಯ ಕೆಲವು ಬ್ರಾಂಡ್ ಗಳನ್ನ YouTube ಮೂಲಕ ಜಾಹಿರಾತು ಮಾಡುತ್ತದೆ. ಯೌಟ್ಯೂಬ್ ನಲ್ಲಿ ಜಾಹಿರಾತು ಮಾಡಬೇಕು ಅಂದರೆ ಜಾಹೀರಾತುದಾರರು ಹಣವನ್ನ ಪಾವತಿ ಮಾಡಬೇಕಾಗುತ್ತದೆ. ಇನ್ನು ಜಾಹೀರಾತುದಾರರು ನೀಡಿದ ಜಾಹೀರಾತನ್ನ ಯೌಟ್ಯೂಬ್ ತನ್ನ ಯು ಟ್ಯುಬೆರ್ ಗಳು ಹಾಕುವ ವಿಡಿಯೋ ಮದ್ಯದಲ್ಲಿ ಅಥವಾ ಆರಂಭದಲ್ಲಿ ಹಾಕಿ ಜಾಹೀರಾತುದಾರರ ಬ್ರಾಂಡ್ ಗಳನ್ನ Promote ಮಾಡುತ್ತದೆ.

Join Nadunudi News WhatsApp Group

How To Make Money On Youtube
Image Credit: Business Marshall

ಯೌಟ್ಯುಬೆರ್ ಗೆ ಎಷ್ಟು ಹಣವನ್ನ ನೀಡಲಾಗುತ್ತದೆ
ಯೌಟ್ಯುಬೆರ್ ಅಪ್ಲೋಡ್ ಮಾಡಿದ ವಿಡಿಯೋಗಳಿಗೆ ಅನುಗುಣವಾಗಿ ಹಣವನ್ನ ನೀಡಲಾಗುತ್ತದೆ. ವಿಡಿಯೋ ಎಷ್ಟು ಜನರು ನೋಡಿದ್ದರೆ ಮತ್ತು ಯಾವ ದೇಶದಲ್ಲಿ ನೋಡಿದ್ದರೆ ಅನ್ನುವುದರ ಮೇಲೆ ಹಣ ನಿರ್ಧಾರ ಆಗುತ್ತದೆ. ಹೌದು ಹೆಚ್ಚಿನ ಜನರು ನಿಮ್ಮ ವಿಡಿಯೋ ವೀಕ್ಷಣೆ ಮಾಡಿದರೆ ನಿಮಗೆ YouTube ದೊಡ್ಡ ಮಟ್ಟದ ಹಣವನ್ನ ನೀಡುತ್ತದೆ ಅಂತಾನೆ ಹೇಳಬಹುದು. ಇನ್ನು ನಿಮ್ಮ ವಿಡಿಯೋ ಹೆಚ್ಚು ಹೆಚ್ಚು ಜನರಿಗೆ ಹೋದಂತೆ ನಿಮ್ಮನ್ನ ಫಾಲೋ ಅಥವಾ ಸಬ್ಸ್ಕ್ರೈಬ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತದೆ ಹೋಗುತ್ತದೆ.

ಹಣದಲ್ಲಿ ಯೌಟ್ಯೂಬ್ ಗೆ ಎಷ್ಟು ಪಾಲು
ಜಾಹೀರಾತುದಾರರು ನೀಡುವ ಹಣದಲ್ಲಿ YouTube ತನ್ನ ಪಾಲನ್ನ ಇಟ್ಟುಕೊಂಡು ಉಳಿದ ಹಣವನ್ನ ಯೌಟ್ಯುಬೆರ್ ಗೆ ನೀಡುತ್ತದೆ. ಹೌದು ಯೌಟ್ಯೂಬ್ ಶೇಕಡಾ 45 ರಷ್ಟು ಹಣವನ್ನ ಇಟ್ಟುಕೊಂಡು ಶೇಕಡಾ 55 ರಷ್ಟು ಹಣವನ್ನ ಯುಟ್ಯುಬೆರ್ ಗೆ ನೀಡುತ್ತದೆ. YouTube ಮೂಲಕ ಸಾಕಷ್ಟು ಜನರು ತಮ್ಮ ಜೀವನವನ್ನ ಕಟ್ಟಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಕೇವಲ ವಿಡಿಯೋ ಅಪ್ಲೋಡ್ ಮಾಡಿದ ಮಾತ್ರ ನಿಮಗೆ ಹಣ ಸಿಗುವುದಿಲ್ಲ ಅನ್ನುವುದನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ನೀವು ಹಾಕಿದ ವಿಡಿಯೋದಲ್ಲಿ ಕಾಪಿರೈಟ್ಸ್ ಇದ್ದರೆ ನಿಮ್ಮ ವಿಡಿಯೋಗೆ ಯಾವುದೇ ಜಾಹಿರಾತು ನೀಡಲಾಗುವುದಿಲ್ಲ. ಯೌಟ್ಯೂಬ್ ನಿಯಮವನ್ನ ಸರಿಯಾಗಿ ಪಾಲನೆ ಮಾಡಿದರೆ ಮಾತ್ರ ನಿಮಗೆ YouTube ಜಾಹಿರಾತು ನೀಡುತ್ತದೆ.

Join Nadunudi News WhatsApp Group