HSRP Update: HSRP ನಿಯಮದಲ್ಲಿ ಬಹುದೊಡ್ಡ ಬದಲಾವಣೆ, ಇನ್ನು ನಂಬರ್ ಹಾಕಿಸದವರಿಗೆ ಹೊಸ ರೂಲ್ಸ್.

ಇನ್ನು HSRP ನಂಬರ್ ಹಾಕಿಸದವರಿಗೆ ಹೊಸ ರೂಲ್ಸ್.

HSRP Deadline Alert: ರಾಜ್ಯದಲ್ಲಿ ವಾಹನ ಸವಾರರು HSRP ನಂಬರ್ ಪ್ಲೇಟ್ ಸಂಬಂಧಿತ ಚಿಂತೆಯಲ್ಲಿದ್ದಾರೆ. ಈಗಾಗಲೇ ವಾಹನ ಮಾಲೀಕರಿಗೆ ನಂಬರ್ ಪ್ಲೇಟ್ ವಿಚಾರವಾಗಿ ಸರ್ಕಾರ ಪದೇ ಪದೇ ಗಡುವನ್ನು ವಿಸ್ತರಣೆ ಮಾಡಿದೆ.

ಈ ಬಾರಿ ಸರ್ಕಾರ ಮೇ 31 ರಿಂದ ಅವಧಿ ವಿಸ್ತರಣೆಯನ್ನು ಹೆಚ್ಚು ಸಮಯ ಮಾಡಿಲಾ. ಕೇವಲ 12 ದಿನಗಳು ಹೆಚ್ಚುವರಿಯಾಗಿ ನೀಡಿತ್ತು. ಇದೀಗ HSRP ಗಡುವು ಮುಗಿಯಲು ಕೇವಲ 6 ದಿನಗಳು ಮಾತ್ರ ಬಾಕಿ ಇದೆ. ಸದ್ಯ ಸರ್ಕಾರ ಈ ಗಡುವನ್ನು ಮತ್ತೆ ವಿಸ್ತರಿಸಿದೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ ವಿವರ ಇಲ್ಲಿದೆ.

HSRP Number Plate In Karnataka
Image Credit: Team-bhp

HSRP ನಿಯಮದಲ್ಲಿ ಬಹುದೊಡ್ಡ ಬದಲಾವಣೆ
ರಾಜ್ಯದ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಸಲು ಕರ್ನಾಟಕ ಸಾರಿಗೆ ಇಲಾಖೆ ಮೇ 31 ರ ವರೆಗೆ ಅನುಮತಿ ನೀಡಿತ್ತು. ಇದೀಗ HSRP ನಂಬರ್ ಪ್ಲೇಟ್ ಅಳವಡಿಸಲು ಸರ್ಕಾರ ಜೂನ್ 12 ರವರೆಗೆ ಕಾಲಾವಕಾಶ ನೀಡಿದೆ. ರಾಜ್ಯ ಸರ್ಕಾರ HSRP ನಿಯಮವನ್ನು ಹಲವು ಬಾರಿ ಸಡಿಲಗೊಳಿಸಿದೆ. ನವಂಬರ್ ನಿಂದ ಫೆಬ್ರವರಿ, ಫೆಬ್ರವರಿಯಿಂದ ಮೇ ವರೆಗೆ HSRP ಅಳವಡಿಕೆಗೆ ಸರ್ಕಾರ ದಿನಾಂಕ ವಿಸ್ತರಣೆ ಮಾಡಿತ್ತು. ಇದೀಗ ಮತ್ತೆ ಮೇ ಗಡುವಿನಿಂದ June 12 ಕ್ಕೆ ನಿಗದಿಪಡಿಸಿದೆ.

ಇನ್ನು ನಂಬರ್ ಹಾಕಿಸದವರಿಗೆ ಹೊಸ ರೂಲ್ಸ್
ಮುಂದಿನ ದಿನಗಳಲ್ಲಿ ಮತ್ತೆ ಸರ್ಕಾರ ದಿನಾಂಕ ವಿಸ್ತರಣೆ ಮಾಡುತ್ತದೆ ಎಂದು ವಾಹನ ಮಾಲೀಕರು ನಿರಾಳರಾಗುವಂತಿಲ್ಲ. ಸರ್ಕಾರ ಮತ್ತೆ ಗಡುವು ವಿಸ್ತರಿಸುವ ಯೋಜನೆ ಹಾಕಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಜೂನ್ 12 ರ ನಂತರ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಜೂನ್ 12 ರ ನಂತರ HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳು ರಸ್ತೆಗಿಳಿದರೆ 1000 ದಂಡ ವಿಧಿಸುವುದಾಗಿ ಸರ್ಕಾರ ಘೋಷಿಸಿದೆ. ದಂಡದ ಮೊತ್ತ ಇನ್ನು ಹೆಚ್ಚಾಗುವ ಸಾಧ್ಯತೆ ಇದೆಯೇ ಹೊರತು ನಿಯಮ ಉಲ್ಲಂಘನೆಗೆ ಯಾವುದೇ ವಿನಾಯಿತಿ ಇಲ್ಲ ಎಂದು ಸರ್ಕಾರ ವಾಹನ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದೆ. ಇನ್ನು 6 ದಿನದ ಒಳಗಾಗಿ ಎಲ್ಲ ವಾಹನ ಮಾಲೀಕರು HSRP ಅಳವಡಿಸುವುದು ಕಡ್ಡಾಯವಾಗಿದೆ.

HSRP Number Plate Latest Update
Image Credit: Spinny

ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಲು ಇಲ್ಲಿದೆ ಸುಲಭ ಮಾರ್ಗ
*https:transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ಬುಕ್ HSRP ಕ್ಲಿಕ್ ಮಾಡಿ.

Join Nadunudi News WhatsApp Group

*ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.

*ವಾಹನದ ಮೂಲ ವಿವರವನ್ನು ಭರ್ತಿ ಮಾಡಬೇಕು.

*ನಿಮಗೆ ಅನುಕೂಲವಾಗುವ ಡೀಲರ್ಸ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.

*ಶುಲ್ಕ ವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

*ನಂತರ ಮಾಲೀಕರ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

*ನಿಮಗೆ ಬೇಕಾದ ದಿನಾಂಕ, ಸ್ಥಳ, ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು.

*ಮಾಲೀಕರು HSRP ಯನ್ನು ಅಂಟಿಸಲು ವಾಹನ ತಯಾರಕರು ಅಥವಾ ಡೀಲರ್ ಗೆ ಭೇಟಿ ನೀಡಬೇಕು.

HSRP Deadline Alert
Image Credit: The Hindu

Join Nadunudi News WhatsApp Group