HSRP Details: HSRP ನಂಬರ್ ಪ್ಲೇಟ್ ಅಳವಡಿಕೆಯ ಶುಲ್ಕವೆಷ್ಟು..?

HSRP ಅಳವಡಿಕೆಯ ಶುಲ್ಕವೆಷ್ಟು..? ಸಂಪೂರ್ಣ ಮಾಹಿತಿ

HSRP Fees: ಸದ್ಯ 2019 ಏಪ್ರಿಲ್ 1 ರ ಮೊದಲು ನೋಂದಣಿಯಾಗಿರುವ ವಾಹನಗಳ ಮಾಲೀಕರಿಗೆ ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇನ್ನು 2019 ಏಪ್ರಿಲ್ 1 ರ ನಂತರ ನೋಂದಣಿಯಾಗಿರುವ ವಾಹನಗಳಲ್ಲಿ ಈಗಾಗಲೇ ಅತಿ ಸುರಕ್ಷತೆಯ ನೋಂದಣಿ ಫಲಕವನ್ನು ಅಳವಡಿಸಲಾಗಿದೆ. ಹೀಗಾಗಿ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಫೆಬ್ರವರಿ 17 ರೊಳಗೆ High Security Registration Plate (HSRP) ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಹೆಚ್ಎಸ್ಆರ್ ಪಿ ಅಳವಡಿಕೆ ಕಡ್ಡಾಯವಾಗಿದೆ. ಇದೀಗ ನಾವು ಈ ಲೇಖನದಲ್ಲಿ HSRP ಅಳವಡಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. HSRP ಅಳವಡಿಕೆಯ ಶುಲ್ಕವೆಷ್ಟು..? ನಂಬರ್ ಪ್ಲೇಟ್ ಬದಲಿಸದಿದ್ದರೆ ಏನಾಗುತ್ತದೆ..? HSRP ನಂಬರ್ ಪ್ಲೇಟ್ ಅರ್ಜಿ ಸಲ್ಲಿಕೆ ಹೇಗೆ..? ಎನ್ನುವುದರ ಬಗ್ಗೆ ವಿವರ ಇಲ್ಲಿದೆ.

HSRP Number Plate Fees
Image Credit: 91wheels

HSRP ನಂಬರ್ ಪ್ಲೇಟ್ ಅಳವಡಿಕೆಯ ಶುಲ್ಕವೆಷ್ಟು..?
ಎಚ್‌ಎಸ್‌ಆರ್‌ಪಿ ನೋಂದಣಿ ಫಲಕಗಳು ಹೆಚ್ಚು ಸುರಕ್ಷಿತವಾಗಿರುತ್ತವೆ ಮತ್ತು ಅವುಗಳನ್ನು ಬದಲಾಯಿಸಲು ಅಥವಾ ತಿದ್ದಲು ಸಾಧ್ಯವಿಲ್ಲ. ನಂಬರ್ ಪ್ಲೇಟ್‌ನ ಒಂದು ಬದಿಯು ನೀಲಿ ಚಕ್ರವನ್ನು ಹೋಲುವ ಹೋಲೋಗ್ರಾಮ್ ಹೊಂದಿದೆ. ಇದರ ಕೆಳಗೆ 10-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಇರಲಿದೆ. HSRP ಅಲ್ಯೂಮಿನಿಯಂ ಲೋಹದಿಂದ ಮಾಡಲ್ಪಟ್ಟಿದೆ ವಾಹನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಸ್ಕ್ಯಾನ್ ಮಾಡಬಹುದಾದ ಲೇಸರ್ ಕೋಡ್ ಅನ್ನು ಹೊಂದಿದೆ.

ನೀವು HSRP ನಂಬರ್ ಪ್ಲೇಟ್ ಅನ್ನು ಆನ್‌ ಲೈನ್‌ ನಲ್ಲಿ ಬುಕ್ ಮಾಡಬಹುದು. HSRP ನಂಬರ್ ಪ್ಲೇಟ್‌ ಗಳನ್ನು ಅಳವಡಿಸಲು ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್ ದರಗಳು ರೂ. 400 ರಿಂದ ರೂ. 600 ಇರುತ್ತದೆ. ಹಾಗೆಯೇ ನಾಲ್ಕು ಚಕ್ರದ ವಾಹನಗಳಿಗೆ ಒಂದು ಜೋಡಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಗಳ ಶುಲ್ಕ ರೂ. 650 ರಿಂದ ರೂ. 800 ರೂ. ಇರುತ್ತದೆ. HSRP Number Plate ಇಲ್ಲದ ವಾಹನ ಮೊದಲ ಬಾರಿಗೆ ರಸ್ತೆಗಿಳಿದರೆ 1000 ಹಾಗೂ ಎರಡನೇ ಬಾರಿ ರಸ್ತೆಗಿಳಿದರೆ 2000 ಹಾಗೂ ಪದೇ ಪದೇ ಇದೆ ತಪ್ಪಾದರೆ ಇನ್ನು ಹೆಚ್ಚಿನ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

HSRP Fine Update
Image Credit: Hindustantimes

HSRP ನಂಬರ್ ಪ್ಲೇಟ್ ಅರ್ಜಿ ಸಲ್ಲಿಕೆ ಹೇಗೆ..?
*https:transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ಬುಕ್ HSRP ಕ್ಲಿಕ್ ಮಾಡಿ.

Join Nadunudi News WhatsApp Group

*ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.

*ವಾಹನದ ಮೂಲ ವಿವರವನ್ನು ಭರ್ತಿ ಮಾಡಬೇಕು.

*ನಿಮಗೆ ಅನುಕೂಲವಾಗುವ ಡೀಲರ್ಸ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.

*ಶುಲ್ಕ ವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

*ನಂತರ ಮಾಲೀಕರ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

*ನಿಮಗೆ ಬೇಕಾದ ದಿನಾಂಕ, ಸ್ಥಳ, ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು.

*ಮಾಲೀಕರು HSRP ಯನ್ನು ಅಂಟಿಸಲು ವಾಹನ ತಯಾರಕರು ಅಥವಾ ಡೀಲರ್ ಗೆ ಭೇಟಿ ನೀಡಬೇಕು.

Join Nadunudi News WhatsApp Group