HSRP Fine: HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಎಷ್ಟು ದಂಡ ಕಟ್ಟಬೇಕು…? ಸರ್ಕಾರದ ಆದೇಶ

HSRP ನಂಬರ್ ಪ್ಲೇಟ್ ಇಲ್ಲದಿದ್ದರೆ ಇಷ್ಟು ದಂಡ ಫಿಕ್ಸ್

HSRP Fine Update: ಈ ಹಿಂದೆ HSRP ಅಳವಡಿಕೆಗೆ ನವೆಂಬರ್ 17 ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ದೇಶದಲ್ಲಿರುವ ಎಲ್ಲ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಆಗದೆ ಇರುವ ಕಾರಣ ಸಾರಿಗೆ ಇಲಾಖೆ ಇನ್ನಷ್ಟು ಸಮಯಾವಕಾಶವನ್ನು ನೀಡಿತ್ತು.

ದಿನಾಂಕ ವಿಸ್ತರಸಿ ಮತ್ತೆ ಕೊನೆಯ ದಿನಾಂಕ ಹತ್ತಿರವಾಗುತ್ತಿದರು ಕೂಡ ವಾಹನ ಸವರಾರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದನ್ನೆಲ್ಲಾ ಗಮನಿಸಿದ ಸಾರಿಗೆ ಇಲಾಖೆ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ಮುಂದಾಗಿದೆ. ವಾಹನ ಮಾಲೀಕರು ಈ ತಪ್ಪು ಮಾಡಿದರೆ ಇಷ್ಟು ದಂಡ ಪಾವತಿಸುವುದು ಕಡ್ಡಾಯವಾಗಿದೆ.

HSRP Number Plate Fine
Image Credit: Deccanherald

HSRP ನಂಬರ್ ಪ್ಲೇಟ್ ಇಲ್ಲದಿದ್ದರೆ ಇಷ್ಟು ದಂಡ ಫಿಕ್ಸ್
ದೇಶದಲ್ಲಿ 2019 ರ ಹಿಂದಿನ ವರ್ಷದಿಂದ 1.70 ಕೋಟಿ ವಾಹನಗಳು ನೋಂದಣಿಯಾಗಿವೆ. ಇಷ್ಟು ವಾಹನಗಳು ಇನ್ನು ಕೂಡ HSRP ಅಳವಡಿಕೆ ಮಾಡಿಕೊಂಡಿಲ್ಲ. ವಾಹನ ಮಾಲೀಕರು ಇದರ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸಾರಿಗೆ ಇಲಾಖೆ HSRP Number Plate ಇಲ್ಲದ ವಾಹನಗಳಿಗೆ ಬಾರಿ ದಂಡ ವಿಧಿಸಲು ತೀರ್ಮಾನಿಸಿದೆ.

HSRP Number Plate ಇಲ್ಲದ ವಾಹನ ಮೊದಲ ಬಾರಿಗೆ ರಸ್ತೆಗಿಳಿದರೆ 1000 ಹಾಗೂ ಎರಡನೇ ಬಾರಿ ರಸ್ತೆಗಿಳಿದರೆ 2000 ಹಾಗೂ ಪದೇ ಪದೇ ಇದೆ ತಪ್ಪಾದರೆ ಇನ್ನು ಹೆಚ್ಚಿನ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ನೀವು HSRP Number Plate ಅಳವಡಿಸದೇ ನಿಮ್ಮ ವಾಹನವನ್ನು ರಸ್ತೆಗಿಳಿಸುವ ಮುನ್ನ ಸ್ವಲ್ಪ ಯೋಚಿಸಿ. ಇಲ್ಲವಾದರೆ ಬಾರಿ ದಂಡವನ್ನು ಕಟ್ಟಬೇಕಾಗುತ್ತದೆ ಎಚ್ಚರ.

HSRP Fine Update
Image Credit: Hindustantimes

HSRP Number Plate ಹೆಚ್ಚು ಸುರಕ್ಷಿತವಾಗಿರಲಿದೆ
ಎಚ್‌ಎಸ್‌ಆರ್‌ಪಿ ನೋಂದಣಿ ಫಲಕಗಳು ಹೆಚ್ಚು ಸುರಕ್ಷಿತವಾಗಿರುತ್ತವೆ ಮತ್ತು ಅವುಗಳನ್ನು ಬದಲಾಯಿಸಲು ಅಥವಾ ತಿದ್ದಲು ಸಾಧ್ಯವಿಲ್ಲ. ನಂಬರ್ ಪ್ಲೇಟ್‌ ನ ಒಂದು ಬದಿಯು ನೀಲಿ ಚಕ್ರವನ್ನು ಹೋಲುವ ಹೋಲೋಗ್ರಾಮ್ ಹೊಂದಿದೆ. ಇದರ ಕೆಳಗೆ 10-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಇರಲಿದೆ.

Join Nadunudi News WhatsApp Group

HSRP ಅಲ್ಯೂಮಿನಿಯಂ ಲೋಹದಿಂದ ಮಾಡಲ್ಪಟ್ಟಿದೆ ಮತ್ತು ವಾಹನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಸ್ಕ್ಯಾನ್ ಮಾಡಬಹುದಾದ ಲೇಸರ್ ಕೋಡ್ ಅನ್ನು ಹೊಂದಿದೆ. ನೀವು https:transport.karnataka.gov.in ಅಥವಾ www.siam.in ಗೆ ಭೇಟಿ ನೀಡುವ ಮೂಲಕ HSRP Number Plate ಅನ್ನು ಬುಕ್ ಮಾಡಿಕೊಳ್ಳಬಹುದು.

Join Nadunudi News WhatsApp Group