HSRP Update: HSRP ನಂಬರ್ ಪ್ಲೇಟ್ ಇನ್ನು ಹಾಕಿಸಿಲ್ವ….? ಹಾಗಾದರೆ ಸರ್ಕಾರದಿಂದ ನಿಮಗೊಂದು ಬಿಗ್ ಅಪ್ಡೇಟ್

HSRP ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ ಆಗುತ್ತಾ...? ಇಲ್ಲಿದೆ ಬಿಗ್ ಅಪ್ಡೇಟ್

HSRP Latest Update: ರಾಜ್ಯದಲ್ಲಿ HSRP ಅಳವಡಿಕೆ ಕಡ್ಡಾಯವಾಗಿದೆ. ಸದ್ಯ 2019 ಏಪ್ರಿಲ್ 1 ರ ಮೊದಲು ನೋಂದಣಿಯಾಗಿರುವ ವಾಹನ ಮಾಲೀಕರು HSRP ಅಳವಡಿಕೆ ಮಾಡುವುದು ಅಗತ್ಯವಾಗಿದೆ. 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ನಿಗದಿಪಡಿಸಿದ ಸಮಯದೊಳಗೆ High Security Registration Plate (HSRP) ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.

ಸರ್ಕಾರ HSRP Booking ಗಾಗಿ ಆನ್ಲೈನ್ ಮೂಲಕ ಅವಕಾಶವನ್ನು ನೀಡಿದೆ. ಸದ್ಯ ಎರಡು ಬಾರಿ ದಿನಾಂಕ ವಿಸ್ತರಣೆ ಮಾಡಿರುವ ಸರ್ಕಾರ ಇದೀಗ ವಾಹನ ಮಾಲೀಕರಿಗೆ ಕೊನೆಯ ಎಚ್ಚರಿಕೆಯನ್ನು ನೀಡಿದೆ. ವಾಹನ ಸವಾರರು ಆದಷ್ಟು ಬೇಗ ತಮ್ಮ 2019 ರ ಹಿಂದಿನ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ.

HSRP Latest Update
Image Credit: The Hindu

HSRP ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ ಆಗುತ್ತಾ…?
ಈಗಾಗಲೇ ಸರ್ಕಾರ HSRP ನಂಬರ್ ಪ್ಲೇಟ್ ಅಳವಡಿಕೆಗೆ ಎರಡು ಬಾರಿ ಗಡುವನ್ನು ವಿಸ್ತರಿಸಿದೆ. ನವೆಂಬರ್ ನಲ್ಲಿ ಮೊದಲ ಗಡುವು ನೀಡಿದ ಸರ್ಕಾರ ಹೆಚ್ಚಿನ ಜನರು HSRP ಅಳವಡಿಸದ ಕಾರಣ ಗಡುವನ್ನು ಫೆಬ್ರವರಿಯವರೆಗೆ ನೀಡಿತ್ತು. ಆಗಲು ಕೂಡ ಸಾಕಷ್ಟು ವಾಹನ ಮಾಲೀಕರು ತಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಅಳವಡಿಸುವಲ್ಲಿ ವಿಫಲರಾಗಿದ್ದಾರೆ. ಈ ಕಾರಣಕ್ಕೆ ಗಡವುವನ್ನು ಮತ್ತೊಮ್ಮೆ ಫೆಬ್ರವರಿ ತನಕ ವಿಸ್ತರಿಸಲಾಗಿದೆ.

ರಾಜ್ಯದಲ್ಲಿ ಇದುವರೆಗೆ ಕೇವಲ 34 ಲಕ್ಷ ಎಚ್‌ಎಸ್‌ಆರ್‌ಪಿಗಳು ನೋಂದಣಿಯಾಗಿವೆ. ಎರಡು ಬಾರಿ ಗಡುವು ವಿಸ್ತರಿಸಿದ್ದರೂ ಎಚ್‌ಎಸ್‌ಆರ್‌ಪಿಯನ್ನು ಕಡಿಮೆ ಪ್ರಮಾಣದಲ್ಲಿ ಅಳವಡಿಸಲಾಗಿದೆ. ಫೆಬ್ರವರಿ ವೇಳೆಗೆ ಸುಮಾರು 18 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದರು ಮತ್ತು ಏಪ್ರಿಲ್ ವೇಳೆಗೆ ಈ ಸಂಖ್ಯೆ ದ್ವಿಗುಣಗೊಂಡಿದೆ. ಆದರೆ, ಹೆಚ್ಚಿನ ಸಂಖ್ಯೆಯ ವಾಹನಗಳು ಎಚ್‌ಎಸ್‌ಆರ್‌ಪಿ ನೋಂದಣಿ ಮಾಡಬೇಕಾಗಿದೆ ಎಂದು ಸಾರಿಗೆ ಹೆಚ್ಚುವರಿ ಆಯುಕ್ತ ಸಿ.ಮಲ್ಲಿಕಾರ್ಜುನ ಹೇಳಿದ್ದಾರೆ. ಮತ್ತೊಮ್ಮೆ ಸರ್ಕಾರ ಗಡುವನ್ನು ವಿಸ್ತರಿಸುವುದು ಅನುಮಾನವಿದೆ.

HSRP Number Plate News
Image Credit: Economic Times

ನಂಬರ್ ಪ್ಲೇಟ್ ಇಲ್ಲದೆ ವಾಹನಗಳು ರಸ್ತೆಗೆ ಬಂದರೆ ಇಷ್ಟು ದಂಡ ಖಚಿತ
HSRP Number Plate ಇಲ್ಲದ ವಾಹನ ಮೊದಲ ಬಾರಿಗೆ ರಸ್ತೆಗಿಳಿದರೆ 1000 ರೂ. ಹಾಗೂ ಎರಡನೇ ಬಾರಿ ರಸ್ತೆಗಿಳಿದರೆ 2,000 ರೂ. ಹಾಗೂ ಪದೇ ಪದೇ ಇದೆ ತಪ್ಪಾದರೆ ಇನ್ನು ಹೆಚ್ಚಿನ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ನೀವು Online ನಲ್ಲಿ HSRP Number Plate ಅನ್ನು Order ಮಾಡಿಕೊಳ್ಳಬಹುದಾಗಿದೆ. ನೀವು https:transport.karnataka.gov.in ಅಥವಾ www.siam.in ಗೆ ಭೇಟಿ ನೀಡುವ ಮೂಲಕ HSRP Number Plate ಅನ್ನು ಬುಕ್ ಮಾಡಿಕೊಳ್ಳಬಹುದು.

Join Nadunudi News WhatsApp Group

HSRP ನಂಬರ್ ಪ್ಲೇಟ್ ಇಲ್ಲದೆ ಇದ್ದರೆ ಇಷ್ಟು ದಂಡ ಕಡ್ಡಾಯ
HSRP Number ಇಲ್ಲದೆ ನಿಮ್ಮ ವಾಹನವನ್ನು ರಸ್ತೆಗಿಳಿಸುವ ಮುನ್ನ ದಂಡದ ಬಗ್ಗೆ ಯೋಚಿಸುವುದು ಉತ್ತಮ. ಮೇ 31  2024 ರ ವರೆಗೆ ಮಾಲೀಕರಿಗೆ HSRP ಅಳವಡಿಕೆಗೆ ಸಮಯಾವಕಾಶವನ್ನು ನೀಡಲಾಗಿದೆ. ಆದಷ್ಟು ಬೇಗ ನಿಮ್ಮ ವಾಹನಕ್ಕೆ HSRP ಅಳವಡಿಸಿಕೊಳ್ಳುವ ಮೂಲಕ ದಂಡ ಪಾವತಿಯಿಂದ ತಪ್ಪಿಸಿಕೊಳ್ಳಿ. ಜೂನ್ 1 ರಿಂದ ಎಲ್ಲಾ ವಾಹನ ಸವಾರರು HSRP Number Plate ಇಲದೆ ಇದ್ದರೆ ದಂಡವನ್ನು ಪಾವತಿಸಬೇಕಾಗುತ್ತದೆ. ದಂಡದ ಬಗ್ಗೆ ಯಾವುದೇ ವಿನಾಯಿತಿ ಇಲ್ಲ ಎಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ. ಈ ಬಾರಿ ಗಡುವು ಕೂಡ ವಿಸ್ತರಣೆ ಆಗುವ ಸಾಧ್ಯತೆ ಕಡಿಮೆ ಇದೆ.

HSRP Application Last Date
Image Credit: Paytm

Join Nadunudi News WhatsApp Group