HSRP Online Scam: HSRP ನಂಬರ್ ಪ್ಲೇಟ್ ಹಾಕಿಸುವವರಿಗೆ ಪೊಲೀಸರಿಂದ ಇನ್ನೊಂದು ಎಚ್ಚರಿಕೆ, ಈ ತಪ್ಪಿಗೆ ದಂಡ ಖಚಿತ

HSRP ನಂಬರ್ ಪ್ಲೇಟ್ ವಿಷಯವಾಗಿ ಟ್ರಾಫಿಕ್ ಪೋಲೀಸರ ಎಚ್ಚರಿಕೆ, ದಂಡ ಕಟ್ಟಬೇಕಾಗುತ್ತದೆ

HSRP Online Scam Alert: ಸದ್ಯ ವಾಹನ ಮಾಲೀಕರು ಈ HSRP Number Plate ಅಳವಡಿಕೆಯಲ್ಲಿ ಬ್ಯುಸಿ ಆಗಿದ್ದರೆ ಎನ್ನಬಹುದು. ಸದ್ಯ ಸರ್ಕಾರ ಈ ತಿಂಗಳಿನಲ್ಲಿ ವಾಹನ ಮಾಲೀಕರಿಗೆ HSRP ಅಳವಡಿಕೆಯ ಬಗ್ಗೆ ರಿಲೀಫ್ ನೀಡಿದೆ. HSRP ಅಳವಡಿಕೆಗೆ ಇನ್ನಷ್ಟು ಸಮಯವನ್ನು ನೀಡಿದೆ.

ಇದೀಗ HSRP Number Plate ಅಳವಡಿಕೆಯ ಜೊತೆಗೆ HSRP Online Scam ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ. Online Scam ಗಳಿಂದಾಗಿ ಜನರು ಹೆಚ್ಚು ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಸಂಬಂಧ ಸರ್ಕಾರ HSRP Scam ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಿದೆ.

HSRP fine Karnataka
Image Credit: Ease My Watch

HSRP ನಂಬರ್ ಪ್ಲೇಟ್ ಹಾಕಿಸುವವರಿಗೆ ಪೊಲೀಸರಿಂದ ಇನ್ನೊಂದು ಎಚ್ಚರಿಕೆ
ವಾಹನ ಮಾಲೀಕರಿಗೆ ಇನ್ನು ಮೂರು ತಿಂಗಳು HSRP ಅಳವಡಿಕೆಗೆ ಸಮಯವನ್ನು ನೀಡಿದೆ. ಸದ್ಯ ಈ HSRP ಅಳವಡಿಕೆಯು Online Scam ಗೆ ಒಳಗಾಗುತ್ತಿದೆ. ಸೈಬರ್ ಕ್ರಿಮಿನಲ್ ಗಳು ಈ HSRP ಅನ್ನು ಬಳಸಿಕೊಂಡು ವಾಹನ ಮಾಲೀಕರನ್ನು ವಂಚಿಸಲು ಒಂದೊಂದು ಸ್ಕೀಮ್ ಗಳನ್ನೂ ಹಾಕುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಜನರಿಗೆ ಎಚ್ಚರಿಕೆ ನೀಡುತ್ತಿದೆ. HSRP ಅಳವಡಿಕೆಯ ಹೆಸರಿನಲ್ಲಿ ಇದೀಗ ಆನ್ಲೈನ್ ಫ್ರಾಡ್ ಆರಂಭವಾಗಿದೆ.

ಈ ಬಗ್ಗೆ ಸರ್ಕಾರ ಜನಸಮಾನ್ಯರಿಗೆ ಎಚ್ಚರಿಕೆಯನ್ನು ನೀಡಿದೆ. HSRP ಅಳವಡಿಕೆಯ ಹೆಸರಿನಲ್ಲಿ ಯಾರೇ ಆದರೂ ಕರೆ ಅಥವಾ ಸಂದೇಶದ ಮೂಲಕ ನಿಮ್ಮನ್ನು ತಲುಪಿದರೆ ತಕ್ಷಣ ನೀವು ಎಚ್ಚೆತ್ತುಕೊಳ್ಳಬೇಕು. ಈ ರೀತಿಯ ಸಂದೇಶ ಅಥವಾ ಕರೆ ನಿಮ್ಮನು ವಂಚಿಸಲು ಬಂದಿರುವುದು ಎನ್ನುವುದು ನಿಮಗೆ ತಿಳಿಯಬೇಕು. online ನಲ್ಲಿ ಸ್ವತಃ ನೀವೇ HSRP ಗೆ Apply ಮಾಡುವುದರಿಂದ ವಂಚನೆಯುನ್ನು ತಪ್ಪಿಸಿಕೊಳ್ಳಬಹುದು.

HSRP Fake Link Scam
Image Credit: Original Source

ಈ ತಪ್ಪಿಗೆ ದಂಡ ಖಚಿತ
ಆನ್ಲೈನ್ ನಲ್ಲಿ HSRP ನೋಂದಣಿಗೆ ನಕಲಿ ಲಿಂಕ್ ಗಳನ್ನೂ OQ Code ಗಳನ್ನೂ ಶೇರ್ ಮಾಡಲಾಗುತ್ತಿದೆ. ವಾಹನ ಮಾಲೀಕರು HSRP ನೋಂದಣಿ ಮಾಡುವ ಬರದಲ್ಲಿ ಫೇಕ್ ಲಿಂಕ್ ನಲ್ಲಿ ನೋಂದಣಿ ಮಾಡಿಕೊಂಡರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.

Join Nadunudi News WhatsApp Group

RTO ಅಧಿಕೃತ Website ನ ಹೊರತಾಗಿ ಸರ್ಕಾರ ಇನ್ನಿತರ ಯಾವುದೇ ಲಿಂಕ್ ಅನ್ನು HSRP Registration ಗಾಗಿ ಬಿಡುಗಡೆ ಮಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವಂತಹ ನಕಲಿ ಲಿಂಕ್ ಗಳ ಬಗ್ಗೆ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ನೀವು ಯಾವುದೇ ಲಿಂಕ್ ನಲ್ಲಿ HSRP Registration ಮಾಡುವ ಮುನ್ನ ಅದರ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ. ನಕಲಿ website ಗಳಲ್ಲಿ Order ಮಾಡಿ ವಾಹನಗಳಿಗೆ HSRP ಅಳವಡಿಸಿದರೆ ಅದರಿಂದ ಹೆಚ್ಚಿನ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ನಕಲಿ HSRP ಅಳವಡಿಸಿಕೊಂಡರೆ ನೀವು ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದೊದಗಬಹುದು ಎಚ್ಚರ.

Join Nadunudi News WhatsApp Group