HSRP Benefit: HSRP ನಂಬರ್ ಪ್ಲೇಟ್ ಹಾಕಿಸಿಕೊಂಡರೆ ಏನು ಲಾಭ…? ವಾಹನಕ್ಕೆ HSRP ನಂಬರ್ ಪ್ಲೇಟ್ ಯಾಕೆ ಅಗತ್ಯ…?

HSRP ನಂಬರ್ ಪ್ಲೇಟ್ ಅಳವಡಿಕೆಯಿಂದ ಏನು ಪ್ರಯೋಜನ..?

HSRP Number Plate Benefit: ಸದ್ಯ ದೇಶದಲ್ಲಿ ವಾಹನಗಳ ಮಾಲೀಕರಿಗೆ ಈ HSRP Number Plate ಬಗ್ಗೆ ಬಾರಿ ಟೆನ್ಷನ್ ಶುರುವಾಗಿದೆ. ಕಾರಣ ಸರ್ಕಾರ ಕಡ್ಡಾಯಗೊಳಿಸಿರುವ HSRP ಅಳವಡಿಕಿಗೆ ಇನ್ನೇನು ಕೇವಲ ಐದು ದಿನಗಳು ಮಾತ್ರ ಬಾಕಿ ಇದೆ. ಇನ್ನೂ ಕೇವಲ 5 ದಿನಗಳಲ್ಲಿ ಎಲ್ಲ ವಾಹನ ಮಾಲೀಕರು ಕೂಡ HSRP ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರದ ಈ ನಿಯಮ ಉಲ್ಲಂಘನೆಯಾದರೆ ನೀವು ನಿಮ್ಮ ವಾಹನವನ್ನು ರಸ್ತೆಗಿಳಿಸಿದರೆ ಬಾರಿ ಪ್ರಮಾಣದಲ್ಲಿ ದಂಡವನ್ನು ಪಾವತಿಸಬೇಕಾಗುತ್ತದೆ.

HSRP Number Plate Latest Update
Image Credit: Jagran

ವಾಹನ ಮಾಲೀಕರಿಗೆ ಟೆನ್ಷನ್ ಶುರು
ಇನ್ನು ವಾಹನ ಸವಾರರು ಈಗ ಯೋಚಿಸುತ್ತಿರಬಹುದು. HSRP ನಂಬರ್ ಪ್ಲೇಟ್ ಅಳವಡಿಕೆಯಿಂದ ಏನು ಪ್ರಯೋಜನವಿದೆ..? ಸರ್ಕಾರ ಇದನ್ನು ಏಕೆ ಕಡ್ಡಾಯಗೊಳಿಸಿದೆ..? ಎನ್ನುವ ಬಗ್ಗೆ ಎಲ್ಲರು ಯೋಚಿಸುತ್ತಿರಬಹುದು. ಇದೀಗ ನಾವು ಈ ಲೇಖನದಲ್ಲಿ HSRP ಅಳವಡಿಕೆಯಿಂದ ಏನು ಪ್ರಯೋಜನವಾಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

HSRP ನಂಬರ್ ಪ್ಲೇಟ್ ಅಳವಡಿಕೆಯಿಂದ ಏನು ಪ್ರಯೋಜನ..?
ಆಧುನಿಕ ಜಗತ್ತಿನಲ್ಲಿ ಈ HSRP ಹೊಸ ಕ್ರಾಂತಿ ಮೂಡಿಸಲಿದೆ. ಇದು ಅಲ್ಯೂಮಿನಿಯಂ ಲೋಹದಿಂದ ಮಾಡಿದ ಪ್ಲೇಟ್ ಆಗಿದೆ. ಹೊಸ ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಕಡ್ಡಾಯವಾಗಿದ್ದು, ಹೊಸ ನಂಬರ್ ಪ್ಲೇಟ್‌ ಗಳಲ್ಲಿ ಇಂಗ್ಲಿಷ್ ಅಕ್ಷರಗಳು ಮತ್ತು ಸಂಖ್ಯೆಗಳನ್ನು ದೊಡ್ಡ ರೂಪದಲ್ಲಿ ಮುದ್ರಿಸಲಾಗುತ್ತದೆ. ಈ ಪ್ಲೇಟ್ ಅನ್ನು ಸ್ಥಾಪಿಸುವಾಗ ಎರಡು ಲಾಕಿಂಗ್ ಪಿನ್ಗಳನ್ನು ಸೇರಿಸಲಾಗುತ್ತದೆ. ಮತ್ತು ಪೇಪರ್ ಗಳನ್ನೂ ಸ್ಟೇಪ್ಲರ್ ಪಿನ್ ಮಾಡುವಾಗ ಪಂಚ್ ಮಾಡುವ ರೀತಿಯಲ್ಲಿಯೇ ವಾಹನಕ್ಕೆ ಹೊಸ ನಂಬರ್ ಪ್ಲೇಟ್ ಅಂಟಿಸಲಾಗುತ್ತದೆ.

HSRP Number Plate Benefits
Image Credit: The Economic Times

HSRP ನಂಬರ್ ಪ್ಲೇಟ್‌ ನ ಎಡಭಾಗದಲ್ಲಿ ನೀಲಿ ಬಣ್ಣದಲ್ಲಿ ಅಶೋಕ ಚಕ್ರ ಮುದ್ರೆಯನ್ನು ಕಾಣಬಹುದು. ಈ 20 ಎಂಎಂ ಉದ್ದದ ಸ್ಟಾಂಪ್ ಅನ್ನು ಕ್ರೋಮಿಯಂ ಲೋಹವನ್ನು ಬಳಸಿ ತಯಾರಿಸಲಾಗುತ್ತದೆ. ಈ ಪ್ಲೇಟ್ ಆಕರ್ಷಕವಾಗಿ ಕಾಣುತ್ತದೆ ಮತ್ತು ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ. ವಾಹನಗಳ ಭದ್ರತೆಗೆ ಈ HSRP ಅನುಕೂಲವಾಗಿರುತ್ತದೆ.

ನಿಮ್ಮ ವಾಹನ ಕಳುವಾದರೆ ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ
HSRP ನಂಬರ್ ಪ್ಲೇಟ್‌ ಗಳನ್ನು ಸುಧಾರಿತ ತಂತ್ರಜ್ಞಾನ ಮತ್ತು ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ. HSRP ನಂಬರ್ ಪ್ಲೇಟ್ ನಿಮ್ಮ ಕಾರು ಅಥವಾ ದ್ವಿಚಕ್ರ ವಾಹನದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ. HSRP ನಂಬರ್ ಪ್ಲೇಟ್ ಎಂಜಿನ್ ಸಂಖ್ಯೆ ಮತ್ತು ವಾಹನದ ಚಾಸಿಸ್ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿಯನ್ನು ಒಳಗೊಂಡಿದೆ. ಈ ಎಲ್ಲಾ ಮಾಹಿತಿಯನ್ನು ಕೇಂದ್ರ ಡೇಟಾ ಬೇಸ್‌ ನಲ್ಲಿ ಸಂಗ್ರಹಿಸಲಾಗಿದೆ. ಆಕಸ್ಮಿಕವಾಗಿ ನಿಮ್ಮ ವಾಹನ ಕಳುವಾದರೆ ಈ ಮಾಹಿತಿಯು ತುಂಬಾ ಉಪಯುಕ್ತವಾಗುತ್ತದೆ. ಇದರಿಂದಾಗಿ ನಿಮ್ಮ ವಾಹನವನ್ನು ಕದ್ದವರನ್ನು ಸುಲಭವಾಗಿ ಕಂಡುಹಿಡಿಯಬಹುದು.

Join Nadunudi News WhatsApp Group

Join Nadunudi News WhatsApp Group