HSRP Details: ಯಾವ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ…? ವಾಹನಗಳಿಗೆ ಸರ್ಕಾರದ ಹೊಸ ನಿಯಮ.
ಇದೀಗ ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಮಹತ್ವದ ಘೋಷಣೆಯನ್ನು ಹೊರಡಿಸಿದೆ.
HSRP Number Plate Details: ದೇಶದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ದೇಶದಲ್ಲಿ Traffic ಸಮಸ್ಯೆ ಎದುರಾಗುತ್ತವೆ. Traffic ಸಮಸ್ಯೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಇನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹಳೆಯ ವಾಹನಗಳ ನೋಂದಣಿಯ ಬಗ್ಗೆ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿತ್ತು.
ಇತ್ತೀಚಿಗೆ ಕೇಂದ್ರ ಸರ್ಕಾರ ವಾಹನಗಳ ನಿಯಂತ್ರಕ್ಕಾಗಿ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಇದೀಗ ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಇಲಾಖೆ ಹೊಸ ನಿಯಮವನ್ನು ಜಾರಿಗೊಳಿಸಿ ನಿಯಮ ಪಾಲಿಸಲು ದಿನಾಂಕದ ಗಡುವನ್ನು ನೀಡಿದೆ.
ವಾಹನ ಮಾಲೀಕರಿಗೆ ಸರ್ಕಾರದ ಹೊಸ ನಿಯಮ
ಸದ್ಯ 2019 ಏಪ್ರಿಲ್ 1 ರ ಮೊದಲು ನೋಂದಣಿಯಾಗಿರುವ ವಾಹನಗಳ ಮಾಲೀಕರಿಗೆ ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.ಇನ್ನು 2019 ಏಪ್ರಿಲ್ 1 ರ ನಂತರ ನೋಂದಣಿಯಾಗಿರುವ ವಾಹನಗಳಲ್ಲಿ ಈಗಾಗಲೇ ಅತಿ ಸುರಕ್ಷತೆಯ ನೋಂದಣಿ ಫಲಕವನ್ನು ಅಳವಡಿಸಲಾಗಿದೆ.
ಇನ್ನು 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ನವೆಂಬರ್ 17 ರೊಳಗೆ High Security Registration Plate (HSRP) ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಹೆಚ್ಎಸ್ಆರ್ ಪಿ ಅಳವಡಿಕೆ ಕಡ್ಡಾಯವಾಗಿದೆ.
ಯಾವ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ…?
ಸಾರಿಗೆ ಇಲಾಖೆಯ ಆದೇಶದ ಪ್ರಕಾರ, ವಾಹನ ಮಾಲೀಕರು 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳನ್ನು ನವೆಂಬರ್ 17 ರೊಳಗೆ High Security Registration Plate ಅಳವಡಿಸಿಕೊಳ್ಳುವಂತೆ ಆದೇಶ ನೀಡಲಾಗಿದೆ. ವಾಹನಗಳಿಗೆ ಹೆಚ್ ಎಸ್ ಆರ್ ಪಿಯನ್ನು ಕಡ್ಡಾಯಗೊಳಿಸಲಾಗಿದೆ. ನಿಗದಿತ ಅವಧಿಯೊಳಗೆ ಅಂದರೆ ನವೆಂಬರ್ 17 ರೊಳಗೆ 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯವಾಗಿದೆ.
HSRP ನಂಬರ್ ಪ್ಲೇಟ್ ಅಳವಡಿಕೆ ಹೇಗೆ
HSRP ಅಳವಡಿಸದಿದ್ದರೆ ಅಂತಹ ವಾಹನದ ಮಾಲೀಕರಿಗೆ 500 ರಿಂದ 1000 ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದೆ. ವಾಹನಗಳ ಮಾಲೀಕರು ಶೋರೂಮ್ ಅಥವಾ ಡೀಲರ್ ಗಳಲ್ಲಿ HSRP ನಂಬರ್ ಪ್ಲೇಟ್ ಗಾಗಿ ಮನವಿ ಸಲ್ಲಿಸಬಹುದು.
ನಾಲ್ಕು ಚಕ್ರ ವಾಹನಗಳಿಗೆ 400 ರಿಂದ 500 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ 250 ರಿಂದ 300 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಇನ್ನು https:transport.karnataka.gov.in ಅಥವಾ www.siam.in ಗೆ ಭೇಟಿ ನೀಡುವ ಮೂಲಕ HSRP ಅನ್ನು ನೋಂದಣಿ ಮಾಡಿಕೊಳ್ಳಬಹುದು.