HSRP Alert: HSRP ನಂಬರ್ ಪ್ಲೇಟ್ ಇನ್ನೂ ಹಾಕಿಸಿಲ್ವ…? ಹಾಗಾದರೆ ತಪ್ಪದೆ ತಕ್ಷಣ ಈ ಕೆಲಸ ಮಾಡಿ

HSRP ನಂಬರ್ ಪ್ಲೇಟ್ ಹಾಕಿಸದವರು ತಕ್ಷಣ ಈ ಕೆಲಸ ಮಾಡಿ

HSRP New Update: ರಾಜ್ಯದಲ್ಲಿ ವಾಹನ ಸವಾರರು 2019 ಹಿಂದೆ ನೋಂದಣಿಯಾಗಿದ್ದ ವಾಹನಗಳಿಗೆ HSRP Number Plate ಹಾಕಿಸುವುದು ಅಗತ್ಯವಾಗಿದೆ. ಈ ಬಗೆ ರಾಜ್ಯ ಸರ್ಕಾರ ವಾಹನ ಸವಾರರಿಗೆ ಸಾಕಷ್ಟು ಬಾರಿ ಸೂಚನೆ ನೀಡಿದೆ.

ಈಗಾಗಲೇ ರಾಜ್ಯ ಸರ್ಕಾರ ಮೂರು ಬಾರಿ HSRP ಅಳವಡಿಕೆಗೆ ಸಾಮಾನ್ಯರಿಗೆ ಅವಕಾಶವನ್ನು ನೀಡಿದೆ. ಸದ್ಯ ಸರ್ಕಾರ ವಾಹನ ಸವಾರರಿಗೆ ಕೊನೆಯ ಅವಕಾಶವನ್ನು ನೀಡಿದೆ. ನಿಮ್ಮ ವಾಹನಕ್ಕೆ ಇನ್ನು ಕೂಡ HSRP ಅಳವಡಿಕೆ ಆಗದೆ ಇದ್ದರೆ ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ.

HSRP New Updates
Image Credit: Paytm

HSRP ನಂಬರ್ ಪ್ಲೇಟ್ ಇನ್ನೂ ಹಾಕಿಸಿಲ್ವ…?
ರಾಜ್ಯದ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಸಲು ಕರ್ನಾಟಕ ಸಾರಿಗೆ ಇಲಾಖೆ ಮೇ 31 ರ ವರೆಗೆ ಅನುಮತಿ ನೀಡಿತ್ತು. ಇದೀಗ HSRP ನಂಬರ್ ಪ್ಲೇಟ್ ಅಳವಡಿಸಲು ಸರ್ಕಾರ ಜೂನ್ 12 ರವರೆಗೆ ಕಾಲಾವಕಾಶ ನೀಡಿದೆ. ರಾಜ್ಯ ಸರ್ಕಾರ HSRP ನಿಯಮವನ್ನು ಹಲವು ಬಾರಿ ಸಡಿಲಗೊಳಿಸಿದೆ. ನವಂಬರ್ ನಿಂದ ಫೆಬ್ರವರಿ, ಫೆಬ್ರವರಿಯಿಂದ ಮೇ ವರೆಗೆ HSRP ಅಳವಡಿಕೆಗೆ ಸರ್ಕಾರ ದಿನಾಂಕ ವಿಸ್ತರಣೆ ಮಾಡಿತ್ತು. ಇದೀಗ ಮತ್ತೆ ಮೇ ಗಡುವಿನಿಂದ June 12 ಕ್ಕೆ ನಿಗದಿಪಡಿಸಿದೆ.

ಮುಂದಿನ ದಿನಗಳಲ್ಲಿ ಮತ್ತೆ ಸರ್ಕಾರ ದಿನಾಂಕ ವಿಸ್ತರಣೆ ಮಾಡುತ್ತದೆ ಎಂದು ವಾಹನ ಮಾಲೀಕರು ನಿರಾಳರಾಗುವಂತಿಲ್ಲ. ಸರ್ಕಾರ ಮತ್ತೆ ಗಡುವು ವಿಸ್ತರಿಸುವ ಯೋಜನೆ ಹಾಕಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಜೂನ್ 12 ರ ನಂತರ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಜೂನ್ 12 ರ ನಂತರ HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳು ರಸ್ತೆಗಿಳಿದರೆ 1000 ದಂಡ ವಿಧಿಸುವುದಾಗಿ ಸರ್ಕಾರ ಘೋಷಿಸಿದೆ. ಇನ್ನು 3 ದಿನದ ಒಳಗಾಗಿ ಎಲ್ಲ ವಾಹನ ಮಾಲೀಕರು HSRP ಅಳವಡಿಸುವುದು ಕಡ್ಡಾಯವಾಗಿದೆ.

Join Nadunudi News WhatsApp Group

HSRP Number Plate Last Date
Image Credit: Hindustantimes

ಆನ್ಲೈನ್ ನಲ್ಲಿ HSRP ನಂಬರ್ ಪ್ಲೇಟ್ ಬುಕ್ ಮಾಡುವುದು ಹೇಗೆ…?
*https:transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ಬುಕ್ HSRP ಕ್ಲಿಕ್ ಮಾಡಿ.

*ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.

*ವಾಹನದ ಮೂಲ ವಿವರವನ್ನು ಭರ್ತಿ ಮಾಡಬೇಕು.

*ನಿಮಗೆ ಅನುಕೂಲವಾಗುವ ಡೀಲರ್ಸ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.

*ಶುಲ್ಕ ವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

*ನಂತರ ಮಾಲೀಕರ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

*ನಿಮಗೆ ಬೇಕಾದ ದಿನಾಂಕ, ಸ್ಥಳ, ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು.

*ಮಾಲೀಕರು HSRP ಯನ್ನು ಅಂಟಿಸಲು ವಾಹನ ತಯಾರಕರು ಅಥವಾ ಡೀಲರ್ ಗೆ ಭೇಟಿ ನೀಡಬೇಕು.

HSRP Number Plate Latest News
Image Credit: Spinny

Join Nadunudi News WhatsApp Group