HSRP: HSRP ನಂಬರ್ ಪ್ಲೇಟ್ ವಿಷಯವಾಗಿ ಇನ್ನೊಂದು ಘೋಷಣೆ, ನಿಟ್ಟುಸಿರು ಬಿಟ್ಟ ವಾಹನ ಮಾಲೀಕರು

HSRP ನಂಬರ್ ಪ್ಲೇಟ್ ವಿಷಯವಾಗಿ ಇನ್ನೊಂದು ಘೋಷಣೆಗೆ ಮುಂದಾದ ಸರ್ಕಾರ

HSRP Number Plate Latest Update: ಸದ್ಯ ವಾಹನ ಮಾಲೀಕರಿಗೆ HSRP Number Plate ಅಳವಡಿಸುವುದು ಮುಖ್ಯವಾಗಿದೆ. ಸರ್ಕಾರದಿಂದ HSRP ಅಳವಡಿಕೆಯ ಬಗ್ಗೆ ಹೊಸ ಹೊಸ ಅಪ್ಡೇಟ್ ಹೊರ ಬೀಳುತ್ತಲೇ ಇದೆ.

ನಿಗದಿತ ಸಮಯದೊಳಗೆ ನಂಬರ್ ಪ್ಲೇಟ್ ಅಳವಡಿಸುವುದು ಅಗತ್ಯವಾಗಿದೆ. ಸರ್ಕಾರ ನಿಗದಿಪಡಿಸಿದ ಸಮಯದೊಳಗೆ HSRP ಅಳವಡಿಕೆ ಆಗದಿದ್ದರೆ ಸರ್ಕಾರ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಇನ್ನು HSRP ಅಳವಡಿಕೆಗೆ ಕೊನೆಯ ದಿನಾಂಕ ಹತ್ತಿರವಾಗುತ್ತಿರುವ ಕಾರಣ ಸರ್ಕಾರ ದಿನಾಂಕವನ್ನು ವಿಸ್ತರಿಸುತ್ತ..? ಎನ್ನುವ ಬಗ್ಗೆ ಜನರು ಕುತೂಹಲರಾಗಿದ್ದಾರೆ.

HSRP Number Plate Latest Updates
Image Credit: Hindustantimes

HSRP ಅಳವಡಿಕೆಗೆ ಕೊನೆಯ ದಿನಾಂಕವನ್ನ ಸರ್ಕಾರ ವಿಸ್ತರಿಸುತ್ತಾ..?
ಈ ಹಿಂದೆ HSRP ಅಳವಡಿಕೆಗೆ ನವೆಂಬರ್ 17 ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ದೇಶದಲ್ಲಿರುವ ಎಲ್ಲ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಆಗದೆ ಇರುವ ಕಾರಣ ಮತ್ತೆ ಮೂರು ತಿಂಗಳು ಸಮಯಾವಕಾಶವನ್ನು ನೀಡಿ ಫೆಬ್ರವರಿ 17 ಕೊನೆಯ ದಿನಾಂಕವನ್ನು ನಿಗದಿ ಮಾಡಿತ್ತು. ಸದ್ಯ ಇನ್ನೇನು 7 ದಿನಗಳಲ್ಲಿ ಕೊನೆಯ ದಿನಾಂಕ ಮುಗಿಯಲಿದೆ.

ಇನ್ನು ಒಂದು ವಾರದಲ್ಲಿ ಎಲ್ಲರು HSRP ಅಳವಡಿಸುವುದು ಅಗತ್ಯವಾಗಿದೆ. ನೀವು https:transport.karnataka.gov.in ಅಥವಾ www.siam.in ಗೆ ಭೇಟಿ ನೀಡುವ ಮೂಲಕ HSRP Number Plate ಅನ್ನು ಬುಕ್ ಮಾಡಿಕೊಳ್ಳಬಹುದು. ಇನ್ನು ಸಾಕಷ್ಟು ಜನರು ನಂಬರ್ ಪ್ಲೇಟ್ ಅಳವಡಿಸದೇ ಇರುವ ಕಾರಣ ಸರ್ಕಾರಕ್ಕೆ ದಿನಾಂಕ ವಿಸ್ತರಣೆಯ ಬಗ್ಗೆ ಮನವಿ ಮಾಡಲಾಗಿದೆ. ಇನ್ನು ಸರ್ಕಾರ ದಿನಾಂಕವನ್ನ ವಿಸ್ತರಣೆ ಮಾಡುತ್ತಾ..? ಈ ಬಗ್ಗೆ ಸಚಿವರು ಹೇಳುವುದೇನು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

HSRP Number Plate
Image Credit: Hindustantimes

HSRP ದಿನಾಂಕ ವಿಸ್ತರಣೆಯ ಬಗ್ಗೆ ಸಚಿವರು ಹೇಳುವುದೇನು…?

Join Nadunudi News WhatsApp Group

ದೇಶದಲ್ಲಿ 2019 ರ ಹಿಂದಿನ ವರ್ಷದಿಂದ 1.70 ಕೋಟಿ ವಾಹನಗಳು ನೋಂದಣಿಯಾಗಿವೆ. ಇಷ್ಟು ವಾಹನಗಳು ಇನ್ನು ಕೂಡ HSRP ಅಳವಡಿಕೆ ಮಾಡಿಕೊಂಡಿಲ್ಲ. ಕೊನೆಯ ದಿನಾಂಕ ಹತ್ತಿರವಾಗುತ್ತಿರುವ ಕಾರಣ ಈ ರಿಜಿಸ್ಟ್ರೇಷನ್ ಗಳ ಸಂಖ್ಯೆ ಹೆಚ್ಚುತ್ತಿದೆ.

ಈ ಹಿನ್ನಲೆ ರಿಜಿಸ್ಟ್ರೇಷನ್ ಅಪ್ಲೋಡ್ ಮಾಡಲು ಸಮಸ್ಯೆ ಆಗುತ್ತಿದೆ. ಈ ಕಾರಣಕ್ಕೆ ದಿನಾಂಕ ವಿಸ್ತರಣೆಗೆ ಒತ್ತಡ ಹೆಚ್ಚಾಗುತ್ತಿದೆ. ಆದರೆ ಇನ್ನು ಒಂದು ವಾರ ಸಮಯಾವಕಾಶ ಇರುವ ಕಾರಣ ಅಲ್ಲಿಯ ತನಕ ಕಾಯೋಣ ಎಂದು ಸಾರಿಗೆ ಇಲಾಖಾ ಸಚಿವ ರಾಮಲಿಂದ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group