HSRP Penalty: HSRP ನಂಬರ್ ಹಾಕಿಸಿಕೊಳ್ಳದಿದ್ದರೆ ಕಡ್ಡಾಯವಾಗಿ ಕಟ್ಟಬೇಕು ಇಷ್ಟು ದಂಡ, ಸರ್ಕಾರದ ಆದೇಶ.

HSRP ನಂಬರ್ ಹಾಕಿಸಿಕೊಳ್ಳದಿದ್ದರೆ ಕಡ್ಡಾಯವಾಗಿ ಕಟ್ಟಬೇಕು ಇಷ್ಟು ದಂಡ

HSRP Number Plate Penalty: ಸದ್ಯ ವಾಹನ ಮಾಲೀಕರು HSRP Number Plate ಅಳವಡಿಕೆಯ ಬಗ್ಗೆ ಹೆಚ್ಚು ಯೋಚಿಸುತ್ತಿದ್ದಾರೆ. ಕಾರಣ ಸರ್ಕಾರ HSRP ಅಳವಡಿಕೆಯ ಬಗ್ಗೆ ಪದೇ ಪದೇ ಸೂಚನೆಯನ್ನು ನೀಡುತ್ತಾ ಬರುತ್ತಿದೆ. ಇನ್ನು ಸರ್ಕಾರ HSRP ಅಳವಡಿಕೆಗೆ ಈಗಾಗಲೇ ಎರಡು ಬಾರಿ ದಿನಾಂಕವನ್ನು ವಿಸ್ತರಿಸಿದೆ.

ಇದೀಗ ಫೆಬ್ರವರಿಯಿಂದ ಮೇ ತನಕ ವಾಹನ ಮಾಲೀಕರು ತಮ್ಮ ವಾಹನಕ್ಕೆ HSRP ಅಳವಡಿಸಿಕೊಳ್ಳಲು ಸರ್ಕಾರ ಸಮಯಾವಕಾಶವನ್ನು ನೀಡಿದೆ. ಈ ಬಾರಿ ಕೂಡ ವಾಹನ ಮಾಲೀಕರು HSRP ಅಳವಡಿಕೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಂತವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

HSRP Number Plate Penalty
Image Credit: Original Source

ವಾಹನ ಮಾಲೀಕರಿಗೆ ಸಾರಿಗೆ ಇಲಾಖೆಯಿಂದ ಖಡಕ್ ಎಚ್ಚರಿಕೆ
HSRP ನೋಂದಣಿ ಫಲಕಗಳು ಹೆಚ್ಚು ಸುರಕ್ಷಿತವಾಗಿರುತ್ತವೆ ಮತ್ತು ಅವುಗಳನ್ನು ಬದಲಾಯಿಸಲು ಅಥವಾ ತಿದ್ದಲು ಸಾಧ್ಯವಿಲ್ಲ. ವಾಹನಗಳ ಸುರಕ್ಷೆತೆಗೆ ಈ HSRP Number Plate ಹೆಚ್ಚು ಸಹಕಾರಿಯಾಗಲಿದೆ. ನೀವು https:transport.karnataka.gov.in ಅಥವಾ www.siam.in ಗೆ ಭೇಟಿ ನೀಡುವ ಮೂಲಕ HSRP Number Plate ಅನ್ನು ಬುಕ್ ಮಾಡಿಕೊಳ್ಳಬಹುದು.

ದೇಶದಲ್ಲಿ 2019 ರ ಹಿಂದಿನ ವರ್ಷದಿಂದ 1.70 ಕೋಟಿ ವಾಹನಗಳು ನೋಂದಣಿಯಾಗಿವೆ. ಇಷ್ಟು ವಾಹನಗಳು ಇನ್ನು ಕೂಡ HSRP ಅಳವಡಿಕೆ ಮಾಡಿಕೊಂಡಿಲ್ಲ. ವಾಹನ ಮಾಲೀಕರು ಇದರ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸಾರಿಗೆ ಇಲಾಖೆ HSRP Number Plate ಇಲ್ಲದ ವಾಹನಗಳಿಗೆ ಬಾರಿ ದಂಡ ವಿಧಿಸಲು ತೀರ್ಮಾನಿಸಿದೆ. ದಂಡದ ಬಗ್ಗೆ ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದೆ.

HSRP Number Plate New Update
Image Credit: Jagran

HSRP ನಂಬರ್ ಹಾಕಿಸಿಕೊಳ್ಳದಿದ್ದರೆ ಕಡ್ಡಾಯವಾಗಿ ಕಟ್ಟಬೇಕು ಇಷ್ಟು ದಂಡ
HSRP Number Plate ಇಲ್ಲದ ವಾಹನ ಮೊದಲ ಬಾರಿಗೆ ರಸ್ತೆಗಿಳಿದರೆ 1000 ಹಾಗೂ ಎರಡನೇ ಬಾರಿ ರಸ್ತೆಗಿಳಿದರೆ 2000 ಹಾಗೂ ಪದೇ ಪದೇ ಇದೆ ತಪ್ಪಾದರೆ ಇನ್ನು ಹೆಚ್ಚಿನ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ನೀವು Online ನಲ್ಲಿ HSRP Number Plate ಅನ್ನು Order ಮಾಡಿಕೊಳ್ಳಬಹುದಾಗಿದೆ.

Join Nadunudi News WhatsApp Group

ದ್ವಿಚಕ್ರ ವಾಹನಗಳ Number Plate ದರಗಳು ರೂ. 450 ರಿಂದ ರೂ. 600 ರೂ., ನಾಲ್ಕು ಚಕ್ರದ ವಾಹನಗಳಿಗೆ ಒಂದು ಜೋಡಿ HSRP ನಂಬರ್ ಪ್ಲೇಟ್‌ ಗಳ ಶುಲ್ಕ ರೂ. 650 ರಿಂದ ರೂ. 780 ರೂ. ಹಾಗೆಯೆ ಟ್ರಕ್ ಹಾಗೂ ಬಸ್ ಗಳು ಸೇರಿದಂತೆ ಹತ್ತು ಚಕ್ರದ ವಾಹನಗಳಿಗೆ 650 ರಿಂದ 800 ರೂ. ಶುಲ್ಕವನ್ನು ಪಾವತಿ ನಿಮ್ಮ ವಾಹನಕ್ಕೆ ನೀವು HSRP ಅಳವಡಿಸಿಕೊಳ್ಳಬಹುದು. ನೀವು ಇಷ್ಟು ಹಣ ಖರ್ಚು ಮಾಡಿ Number Plate ಅಳವಡಿಸಿಕೊಳ್ಳದೆ ಇದ್ದರೆ ಮುಂದಿನ ದಿನ ಪ್ರತಿ ಬಾರಿ ನಿಮ್ಮ ವಾಹನವನ್ನು ರಸ್ತೆಗಿಳಿಸಿದಾಗ 2000 ರೂ ದಂಡ ಪಾವತಿಸಬೇಕಾಗುತ್ತದೆ.

Join Nadunudi News WhatsApp Group