Law: ಗಂಡ ತೀರಿಕೊಂಡರೆ ಗಂಡನ ಮನೆಯ ಆಸ್ತಿಯಲ್ಲಿ ಹೆಂಡತಿಗೆ ಹೇಗೆ ಪಾಲು ಸಿಗುತ್ತದೆ, ಕಾನೂನು ಹೇಳುವುದೇನು.

ಗಂಡನ ಮನೆಯ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಪಾಲಿದೆ ಮತ್ತು ಅದನ್ನ ಪಡೆಯುವುದು ಹೇಗೆ.

Husband’s Property Rights: ಪ್ರತಿಯೊಬ್ಬರ ಮನೆಯಲ್ಲೂ ಆಸ್ತಿಯ ವಿಚಾರವಾಗಿ ವಿವಾದ ಆಗುವುದು ಸಹಜ. ಸಾಮಾನ್ಯವಾಗಿ ಕುಟುಂಬದಲ್ಲಿ ಆಸ್ತಿಯ ವಿಚಾರವಾಗಿ ಗಲಾಟೆ ಆಗುತ್ತಾ ಇರುತ್ತದೆ. ಇನ್ನು ಹೆಣ್ಣು ಮಕ್ಕಳಿಗೆ ಅಮ್ಮನ ಮನೆಯಲ್ಲಿ ಹೇಗೆ ಆಸ್ತಿಯಲ್ಲಿ ಹಕ್ಕು ಇದೆಯೋ ಅದೇ ರೀತಿ ಗಂಡನ ಮನೆಯಲ್ಲಿ ಸಹ ಹಕ್ಕು ಇರುತ್ತದೆ. ಹೆಣ್ಣು ಮಕ್ಕಳಿಗೆ ಗಂಡನ ಮನೆಯಲ್ಲಿ ಆಸ್ತಿಯ ಹಕ್ಕು ಯಾವಾಗ ಇರುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.

What is the wife's share in the property of the husband's house and how to get it.
Image Credit: hml-law

ಗಂಡನ ಮನೆಯಲ್ಲಿ ಹೆಣ್ಣಿಗೆ ಇರುವ ಆಸ್ತಿಯ ಹಕ್ಕು
ಹೆಣ್ಣು ಮಕ್ಕಳಿಗೆ ಅಮ್ಮನ ಮನೆಯಲ್ಲಿ ತಮ್ಮ ಸಹೋದರರಿಗೆ ಎಷ್ಟು ಪಾಲು ಇದೆಯೋ ಅದೇ ರೀತಿ ಅವರಿಗೆ ಸಹ ಇರುತ್ತದೆ. ಆದರೆ ಗಂಡನ ಮನೆಯ ಆಸ್ತಿಯಲ್ಲಿ ಅದು ಪಿತ್ರಾಜ್ರಿತ ಆಸ್ತಿಯಾಗಿದ್ದರೆ ಹೆಣ್ಣು ಮಕ್ಕಳಿಗೆ ಆ ಆಸ್ತಿಯಲ್ಲಿ ಪಾಲು ಇರುವುದಿಲ್ಲ. ತನ್ನ ಗಂಡನಿಗೆ ಅವರ ಮನೆಯಲ್ಲಿ ಎಷ್ಟು ಪಾಲು ಸಿಗುತ್ತದೆಯೋ ಅಷ್ಟೇ ಆಗಿರುತ್ತದೆ. ಆದರೆ ಗಂಡನೇ ಸ್ವಂತ ಆಸ್ತಿ ಮಾಡಿದ್ದರೆ ಅದು ಹೆಂಡತಿಯ ಹಕ್ಕಾಗಿರುತ್ತದೆ. ಇದರಲ್ಲಿ ಹೆಂಡತಿಗೆ ಸಂಪೂರ್ಣ ಪಾಲಿರುತ್ತದೆ.

ಅತ್ತೆ ಮಾವನ ಆಸ್ತಿಯಲ್ಲಿ ಸೊಸೆಗೆ ಇರುವ ಹಕ್ಕು ಎಷ್ಟು
ಹೆಣ್ಣು ಮಕ್ಕಳಿಗೆ ಗಂಡನ ಮನೆಯಲ್ಲಿ ತಮ್ಮ ಮಾವ ಅಥವಾ ಅತ್ತೆ ಖರೀದಿ ಮಾಡಿದ ಆಸ್ತಿಯಲ್ಲಿ ಯಾವುದೇ ರೀತಿಯಾದ ಹಕ್ಕು ಇರುವುದಿಲ್ಲ. ಗಂಡನಿಗೆ ಮನೆಯಲ್ಲಿ ಎಷ್ಟು ಪಾಲು ಸಿಗುತ್ತದೆಯೋ ಅದು ಹೆಂಡತಿಯದ್ದಾಗಿರುತ್ತದೆ. ಗಂಡನು ಸ್ವಂತ ಆಸ್ತಿ ಮಾಡಿದರೆ ಮಾತ್ರ ಅದು ಅವನ ಹೆಂಡತಿ ಮಕ್ಕಳ ಹಕ್ಕು ಆಗಿರುತ್ತದೆ. ಅಲ್ಲದೆ ಅತ್ತೆ ಮಾವನ ಆಸ್ತಿಯಲ್ಲಿ ಸೊಸೆಗೆ ಯಾವುದೇ ರೀತಿಯಾದ ಹೆಚ್ಚಿನ ಪಾಲು ಇರುವುದಿಲ್ಲ.

See what the law says about the wife's share in the husband's household property
Image Credit: forbes

ತಂದೆ ತಾಯಿಯ ಆಸ್ತಿಯಲ್ಲಿ ಹೆಣ್ಣು ಮಗಳ ಪಾಲು
ಇನ್ನು ತಂದೆ ತಾಯಿಯ ಆಸ್ತಿಯಲ್ಲಿ ಗಂಡು ಮಗನಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಹೆಣ್ಣು ಮಗಳಿಗೆ ಇದೆ. ಈಗಾಗಲೇ ಈ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕೆಲವು ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಸಮನಾದ ಪಾಲು ಕೊಡದೆ ಇರುವುದು ಸಹ ಇತ್ತೀಚಿಗೆ ಬೆಳಕಿಗೆ ಬಂದಿದೆ.

ಹೆಣ್ಣು ಮಕ್ಕಳು ಆಸ್ತಿಯ ವಿಚಾರವಾಗಿ ಕಾನೂನಿನ ಮೊರೆ ಸಹ ಹೋಗಬಹುದು. ಅಂದರೆ ಅವರು ಸಮನಾದ ಪಾಲು ಸಿಗದೇ ಇದ್ದರೆ ಕಾನೂನಿನ ಮುಖಾಂತರ ತೆಗೆದುಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group