Hydrogen Bike: ಇನ್ಮುಂದೆ ಪೆಟ್ರೋಲ್ ಹಾಕುವ ಅಗತ್ಯ ಇಲ್ಲ, ದೇಶದಲ್ಲಿ ಲಾಂಚ್ ಆಯಿತು ಅಗ್ಗದ ಹೈಡ್ರೋಜನ್ ಬೈಕ್

ದೇಶಿಯ ಮಾರುಕಟ್ಟೆಯಲ್ಲಿ ಹೈಡ್ರೋಜನ್ ಚಾಲಿತ ಇ- ಸ್ಕೂಟರ್ ಅನಾವರಣ

Hydrogen Powered e-Scooter Launch: ಈಗಾಗಲೇ ದೇಶದಲ್ಲಿ ತಂತ್ರಜ್ಞಾನಗಳ ಬಳಕೆಯಿಂದಾಗಿ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬಂದಿದೆ. ಕೇಳುಗರಿಗೆ ಅಚ್ಚರಿ ಮೂಡಿಸುವಂತಹ ಆವಿಷ್ಕಾರಗಳು ಬೆಳಕಿಗೆ ಬಂದಿದೆ. ಸಧ್ಯ ಮಾರುಕಟ್ಟೆಯಲ್ಲಿ ಇದೀಗ ನೂತನವು ಪೆಟ್ರೋಲ್, ಎಲೆಕ್ಟ್ರಿಕ್ ಹೊರತಾಗಿ ಹೊಸ ರೀತಿಯ ಇಂಧನ ಚಾಲಿತ ವಾಹನ ಬಿಡುಗಡೆಗೊಳ್ಳಲು ಸಜ್ಜಾಗಿದೆ.

ಹೌದು, ಮಾರುಕಟ್ಟೆಯಲ್ಲಿ ಇನ್ನೇನು ಶೀಘ್ರದಲ್ಲೇ ಹೈಡ್ರೋಜನ್ ಚಾಲಿತ ಇ- ಸ್ಕೂಟರ್ ಮಾರುಕ್ಟ್ಟೆಯನ್ನು ಪ್ರವೇಶಿಸಲಿದೆ. ಇದಕ್ಕಾಗಿ ಕಂಪನಿಯು ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಇದೀಗ ನಾವು ಈ ಲೇಖನದಲ್ಲಿ ಹೊಸ ಆವಿಷ್ಕಾರದೊಂದಿಗೆ ಪರಿಚಯವಾಗಲಿರುವ ನೂತನ ಎಲೆಕ್ಟ್ರಿಕ್ ಸ್ಕೂಟರ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Hydrogen Powered e-Scooter Launch
Image Credit: Drivespark

ದೇಶದಲ್ಲಿ ಹೈಡ್ರೋಜನ್ ಚಾಲಿತ ಇ- ಸ್ಕೂಟರ್ ಅನಾವರಣ
ಸಧ್ಯ ಮಾರುಕಟ್ಟೆಯಲ್ಲಿ Joy e-Bike ನ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾ ಮಾತ್ರ ಸಂಸ್ಥೆಯಾದ Ward Wizard Innovations And Mobility ಇದೀಗ ಮಾರುಕಟ್ಟೆಯಲ್ಲಿ ಹೊಸ ಆವಿಷ್ಕಾರದೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. Bharat Mobility Global Expo 2024 ರಲ್ಲಿ ಈ ನೂತನ ಆವಿಷ್ಕಾರದ ಸ್ಕೂಟರ್ ಅನಾವರಣಗೊಂಡಿದೆ.

ಈ ಹೊಸ ಹೈಡ್ರೋಜನ್ ಇಂಧನ ಸೆಲ್ ಚಾಲಿತ ವಿದ್ಯುತ್ ದ್ವಿಚಕ್ರ ವಾಹನವು ಹೈಡ್ರೋಜನ್ ಇಂಧನ ಕೋಶ ಮತ್ತು ಎಲೆಕ್ಟ್ರೋಲೈಜರ್ ತಂತ್ರಜ್ಞಾನವನ್ನು ಒಳಗೊಂಡಿದೆ. ಪರ್ಯಾಯ ಕೋಶ ರಸಾಯನಶಾಸ್ತ್ರಕ್ಕೆ ಇದು ಪ್ರಮುಖ ಆಧಾರವಾಗಿದೆ. ಈ ಪರಿಕಲ್ಪನೆಯು ನಾವೀನ್ಯತೆಗೆ ಅಚಲವಾದ ಬದ್ಧತೆಯನ್ನು ತೋರಿಸುವ ಒಂದು ಮಾರ್ಗವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

Hydrogen Powered e-Scooter Price
Image Credit: Hindustantimes

ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ
ಹೈಡ್ರೋಜನ್ ತಂತ್ರಜ್ಞಾನವನ್ನು ಸಕ್ರಿಯವಾಗಿ ಮುನ್ನಡೆಸುವುದರಿಂದ ಭಾರತ ಮತ್ತು ಅದರಾಚೆಗಿನ ಸ್ವಚ್ಛ ಮತ್ತು ಪರಿಣಾಮಕಾರಿ ಚಲನಶೀಲತೆಯ ವಲಯವನ್ನು ಮರುರೂಪಿಸುತ್ತದೆ. ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ ಗಳಿಗಿಂತ ಭಿನ್ನವಾಗಿ, ಇದು ಹೈಡ್ರೋಜನ್ ತಂತ್ರಜ್ಞಾನ ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ, ಇದನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ವಾರ್ಡ್ ವಿಝಾರ್ಡ್ ಹೇಳಿದ್ದಾರೆ.

Join Nadunudi News WhatsApp Group

ಕಂಪನಿಯ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ನೀಡಿದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಯತಿನ್ ಗುಪ್ತಾ, “ಜಾಯ್-ಇ-ಬೈಕ್‌ ನಲ್ಲಿ, ಸುರಕ್ಷಿತ ಮತ್ತು ಅನುಕೂಲಕರವಾದ ಎಲೆಕ್ಟ್ರಿಕ್ ಮೊಬಿಲಿಟಿ ಪರಿಹಾರಗಳನ್ನು ಒದಗಿಸುವುದು ನಮ್ಮ ಅಚಲ ಬದ್ಧತೆಯಾಗಿದೆ. ವಿಶ್ವಾಸಾರ್ಹ EV ಸ್ಕೂಟರ್‌ ಗಳಿಗಾಗಿ ಕಂಪನಿಯು ಶ್ರಮಿಸುತ್ತಿದೆ ಇದರಿಂದ ಪ್ರತಿಯೊಬ್ಬರೂ ಎಲೆಕ್ಟ್ರಿಕ್ ವಾಹನಗಳನ್ನು ಅನುಭವಿಸಬಹುದು ಎಂದು ಯತಿನ್ ಗುಪ್ತಾ ಅವರು ಹೇಳಿದರು.

Join Nadunudi News WhatsApp Group