Creta 2024: ರೇಂಜ್ ರೋವರ್ ಸ್ಟೈಲ್ ನಲ್ಲಿ ಮಾರುಕಟ್ಟೆಗೆ ಬಂತು ಕ್ರೆಟಾ 2024 ರ ಮಾದರಿ, ಕಡಿಮೆ ಬೆಲೆ

ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್ ಕೊಡುವ ಹುಂಡೈ ಕ್ರೆಟಾ 2024 ರ ಮಾದರಿ ಲಾಂಚ್

Hyundai Creta Launch In India: Hyundai Motors In India ಟೆಕ್ ವಲಯದಲ್ಲಿ ಹೊಸ ಹೊಸ ಮಾದರಿಯ ಕಾರುಗಳನ್ನು ಪರಿಚಯಿಸುತ್ತಿದೆ. ವಿಭಿನ್ನ ರೂಪಾಂತರದಲ್ಲಿ ವಿಭಿನ್ನ ಬೆಲೆಯೊಂದಿಗೆ ಹುಂಡೈ ತನ್ನ ನೂತನ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಸದ್ಯ 2024 ರ ಹೊಸ ವರ್ಷದಲ್ಲಿ ಇದೀಗ HYUNDAI ತನ್ನ ಬಹುನಿರೀಕ್ಷಿತ Creta ಮಾದರಿಯನ್ನು ಲಾಂಚ್ ಮಾಡಿದೆ. ಅತ್ಯಾಧುನಿಕ ಫೀಚರ್ ನೊಂದಿಗೆ ಬಲಿಷ್ಠ ಎಂಜಿನ್ ಅನ್ನು ಅಳವಡಿಸಿದ್ದು, ಗ್ರಾಹಕರ ಬಜೆಟ್ ಬೆಲೆಯಲ್ಲಿ ಲಭ್ಯವಾಗುವಂತಹ ಮಾದರಿಯನ್ನು ಹುಂಡೈ ಇದೀಗ ಮಾರುಕಟ್ಟೆಗೆ ಪರಿಚಯಿಸಿದೆ.

hyundai creta 2024 feature and price
Image Credit: Original Source

ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಟ್ಟಿದೆ ಹುಂಡೈ ಕ್ರೆಟಾ
ಮಾರುಕಟ್ಟೆಯಲ್ಲಿ Hyundai Creta ಮಾದರಿಯು E, EX, S, S(O), SX, SX Tech , ಮತ್ತು SX(O) ನ ರೂಪಾಂತರಗಳಲಿ ಲಭ್ಯವಿದೆ. ಕಂಪನಿಯು Creta Booking ಅನ್ನು ಕೂಡ ಆರಂಭಿಸಿದೆ. ಹತ್ತಿರದ ಡೀಲರ್ ಶಿಪ್ ನಲ್ಲಿ ಅಥವಾ ಆನ್ಲೈನ್ ನಲ್ಲಿ 25000 ರೂ. ಗಳ ಮುಂಗಡ ಪಾವತಿಯ ಮೂಲಕ ಕ್ರೆಟಾ ಮಾದರಿಯನ್ನು ತಮ್ಮದಾಗಿಸಿಕೊಳ್ಳಬಹುದು.

ರೊಬಸ್ಟ್ ಎಮರಾಲ್ಡ್ ಪರ್ಲ್ , ಫಿಯರಿ ರೆಡ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಮತ್ತು 1 ಡ್ಯುಯಲ್-ಟೋನ್ ಬಣ್ಣದ ಆಯ್ಕೆಯಲ್ಲಿ ನೀವು ಕ್ರೆಟಾ ಮಾದರಿಯನ್ನು ಖರೀದಿಸಬಹುದು. ಹೊಸ ಹ್ಯುಂಡೈ CRETA ಹೊಸ ರೇಡಿಯೇಟರ್ ಗ್ರಿಲ್ ಮತ್ತು ನೇರವಾದ ಹುಡ್ ವಿನ್ಯಾಸದೊಂದಿಗೆ ಬರುತ್ತದೆ. ಹೊಸ ಹೊರೈಜನ್ ಎಲ್ಇಡಿ ಪೊಸಿಷನಿಂಗ್ ಲ್ಯಾಂಪ್, ಕ್ವಾಡ್ ಬೀಮ್ ಎಲ್ಇಡಿ ಹೆಡ್ ಲ್ಯಾಂಪ್, ಸುಧಾರಿತ ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಜನರನ್ನು ಹೆಚ್ಚು ಆಕರ್ಷಿಸಲಿದೆ.

hyundai creta 2024 model features
Image Credit: Original Source

2024 ರಲ್ಲಿ ಹೊಸ ಕಾರ್ ಖರೀದಿಸುವವರಿಗೆ ಇದು ಬೆಸ್ಟ್ ಆಯ್ಕೆ
ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಡಿಜಿಟಲ್ ಕ್ಲಸ್ಟರ್‌, ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ವೈಶಿಷ್ಟ್ಯವನ್ನು ನೀವು ಕ್ರೆಟಾ ಮಾದರಿಯಲ್ಲಿ ನೋಡಬಹುದು. ಇದು 1.5l ಕಪ್ಪಾ ಟರ್ಬೊ GDi ಪೆಟ್ರೋಲ್, 1.5l MPi ಪೆಟ್ರೋಲ್ ಮತ್ತು 1.5l U2 CRDi ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ.

Join Nadunudi News WhatsApp Group

ಇನ್ನು ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿರುವ ಕ್ರೆಟಾ ಮಾದರಿಯು ಪ್ರತಿ ಲೀಟರ್ ಗೆ 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಹುಂಡೈ CRETA 6-ಸ್ಪೀಡ್ ಮ್ಯಾನುವಲ್, IVT (Intelligent Variable Transmission), 7-ಸ್ಪೀಡ್ DCT (Dual clutch transmission) ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್ ಸೇರಿದಂತೆ ನಾಲ್ಕು ಟ್ರಾನ್ಸ್‌ ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುವುದು. ಮಾರುಕಟ್ಟೆಯಲ್ಲಿ ಹುಂಡೈ ಕ್ರೇಟಾ ಸರಿಸುಮಾರು 11 ರಿಂದ 17.24 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group