Creta 2024: ಹೊಸ ಲುಕ್, ಭರ್ಜರಿ ಮೈಲೇಜ್ ಮತ್ತು ಕಡಿಮೆ ಬೆಲೆ, 2024 ರ ವಿಶೇಷ ಫೀಚರ್ ಇರುವ ಕ್ರೆಟಾ ಕಾರ್ ಬುಕಿಂಗ್ ಆರಂಭ.

ಹೊಸ ಲುಕ್ ನಲ್ಲಿ ಬಂದಿರುವ ಹುಂಡೈ ಕ್ರೆಟಾ ಕಾರಿಗೆ ಜನರು ಫಿದಾ, ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್

Hyundai Creta 2024 Model: ಇನ್ನು ಹೊಸ ವರ್ಷದ ಶುಭಾರಂಭಕ್ಕೆ ವಿವಿಧ ಕಾರ್ ತಯಾರಕ ಕಂಪನಿಗಳು ತನ್ನ ಹೊಸ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲಿವೆ. ನೀವು ಹೊಸ ವರ್ಷಕ್ಕೆ ಹೊಸ ಕಾರ್ ಅನ್ನು ಖರೀದಿಸುವ ಯೋಜನೆಯನ್ನು ಹಾಕಿದ್ದರೆ ನಿಮ್ಮ ಕಾರ್ ಖರೀದಿಯ ಯೋಜನೆಗೆ ಇದೀಗ Hyundai ಕಂಪನಿಯ ಕಾರ್ ಉತ್ತಮ ಆಯ್ಕೆಯಾಗಬಹುದು.

ಈಗಾಗಲೇ ಮಾರುಕಟ್ಟೆಯಲ್ಲಿ HYUNDAI ಕಂಪನಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ವಿವಿಧ ಮಾದರಿಯ ಪೆಟ್ರೋಲ್, CNG , Electric ನ ಹಲವಾರು ಮಾದರಿಗಳನ್ನು ಹುಂಡೈ ಕಂಪನಿ ಬಿಡುಗಡೆ ಮಾಡಿದೆ. ಇನ್ನು ಮಾರುಕಟ್ಟೆಯಲ್ಲಿ ಹುಂಡೈ ಕಂಪನಿಯ Creta Car ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಸದ್ಯ ಕಂಪನಿಯು ತನ್ನ ಕ್ರೆಟಾ ಮಾದರಿಯನ್ನು 2024 ರಲ್ಲಿ ಪರಿಚಯಿಸಲಿದೆ.

Hyundai Creta 2024
Image Credit: Gaadiwaadi

ಹೊಸ ಲುಕ್, ಭರ್ಜರಿ ಮೈಲೇಜ್ ಮತ್ತು ಕಡಿಮೆ ಬೆಲೆ
ಹುಂಡೈ Creta ಕಾರ್ ಇದೀಗ ಮಾರುಕಟ್ಟೆಯಲ್ಲಿ ಬಾರಿ ಸದ್ದು ಮಾಡುತ್ತಿದೆ. ಕಂಪನಿಯು Hyundai creta Booking ಅನ್ನು ಕೂಡ ಆರಂಭಿಸಿದೆ. ಭಾರತದಲ್ಲಿ ಲಭ್ಯವಿರುವ ಯಾವುದೇ ಡೀಲರ್ ಶಿಪ್ ನಲ್ಲಿ 2,50,000 ರೂ. ಮುಂಗಡ ಪಾವತಿ ಮಾಡುವ ಮೂಲಕ ಕ್ರೆಟಾ ಮಾದ್ರಿಯನ್ನು ನಿಮ್ಮದಾಗಿಸಿಕೊಳ್ಳಬಹುದು. ಕಂಪನಿಯು ತನ್ನ ಕ್ರೆಟಾ ಮಾದರಿಯನ್ನು 7 ರೂಪಾಂತರದಲ್ಲಿ ಪರಿಚಯಿಸಲು ನಿರ್ಧರಿಸಿದೆ.

ರೊಬಸ್ಟ್ ಎಮರಾಲ್ಡ್ ಪರ್ಲ್ (ಹೊಸ), ಫಿಯರಿ ರೆಡ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಮತ್ತು 1 ಡ್ಯುಯಲ್-ಟೋನ್ ಬಣ್ಣದ ಆಯ್ಕೆಯಲ್ಲಿ ನೀವು ಕ್ರೆಟಾ ಮಾದರಿಯನ್ನು ಖರೀದಿಸಬಹುದು. ಹೊಸ ಹ್ಯುಂಡೈ CRETA ಹೊಸ ರೇಡಿಯೇಟರ್ ಗ್ರಿಲ್ ಮತ್ತು ನೇರವಾದ ಹುಡ್ ವಿನ್ಯಾಸದೊಂದಿಗೆ ಬರುತ್ತದೆ. ಹೊಸ ಹೊರೈಜನ್ ಎಲ್ಇಡಿ ಪೊಸಿಷನಿಂಗ್ ಲ್ಯಾಂಪ್, ಕ್ವಾಡ್ ಬೀಮ್ ಎಲ್ಇಡಿ ಹೆಡ್ ಲ್ಯಾಂಪ್, ಸುಧಾರಿತ ಹೈಟೆಕ್ ವೈಶಿಷ್ಟ್ಯಗಳೊಂದಿಗೆ ಜನರನ್ನು ಹೆಚ್ಚು ಆಕರ್ಷಿಸಲಿದೆ.

Hyundai Creta 2024 Price In India
Image Credit: Nextbigwhat

2024 ರ ವಿಶೇಷ ಫೀಚರ್ ಇರುವ ಕ್ರೆಟಾ ಕಾರ್ ಬುಕಿಂಗ್ ಆರಂಭ
ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಡಿಜಿಟಲ್ ಕ್ಲಸ್ಟರ್‌ ವೈಶಿಷ್ಟ್ಯವನ್ನು ನೀವು ಕ್ರೆಟಾ ಮಾದರಿಯಲ್ಲಿ ನೋಡಬಹುದು. ಇದು 1.5l ಕಪ್ಪಾ ಟರ್ಬೊ GDi ಪೆಟ್ರೋಲ್, 1.5l MPi ಪೆಟ್ರೋಲ್ ಮತ್ತು 1.5l U2 CRDi ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇನ್ನು ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿರುವ ಕ್ರೆಟಾ ಮಾದರಿಯು ಪ್ರತಿ ಲೀಟರ್ ಗೆ 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಹೊಸ ಹುಂಡೈ CRETA 6-ಸ್ಪೀಡ್ ಮ್ಯಾನುವಲ್, IVT (ಇಂಟೆಲಿಜೆಂಟ್ ವೇರಿಯಬಲ್ ಟ್ರಾನ್ಸ್‌ಮಿಷನ್), 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್) ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್ ಸೇರಿದಂತೆ ನಾಲ್ಕು ಟ್ರಾನ್ಸ್‌ ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುವುದು. ಮಾರುಕಟ್ಟೆಯಲ್ಲಿ ಹುಂಡೈ ಕ್ರೇಟಾ ಸರಿಸುಮಾರು 10 ರಿಂದ 19 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group