Creta Ev: ಟಾಟಾ ಎಲೆಕ್ಟ್ರಿಕ್ ಕಾರುಗಳಿಗೆ ಠಕ್ಕರ್ ನೀಡಲು ಬಂತು ಹ್ಯುಂಡೈ ಕ್ರೆಟಾ EV, ಭರ್ಜರಿ 500Km ಮೈಲೇಜ್.

ಭರ್ಜರಿ 500 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಹ್ಯುಂಡೈ ಕ್ರೆಟಾ EV

Hyundai Creta Electric: ಪ್ರಸ್ತುತ ಮಾರುಕಟ್ಟೆಯಲ್ಲಿ HYUNDAI ಕಂಪನಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ವಿವಿಧ ಮಾದರಿಯ ಪೆಟ್ರೋಲ್, CNG, Electric ನ ಹಲವಾರು ಮಾದರಿಗಳನ್ನು ಹುಂಡೈ ಕಂಪನಿ ಬಿಡುಗಡೆ ಮಾಡಿದೆ. ಇನ್ನು ಮಾರುಕಟ್ಟೆಯಲ್ಲಿ ಹುಂಡೈ ಕಂಪನಿಯ Creta Car ಬಗ್ಗೆ ಎಲ್ಲರಿಗು ತಿಳಿದೇ ಇದೆ.

ಸದ್ಯ ಕಂಪನಿಯು ತನ್ನ ಕ್ರೆಟಾ ಮಾದರಿಯನ್ನು ಎಲೆಕ್ಟ್ರಿಕ್ ವರ್ಷನ್ ನಲ್ಲಿ ಪರಿಚಯಿಸಲು ಯೋಜನೆ ಹೂಡಿದೆ. ಅತ್ಯಾಧುನಿಕ ಫೀಚರ್ ಇರುವ Hyundai Creta Electric ಆವೃತ್ತಿಯನ್ನು ಪರಿಚಯಿಸಲು ಕಂಪನಿ ಸಿದ್ಧತೆ ನಡೆಸುತ್ತಿದೆ.

Hyundai Creta Electric Car
Image Credit: Rushlane

ಎಲೆಕ್ಟ್ರಿಕ್ ಮಾದರಿಗಳಿಗೆ ಠಕ್ಕರ್ ನೀಡಲು ಬಂತು ಹ್ಯುಂಡೈ ಕ್ರೆಟಾ EV
ಜನವರಿ 2024 ರಲ್ಲಿ ಹುಂಡೈ ಕಂಪನಿಯು ಭಾರತದಲ್ಲಿ ಕ್ರೆಟಾದ ಫೇಸ್‌ ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಿದೆ. ಸುಮಾರು 3 ತಿಂಗಳೊಳಗೆ, 1 ಲಕ್ಷಕ್ಕೂ ಹೆಚ್ಚು ಕ್ರೆಟಾ ಯುನಿಟ್‌ ಗಳನ್ನು ಬುಕ್ ಮಾಡಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೆಟಾ ಮಾದರಿಯನ್ನು ಖರೀದಿಸಿದ್ದಾರೆ. ಕ್ರೆಟಾ ಫೇಸ್‌ ಲಿಫ್ಟ್ ಅನ್ನು ಆಧರಿಸಿರುತ್ತದೆ. Creta EV ಪರೀಕ್ಷೆ ಪ್ರಾರಂಭವಾಗಿದ್ದು ಹಲವು ವಿವರಗಳನ್ನೂ ಬಹಿರಂಗಪಡಿಸಲಾಗಿದೆ. ಒಳಭಾಗದಲ್ಲಿ ಟ್ವಿನ್ ಡಿಸ್ಪ್ಲೇ ಸೆಟಪ್ ಸ್ಟೀರಿಂಗ್ ಮೌಂಟೆಡ್ ಡ್ರೈವರ್ ಸೆಲೆಕ್ಟರ್ ನಂತಹ ಅನೇಕ ಫೀಚರ್ ಗಳನ್ನೂ ಅಳವಡಿಸಲಾಗಿದೆ.

ಭರ್ಜರಿ 500Km ಮೈಲೇಜ್ ನೀಡುತ್ತೆ ಈ EV
ಇನ್ನು Hyundai Creta Electric ಮಾರುಕಟ್ಟೆಯಲ್ಲಿ ಮೈಲೇಜ್ ವಿಚಾರವಾಗಿ ಇನ್ನುಳಿದ ಎಲೆಕ್ಟ್ರಿಕ್ ಮಾದರಿಯನ್ನು ಹಿಂದ್ದಿಕ್ಕಲಿದೆ. ಒಂದು ಬಾರಿ ಚಾರ್ಜ್ ಮಾಡಿದ ನಂತರ, ಈ ಎಲೆಕ್ಟ್ರಿಕ್ ವಾಹನವು 500 ಕಿಲೋಮೀಟರ್‌ ಗಳಿಗಿಂತ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ. ನೀವು ಯಾವುದೇ ತೊಂದರೆ ಇಲ್ಲದೆ ದೂರದ ಪ್ರಯಾಣವನ್ನು ಮಾಡಬಹುದು.

ಭಾರತದಲ್ಲಿ ಇದರ ಬೆಲೆ 11 ಲಕ್ಷದಿಂದ 20 ಲಕ್ಷದಲ್ಲಿ ಇರಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕ್ರೆಟಾ ಇವಿ ಬಿಡುಗಡೆಯಾದ ನಂತರ, ಇದು ನೆಕ್ಸಾನ್ ಎಲೆಕ್ಟ್ರಿಕ್ (ನೆಕ್ಸಾನ್ ಇವಿ) ಮತ್ತು ಮಹೀಂದ್ರಾ ಎಕ್ಸ್‌ಯುವಿ 400 ಗೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ. ಇನ್ನು 2024 ರಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರ್ ಗಳ ಪಟ್ಟಿಯಲ್ಲಿ Hyundai Creta Electric ಕೂಡ ಸೇರಿಕೊಳ್ಳಲಿದೆ.

Join Nadunudi News WhatsApp Group

Hyundai Creta Electric Car Price
Image Credit: News24

Join Nadunudi News WhatsApp Group