Creta Electric: ಸಿಂಗಲ್ ಚಾರ್ಜ್ ನಲ್ಲಿ 500 Km ರೇಂಜ್, ಕ್ರೇಟಾ ಎಲೆಕ್ಟ್ರಿಕ್ ವರ್ಷನ್ ಕಂಡು ಕಾರ್ ಪ್ರಿಯರು ಫುಲ್ ಖುಷ್

ಸದ್ಯ ಎಲೆಕ್ಟ್ರಿಕ್ ಮಾದರಿಯ ಕಾರ್ ಗಳಿಗೆ ಠಕ್ಕರ್ ನೀಡಲು ರೆಡಿಯಾಗುತ್ತಿದೆ ಹ್ಯುಂಡೈ ಹೊಸ EV

Hyundai Creta Electric: ಸದ್ಯ ಭಾರತೀಯ ಆಟೋ ವಲಯದಲ್ಲಿ Electric car ಗಳು ಪಾರುಪತ್ಯ ಸಾಧಿಸುತ್ತಿದೆ. ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆಯ ಏರಿಕೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಗೆ ನೇರ ಕಾರಣವಾಗುತ್ತಿದೆ. ಹಲವು ವಾಹನ ತಯಾರಕ ಕಂಪನಿಗಳು ಹಲವು ಬಗೆಯ ಎಲೆಕ್ಟ್ರಿಕ್ ಕರುಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ ಎಂದು ಹೇಳಬಹುದು.

ಜನರು ತಮ್ಮ ಇಂಧನದ ಖರ್ಚನ್ನು ಉಳಿಸುವ ಸಲುವಾಗಿ ಎಲೆಕ್ಟ್ರಿಕ್ ವಾಹನಗಳವನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ರೂಪಾಂತರವನ್ನೇ ಹೆಚ್ಚಾಗಿ ಪರಿಚಯುತ್ತಿದೆ.

Hyundai Creta Electric
Image Credit: Rushlane

ಸದ್ಯ ಎಲೆಕ್ಟ್ರಿಕ್ ಮಾದರಿಯ ಕಾರ್ ಗಳಿಗೆ ಠಕ್ಕರ್ ನೀಡಲು ರೆಡಿಯಾಗುತ್ತಿದೆ ಹ್ಯುಂಡೈ ಹೊಸ EV
ಈಗಾಗಲೇ ಮಾರುಕಟ್ಟೆಯಲ್ಲಿ HYUNDAI ಕಂಪನಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ವಿವಿಧ ಮಾದರಿಯ ಪೆಟ್ರೋಲ್, CNG , Electric ನ ಹಲವಾರು ಮಾದರಿಗಳನ್ನು ಹುಂಡೈ ಕಂಪನಿ ಬಿಡುಗಡೆ ಮಾಡಿದೆ. ಇನ್ನು ಮಾರುಕಟ್ಟೆಯಲ್ಲಿ ಹುಂಡೈ ಕಂಪನಿಯ Creta Car ಬಗ್ಗೆ ಎಲ್ಲರಿಗು ತಿಳಿದೇ ಇದೆ.

ಸದ್ಯ ಕಂಪನಿಯು ತನ್ನ ಕ್ರೆಟಾ ಮಾದರಿಯನ್ನು ಎಲೆಕ್ಟ್ರಿಕ್ ವರ್ಷನ್ ನಲ್ಲಿ ಪರಿಚಯಿಸಲು ಯೋಜನೆ ಹೂಡಿದೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ದೊರಕಿದೆ. ಕಂಪನಿಯಿಂದ Creta Electric ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ Hyundai ಕಂಪನಿಯ Kona Electric ಮತ್ತು Ionic 5 Electric ಮಾದರಿಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದಂತೆ ಕಂಪನಿ ಇದೀಗ Creta Electric ಆವೃತ್ತಿಯನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.

Hyundai Creta Electric Price
Image Credit: Original Source

ಭರ್ಜರಿ 500km ಮೈಲೇಜ್ ನೀಡಲಿದೆ Creta EV
ಹೊಸ EV ಕಾರಿನ ಉತ್ಪಾದನಾ ಪ್ರಕ್ರಿಯೆ ಮತ್ತು ಟೆಸ್ಟಿಂಗ್  ಪ್ರಕ್ರಿಯೆಗಳು ಆರಂಭಿಕ ಹಂತದಲ್ಲಿದೆ ಎನ್ನುವ ಸುಳಿವು ನೀಡಿವೆ.  ಇದು ಹೆಚ್ಚಿನ ಮಟ್ಟದ ಸ್ಥಳೀಕರಣದೊಂದಿಗೆ ಆಕರ್ಷಕ ಬೆಲೆಯಲ್ಲಿ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ ಎನ್ನಲಾಗುತ್ತಿದೆ. 2025 ರ ವೇಳೆಗೆ Hyundai ತನ್ನ ಇನ್ನೊಂದು ಎಲೆಕ್ಟ್ರಿಕ್ ಮಾದರಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಹೊಸ ಕ್ರೆಟಾ EV ಕಾರು ಮಾದರಿಯು ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಪ್ರತಿ ಚಾರ್ಜ್‌ ಗೆ ಗರಿಷ್ಠ 450 ರಿಂದ 500 ಕಿಮೀ ಮೈಲೇಜ್ ನೀಡುವ ಬ್ಯಾಟರಿ ಪ್ಯಾಕ್ ಅನ್ನು ಪಡೆಯಲಿದೆ.

Join Nadunudi News WhatsApp Group

Join Nadunudi News WhatsApp Group