Creta 2024: ಹೊಸ ಕಾರ್ ಖರೀದಿಸುವ ಯೋಜನೆ ಉಂಟಾ…? ಹಾಗಾದರೆ ಸ್ವಲ್ಪ ನಿಲ್ಲಿ, ಹುಂಡೈ ಕ್ರೆಟಾ ಕಡೆಯಿಂದ ಬರಲಿದೆ ಗುಡ್ ನ್ಯೂಸ್

ಮಾರುಕಟ್ಟೆಗೆ ಹೊಸ ಅವತಾರದಲ್ಲಿ ಬರಲು ಸಿದ್ದವಾದ ಹುಂಡೈ ಕ್ರೆಟಾ

Hyundai Creta Facelift: ದೇಶದಲ್ಲಿ ಹಲವು ಕಾರು ತಯಾರಕ ಕಂಪೆನಿಗಳಿದ್ದು ಅದರಲ್ಲಿ ಹ್ಯುಂಡೈ (Hyundai) ಕೂಡ ಒಂದಾಗಿದೆ. ಹ್ಯುಂಡೈ ಕಂಪನಿಯ ಕಾರುಗಳಿಗೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇದ್ದು, 2024 ರ ಹೊಸ ವರ್ಷವನ್ನು ಹ್ಯುಂಡೈ ಕಂಪನಿ ಹೊಸ ವಿಶೇಶತೆಯೊಂದಿಗೆ ಆಚರಿಸಿದೆ. ಹ್ಯುಂಡೈ ಕಂಪನಿಯ ನೆಚ್ಚಿನ ಕಾರು ಮಾದರಿಯಾದ ಕ್ರೇಟಾದ ಫೇಸ್‌ಲಿಫ್ಟ್‌ ಭಾರತದಲ್ಲಿ ಲಾಂಚ್‌ ಆಗಿದ್ದು, ಇದು ಎದುರಾಳಿ ಕಂಪನಿಗಳಿಗೆ ಮತ್ತೊಂದು ಶಾಕ್‌ ನೀಡಿದೆ.

ಮಾಹಿತಿಗಳ ಪ್ರಕಾರ ಹ್ಯುಂಡೈ ಕಂಪನಿಯು ತನ್ನ ಹೊಸ ಕ್ರೇಟಾ ಕಾರಿನ ಎನ್‌ಲೈನ್‌ (Hyundai Creta N Line) ಮಾದರಿಯನ್ನು ಮಾರುಕಟ್ಟೆಗೆ ತರುವತ್ತ ಯೋಜನೆ ರೂಪಿಸುತ್ತಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ, ಎನ್‌ಲೈನ್ ಮಾದರಿಗೆ i20 ಮತ್ತು ವೆನ್ಯೂ ಅನ್ನು ಸೇರಿಸಿದ್ದು ಈಗ ಆ ಸಾಲಿಗೆ ಮೊನ್ನೆಯಷ್ಟೇ ಲಾಂಚ್ ಆಗಿರುವ ಕ್ರೇಟಾ ಫೇಸ್‌ಲಿಫ್ಟ್‌ ಅನ್ನು ಸಹ ಸೇರಿಸುತ್ತಿದ್ದ ತನ್ನ ಎನ್‌ಲೈನ್‌ ಲೈನ್‌ಅಪ್‌ ಅನ್ನು ವಿಸ್ತರಿಸುತ್ತಿದೆ.

Hyundai Creta Facelift
Image Credit: Team BHP

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್‌ ಕಾರಿನ ವಿನ್ಯಾಸ ಹಾಗು ವಿಶೇಶತೆ

ಹೊಸ ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್‌ 2024 ರ ಎಸ್‌ಯುವಿಯಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಕಾರಿನ ಒಳಭಾಗವು ಸಮಗ್ರವಾದ ಮರುವಿನ್ಯಾಸಕ್ಕೆ ಒಳಗಾಗಿದೆ, ಡ್ಯುಯಲ್ ಇಂಟಿಗ್ರೇಟೆಡ್ 10.25-ಇಂಚಿನ ಡಿಸ್ಪ್ಲೇಗಳನ್ನು ಒಳಗೊಂಡಿದೆ, ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್‌ ಗಾಗಿ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಗಾಗಿ ನೀಡಲಾಗಿದೆ.

ಪ್ರಯಾಣಿಕರ ಬದಿಯ ಡ್ಯಾಶ್‌ಬೋರ್ಡ್‌ನ ಮೇಲಿನ ಈಗ ಪಿಯಾನೋ ಬ್ಲಾಕ್ ಪ್ಯಾನಲ್ ನೀಡಲಾಗಿದೆ. ಈ ಕಾರು ಇ, ಇಎಕ್ಸ್, ಎಸ್, ಎಸ್(ಒ), ಎಸ್‌ಎಕ್ಸ್ ಟೆಕ್, ಎಸ್‌ಎಕ್ಸ್(ಒ) ರೂಪಾಂತರಗಳು (Variants), ರೇಂಜರ್ ಖಾಕಿ, ಅಬಿಸ್ ಬ್ಲಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಸೇರಿದಂತೆ 6-ಮೊನೊಟೋನ್, 1-ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.

Join Nadunudi News WhatsApp Group

Hyundai Creta Facelift Price In India
Image Credit: Team BHP

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್‌ ಕಾರಿನ ಎಂಜಿನ್‌ ಹಾಗು ಇತರೆ

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್‌ ಕಾರಿನ ಎಂಜಿನ್‌ ಮತ್ತು ಪರ್ಫಾಮೆನ್ಸ್‌ ಬಗ್ಗೆ ತಿಳಿಯುವುದಾದರೆ ಇದರಲ್ಲಿ 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 PS ಪವರ್ ಹಾಗೂ 144 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನುವಲ್/ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಮತ್ತೊಂದು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 160 PS ಗರಿಷ್ಠ ಪವರ್, 253 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 7-ಸ್ವೀಡ್ ಡಿಸಿಟಿ ಗೇರ್ ಬಾಕ್ಸ್ ಒಳಗೊಂಡಿದೆ. ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್, ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಸೆಳೆಯುವಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

Join Nadunudi News WhatsApp Group