Hyundai Staria: 8 ಆಸನಗಳ ಹುಂಡೈ ಕಾರಿಗೆ ಜನರು ಫಿದಾ, ಕಡಿಮೆ ಬೆಲೆ 13 ಕಿಲೋಮೀಟರ್ ಮೈಲೇಜ್

ಹೈಬ್ರಿಡ್ ಎಂಜಿನ್ ಹೊಂದಿರುವ Staria ಮಾದರಿಯ ಮಾರುಕಟ್ಟೆ ಬೆಲೆ ಎಷ್ಟಿದೆ...?

Hyundai Staria 2024: ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ MPV ಗಳಿಗೆ ಹೆಚ್ಚಿನ ಬೇಡಿಕೆ ಇದೆ. ವಿವಿಧ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ HYUNDAI ಕಂಪನಿಯು ಇದೀಗ ನೂತವಾಗಿ ಹೊಸ MPV ಯನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಈ ನೂತನ MPV ಹೊಸ ರೀತಿಯ ಕ್ರಾಂತಿ ಸೃಷ್ಟಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು. ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಈ ನೂತನ MPV ಬಗ್ಗೆ ಮಾಹಿತಿ ತಿಳಿಯೋಣ.

Hyundai Staria 2024
Image Credit: Eniyiteklif

Hyundai Staria 2024
ಇದೀಗ ಹುಂಡೈ ಕಂಪನಿಯು Hyundai Staria 2024 ಮಾದರಿಯನ್ನು ಬಿಡುಗಡೆ ಮಾಡಿದೆ. ದಕ್ಷಿಣ ಕೊರಿಯಾದಲ್ಲಿ ಈ ಮಾದರಿಯು ಬಿಡುಗಡೆಯಾಗಿದೆ. ಹ್ಯುಂಡೈ 2024 ಸ್ಟಾರಿಯಾ ಮಾದರಿಯು 5.3 ಮೀ. ಉದ್ದ, ಇದು 3.5 ಲೀಟರ್ V6 ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇನ್ನು ಹುಂಡೈ ಸ್ಟಾರಿಯಾ’ ಕಿಯಾ ಕಾರ್ನಿವಲ್‌ ಗೆ ಪ್ರತಿರೂಪವಾಗಿದೆ, ಇದು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

ಹೈಬ್ರಿಡ್ ಎಂಜಿನ್ ಹೊಂದಿರುವ Staria ಮಾದರಿಯ ಮಾರುಕಟ್ಟೆ ಬೆಲೆ ಎಷ್ಟಿದೆ…?
•Staria ಹೈಬ್ರಿಡ್ ಕಾರ್ಗೋ ಬೆಲೆಯು 3-ಆಸನಗಳಿಗೆ KRW 34,330,000 (ಅಂದಾಜು. ರೂ. 21.33 ಲಕ್ಷ) ಆಗಿದೆ.

•5-ಆಸನಗಳಿಗೆ KRW 35,130,000 (ಅಂದಾಜು ರೂ. 21.83 ಲಕ್ಷ) ದಿಂದ ಪ್ರಾರಂಭವಾಗುತ್ತದೆ.

Join Nadunudi News WhatsApp Group

•Staria Tourer ಹೈಬ್ರಿಡ್ 9-ಆಸನಗಳು ಮತ್ತು 11-ಆಸನಗಳ ಬೆಲೆಗಳು KRW 36,530,000 (ಅಂದಾಜು. ರೂ. 22.7 ಲಕ್ಷ) ದಿಂದ ಪ್ರಾರಂಭವಾಗುತ್ತವೆ.

•ಹುಂಡೈ ಸ್ಟಾರಿಯಾ ಲೌಂಜ್ ಹೈಬ್ರಿಡ್ ಪ್ರೆಸ್ಟೀಜ್ 9 – ಸೀಟರ್ MPV KRW 41,100,000 (ಅಂದಾಜು ರೂ. 25.54 ಲಕ್ಷ) ನಲ್ಲಿ ಪ್ರಾರಂಭವಾಗುತ್ತದೆ.

•ಇನ್ಸ್ಪಿರಿರೇಷನ್ 7 – ಆಸನದ ಬೆಲೆ KRW 46,140,000 (ಸುಮಾರು 28.7 ಲಕ್ಷ ರೂ.) ಆಗಿದೆ.

Hyundai Staria Price And Mileage
Image Credit: Drive

ಹ್ಯುಂಡೈ 2024 ಸ್ಟಾರಿಯಾ ಮೈಲೇಜ್
Hyundai Staria 2024 ಟಾಪ್-ಸ್ಪೆಕ್ ಇನ್ಸ್ಪಿರೇಷನ್ 7-ಸೀಟರ್ ವಿಐಪಿಗಳಲ್ಲಿ ಬಹಳ ಜನಪ್ರಿಯವಾಗಿದೆ. ಇದು ಕಾರವಾನ್ ಆವೃತ್ತಿಯನ್ನು ಸಹ ಹೊಂದಿದೆ. ಹೊಸ ಹುಂಡೈ ಸ್ಟಾರಿಯಾ 13 kmpl ಮೈಲೇಜ್ ನೀಡುತ್ತದೆ ಮತ್ತು 2.5 ಟನ್ ತೂಕದ ವಾಹನವಾಗಿದೆ. ಹುಂಡೈ ಸ್ಟಾರಿಯಾ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇಲ್ಲ. ಏಕೆಂದರೆ ಕಿಯಾ ಇಂಡಿಯಾ ಈ ಟರ್ಬೊ-ಪೆಟ್ರೋಲ್ ಹೈಬ್ರಿಡ್ ಪವರ್‌ಟ್ರೇನ್ ಅನ್ನು 4 ನೇ ಜನ್ ಕಾರ್ನಿವಲ್ ಫೇಸ್‌ಲಿಫ್ಟ್‌ನೊಂದಿಗೆ ಭಾರತಕ್ಕೆ ತರುವ ಸಾಧ್ಯತೆಯಿದೆ.

Join Nadunudi News WhatsApp Group