Hyundai v/s Maruti: ಹುಂಡೈ ವೆನ್ಯೂ ಮತ್ತು ಮಾರುತಿ ಬ್ರೆಜಾ ಇವೆರಡರಲ್ಲಿ ಯಾವುದು ಬೆಸ್ಟ್…? ಬೆಲೆಯಲ್ಲಿ ಏನು ವ್ಯತ್ಯಾಸ…?

ಹುಂಡೈ ವೆನ್ಯೂ ಮತ್ತು ಮಾರುತಿ ಬ್ರೆಝಾ ಮಾದರಿಯ ಮಾರುಕಟ್ಟೆ ಬೆಲೆ ಎಷ್ಟು..?

Hyundai Venue v /s Maruti Suzuki Brezza: ಸದ್ಯ ಮಾರುಕಟ್ಟೆಯಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿರುವ ಕಾರ್ ಗಳು ಸಾಕಷ್ಟು ಪರಿಚಯವಾಗುತ್ತಿದೆ. ಗ್ರಾಹಕರು ಹೆಚ್ಚಾಗಿ ಹೆಚ್ಚಿನ ಸುರಕ್ಷತಾ ಫೀಚರ್ ಇರುವ ಕಾರ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಸುರಕ್ಷತಾ ಫೀಚರ್ ನ ಜೊತೆಗೆ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಬೇಡಿಕೆ ಹೆಚ್ಚಿರುತ್ತದೆ.

hyundai venue and brezza
Image Credit: Original Source

Hyundai Venue v /s Maruti Suzuki Brezza
ಸದ್ಯ ಮಾರುಕಟ್ಟೆಯಲ್ಲಿ Hyundai ಮತ್ತು Maruti ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಎರಡು ಕಂಪನಿಗಳು ತನ್ನ ಹೊಸ ಹೊಸ ರೂಪಾಂತರಗಳನ್ನು ಹೆಚ್ಚಿನ ಸುರಕ್ಷತಾ ಫೀಚರ್ ಗಳೊಂದಿಗೆ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿವೆ. ಇದೀಗ ನಾವು ಮಾರುಕಟ್ಟೆಯಲ್ಲಿ ಲಭ್ಯವಿರುವ Hyundai Venue ಮತ್ತು Maruti Suzuki Brezza ಮಾದರಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Hyundai Venue ಮತ್ತು Brezza ರೂಪಾಂತರಗಳು
Hyundai Venue ಮಾದರಿಯಲ್ಲಿ SX DT ಮತ್ತು SX Knight DT ಅನ್ನು ಆಯ್ಕೆ ನೋಡಬಹುದು. ಇವುಗಳು 4 ಏರ್‌ ಬ್ಯಾಗ್‌ ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸಂವೇದಕಗಳು, ವೇಗ ಎಚ್ಚರಿಕೆ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ ಸ್ಥಿರತೆಯ ನಿಯಂತ್ರಣವನ್ನು ನೀಡುತ್ತವೆ.

Brezza ಗಾಗಿ, Zxi ಮತ್ತು Vxi AT ಗಳು ಡ್ಯುಯಲ್ ಏರ್‌ ಬ್ಯಾಗ್‌ ಗಳು, ABS, ಹಿಂದಿನ ಸಂವೇದಕಗಳು, ವೇಗ ಎಚ್ಚರಿಕೆ ವ್ಯವಸ್ಥೆ ಮತ್ತು ISOFIX ಆಂಕರ್‌ ಫೀಚರ್ ಅನ್ನು ನೋಡಬಹುದು. Zxi DT ಹಿಂದಿನ ಸೀಟ್ ಬೆಲ್ಟ್‌ ಗಳಲ್ಲಿ ಸುಧಾರಿಸುತ್ತದೆ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ಚಕ್ರವನ್ನು ಪಡೆಯುತ್ತದೆ.

hyundai venue and brezza difference
Image Credit: Original Source

ಹುಂಡೈ ವೆನ್ಯೂ ಮತ್ತು ಮಾರುತಿ ಬ್ರೆಝಾ ಮಾದರಿಯ ಮಾರುಕಟ್ಟೆ ಬೆಲೆ ಎಷ್ಟು..?
ಹುಂಡೈ ವೆನ್ಯೂ SX ನೈಟ್ DT ಹೆಚ್ಚಿನ ಸುರಕ್ಷಿತ ಫೀಚರ್ ಅನ್ನು ಒಳಗೊಂಡಿದೆ. ಮಾರುಕಟ್ಟೆಯಲ್ಲಿ Hyundai Venue ಮಾದರಿಯ ಬೆಲೆ 11.48 ಲಕ್ಷ ಆಗಿದೆ. ಈ ಮಾದರಿಯು ಸೈಡ್ ಮತ್ತು ಕರ್ಟನ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ ಗಳು ಸೇರಿದಂತೆ 6 ಏರ್‌ ಬ್ಯಾಗ್‌ ಗಳಂತಹ ಸೆಗ್ಮೆಂಟ್ ಲೀಡಿಂಗ್ ಸುರಕ್ಷತಾ ತಂತ್ರಜ್ಞಾನವನ್ನು ಒದಗಿಸುತ್ತದೆ.

Join Nadunudi News WhatsApp Group

ಮಾರುತಿ ಬ್ರೆಝಾ ಮಾದರಿಯು 4 ಏರ್‌ ಬ್ಯಾಗ್‌ ಗಳು, ABS ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳೊಂದಿಗೆ ಸುರಕ್ಷಿತ ಆಯ್ಕೆಗಳನ್ನು ಹೊಂದಿವೆ. ಮಾರುಕಟ್ಟೆಯಲ್ಲಿ Maruti Suzuki Brezza ಮಾದರಿಯು ಸರಿಸುಮಾರು 8.29 ಲಕ್ಷದಿಂದ 13.98 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ಮಾರುಕಟ್ಟೆಯಲ್ಲಿ ಹುಂಡೈ ವೆನ್ಯೂ ಮತ್ತು ಮಾರುತಿ ಬ್ರೆಝಾ ಮಾದರಿಯ ನಡುವೆ ಬಾರಿ ಪೈಪೋಟಿ ನಡೆಯುತ್ತಿದೆ.

Join Nadunudi News WhatsApp Group