Salary Details: IAS, IPS, IFS ಅಧಿಕಾರಿಗಳ ಮಾಸಿಕ ವೇತನ ಎಷ್ಟಿರುತ್ತದೆ ಗೊತ್ತಾ..? ಭರ್ಜರಿ ಸಂಬಳ.

IAS, IP ,IFS ಅಧಿಕಾರಿಗಳ ಮಾಸಿಕ ವೇತನ ಎಷ್ಟಿರುತ್ತದೆ...?

IAS, IPS, IFS Officers Monthly Salary: ಸಾಮಾನ್ಯವಾಗಿ ಎಲ್ಲರು ಕೂಡ ಒಳ್ಳೆಯ ಉದ್ಯೋಗವನ್ನು ಪಡೆದುಕೊಳ್ಳಬೇಕು ಎನ್ನುವ ಗುರಿಯನ್ನು ಹೊಂದಿರುತ್ತಾರೆ. ಹೀಗಾಗಿ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಏಕಾಗ್ರತೆ ನೀಡಿ ಮುಂದಿನ ಭವಿಷ್ಯದ ಕನಸು ಕಾಣುತ್ತಾರೆ.

ಸಾಕಷ್ಟು ಜನರು ಡಾಕ್ಟರ್ ಎಂಜಿನಿಯರ್, ಪೊಲೀಸ್ ಹೀಗೆ ಅನೇಕ ಉತ್ತಮ ಸ್ಥಾನದ ಉದ್ಯೋಗವು ಪಡೆಯಬೇಕೆನ್ನುವ ಗುರಿಯನ್ನು ಹೊಂದಿರುತ್ತಾರೆ. ಹೆಚ್ಚಿನ ಜನರು ದೇಶಸೇವೆ ಮಾಡಲು ಬಯಸುತ್ತಾರೆ. ಹೀಗಾಗಿ ಪೊಲೀಸ್ ಅಧಿಕಾರಿಯಾಗಿ ದೇಶದಲ್ಲಿ ಅಕ್ರಮವನ್ನು ತಡೆಯುವ ಉದ್ದೇಶ ಹೆಚ್ಚಿನ ಜನರಲ್ಲಿರುತ್ತದೆ.

IAS, IPS, IFS Officers Monthly Salary
Image Credit: TV9hindi

IAS, IPS, IFS ಅಧಿಕಾರಿಗಳ ಮಾಸಿಕ ವೇತನ ಎಷ್ಟಿರುತ್ತದೆ ಗೊತ್ತಾ..?
ಇನ್ನು IAS, IPS,IFS ಮಾಡುವುದು ಸುಲಭದ ಮಾತಲ್ಲ. ಅದಕ್ಕಾಗಿ ಸಾಕಷ್ಟು ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಎಲ್ಲ ರೀತಿಯ ಪರೀಕ್ಷೆಯಲ್ಲಿ ಯಶಸ್ಸು ಕಂಡಾಗ ಮಾತ್ರ IAS , IPS ,IFS ಹುದ್ದೆಗಳ ಅಧಿಕಾರವನ್ನು ಪಡೆಯಲು ಸಾಧ್ಯವಾಗುತ್ತದೆ. ಇನ್ನು IAS , IPS ,IFS ಅಧಿಕಾರಿಯಾಗಲು ಎಷ್ಟು ಕಷ್ಟಪಡಬೇಕೋ ಅದೇ ರೀತಿ IAS, IPS ,IFS ಅಧಿಕಾರಿಗಳಿಗೆ ನೀಡಲಾಗುವ ಮಾಸಿಕ ಸಂಬಳ ಕೂಡ ಭರ್ಜರಿಯಾಗಿಯೇ ಇರುತ್ತದೆ. ಇದೀಗ IAS, IPS, IFS ಅಧಿಕಾರಿಗಳ ಮಾಸಿಕ ವೇತನ ಎಷ್ಟಿರುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

IAS, IPS, IFS ಅಧಿಕಾರಿಗಳ ಮಾಸಿಕ ವೇತನದ ಮಾಹಿತಿ
IAS (Indian Administrative Service) ಅಧಿಕಾರಿಗಳ ಮಾಸಿಕ ವೇತನ
ಆರಂಭದ ಮಾಸಿಕ ವೇತನ ರೂ. 56,100 ದಿಂದ ಗರಿಷ್ಠ ವೇತನ ರೂ. 2,50,000 ವರೆಗೆ IAS ಅಧಿಕಾರಿಗಳು ಮಾಸಿಕ ವೇತನವನ್ನು ಪಡೆಯುತ್ತಾರೆ.

IAS, IPS, IFS Officers Salary
Image Credit: Quora

IPS (Indian Police Service) ಅಧಿಕಾರಿಗಳ ಮಾಸಿಕ ವೇತನ
ಆರಂಭದ ಮಾಸಿಕ ವೇತನ ರೂ. 56,100 ದಿಂದ ಗರಿಷ್ಠ ವೇತನ ರೂ. 2,25,000 ವರೆಗೆ IPS ಅಧಿಕಾರಿಗಳು ಮಾಸಿಕ ವೇತನವನ್ನು ಪಡೆಯುತ್ತಾರೆ.

Join Nadunudi News WhatsApp Group

IFS (Indian Forest Service) ಅಧಿಕಾರಿಗಳ ಮಾಸಿಕ ವೇತನ
ಆರಂಭದ ಮಾಸಿಕ ವೇತನ ರೂ. 15,600 ರಿಂದ 39,100 ಆಗಿದ್ದು, ಗರಿಷ್ಠ ವೇತನ ರೂ. 90000 ವರೆಗೆ IFS ಅಧಿಕಾರಿಗಳು ಮಾಸಿಕ ವೇತನವನ್ನು ಪಡೆಯುತ್ತಾರೆ.

Join Nadunudi News WhatsApp Group